ತುಮಕೂರು ಬಾಟಾ ಷೋರೂಂಗೆ ಬೆಂಕಿ :ಕೋಟ್ಯಂತರ ರು. ಪಾದುಕೆ ಭಸ್ಮ
ತುಮಕೂರು : ಇಲ್ಲಿನ ಬಿ.ಎಚ್. ರಸ್ತೆಯಲ್ಲಿರುವ ಎರಡು ಅಂತಸ್ತುಗಳ ಬೃಹತ್ ಬಾಟಾ ಷೋರೂಂಗೆ ಭಾನುವಾರ ಮಧ್ನಾಹ್ನ ಬೆಂಕಿ ಬಿದ್ದು , ಕೋಟ್ಯಂತರ ರುಪಾಯಿ ಪಾದುಕೆಗಳು ಸುಟ್ಟು ಭಸ್ಮವಾಗಿವೆ. ಮಧ್ನಾಹ್ನ 3.30ರಲ್ಲಿ ಕಾಣಿಸಿಕೊಂಡ ಬೆಂಕಿ ರೌದ್ರಾವತಾರತಾಳಿ ಇಡಿ ಕಟ್ಟಡವನ್ನೇ ಸುಟ್ಟು ಕರಕಲಾಗಿಸಿದೆ.
ಸಿಬ್ಬಂದಿ ಹಾಗೂ ಇಂಧನದ ಕೊರತೆಯಿಂದಾಗಿ ಅಗ್ನಿಶಾಮಕ ಪಡೆ ಬಿರುಸಿನ ಕಾರ್ಯಾಚರಣೆಗಿಳಿಯಲು ಮೂರು ಗಂಟೆಗಳ ಕಾಲ ಬೇಕಾಯಿತು. ಅಷ್ಟು ಹೊತ್ತಿಗಾಗಲೇ ಇಡೀ ಮಳಿಗೆ ಬೆಂಕಿಗಾಹುತಿಯಾಗಿತ್ತು. ಭಾನುವಾರ ಮಧ್ನಾಹ್ನ ಅಂಗಡಿ ಬಾಗಿಲು ಹಾಕುವ ಸಲುವಾಗಿ ವಿದ್ಯುತ್ ಸ್ವಿಚ್ ಆರಿಸಿದಾಗ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಕಾಣಿಸಿಕೊಂಡಿತು.
ಷೋರೂಂ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಕಾಳ್ಗಿಚ್ಚಿನಂತೆ ಆವರಿಸಿದ ಬೆಂಕಿ ಚಪ್ಪಲಿ ಅಂಗಡಿಯ ಎಲ್ಲ 12 ಮಳಿಗೆಗಳೂ ವ್ಯಾಪಿಸಿ ಭಾರಿ ನಷ್ಟ ಉಂಟು ಮಾಡಿತು. ತುಮಕೂರಿನ ಈ ಮಳಿಗೆ ದೇಶದಲ್ಲೇ ಅತಿದೊಡ್ಡ ಶೂ ಷೋರೂಂ ಎಂಬ ಖ್ಯಾತಿಗೆ ಪಾತ್ರವಾಗಿತ್ತು.
ಅಣ್ಣೆಗೌಡ ನೇತೃತ್ವದ ಅಗ್ನಿಶಾಮಕ ಪಡೆ ಅವಿರತ ಹೋರಾಟ ನಡೆಸಿ ಬೆಂಕಿಯನ್ನು ಆರಿಸುವಹೊತ್ತಿಗೆ ಕಾಲ ಮಿಂಚಿತ್ತು. ಬೆಂಕಿ ಆರಿಸುವ ಯತ್ನದಲ್ಲಿ ಸಾರ್ವಜನಿಕರು ಅಗ್ನಿಶಾಮಕ ಪಡೆಗೆ ನೆರವಾಗಲು ನುಗ್ಗಿ ಅನಗತ್ಯ ಗೊಂದಲ ಉಂಟು ಮಾಡಿದ್ದೂ, ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯುಂಟುಮಾಡಿತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications