ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ವೈಚಿತ್ರ್ಯಗಳ ಅರ್ಥೈಸಲು ನಾಸಾದಿಂದ ಮಾಯಾ ಕನ್ನಡಿ

By Staff
|
Google Oneindia Kannada News

ಬೆಂಗಳೂರು : ಅಮೆರಿಕದ ರಾಷ್ಟ್ರೀಯ ವೈಮಾನಿಕ ಶಾಸ್ತ್ರ ಹಾಗೂ ಬಾಹ್ಯಾಕಾಶ ಆಡಳಿತ (ನಾಸಾ) ಅತ್ಯಾಧುನಿಕ ಬಾಹ್ಯಾಕಾಶ ಟೆಲಿಸ್ಕೋಪ್‌ ರೂಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ‘ಮುಂದಿನ ಜನಾಂಗದ ಬಾಹ್ಯಾಕಾಶ ಟೆಲಿಸ್ಕೋಪ್‌’(ಎನ್‌ಜಿಎಸ್‌ಟಿ) ಎಂದು ಕರೆಯಲಾಗಿರುವ ಈ ಟೆಲಿಸ್ಕೋಪ್‌ ಶೋಧನೆಯಿಂದ ನಕ್ಷತ್ರ ಹಾಗೂ ನಕ್ಷತ್ರಪುಂಜಗಳ ಅಧ್ಯಯನ ಸರಳವಾಗುತ್ತದೆ ಎನ್ನಲಾಗಿದೆ.

ಬಾಹ್ಯಾಕಾಶ ಟೆಲಿಸ್ಕೋಪ್‌ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಸ್ಟೀವನ್‌ ಬೆಕ್‌ವಿತ್‌ ಅವರು ಈ ವಿಷಯವನ್ನು ಪಿಟಿಐಗೆ ತಿಳಿಸಿದ್ದಾರೆ. 2007-09 ನೇ ಇಸವಿಯ ಸುಮಾರಿಗೆ ನೂತನ ಟೆಲಿಸ್ಕೋಪ್‌ ಎನ್‌ಜಿಎಸ್‌ಟಿ ಅಳವಡಿಕೆ ಸಾಧ್ಯವಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಎನ್‌ಜಿಎಸ್‌ಟಿಯ ಪ್ರಮುಖ ವೈಜ್ಞಾನಿಕ ಗುರಿಗಳನ್ನು ಈಗಾಗಲೇ ಶೋಧಿಸಲಾಗಿದ್ದು, ನಕ್ಷತ್ರ ಹಾಗೂ ಗ್ಯಾಲಕ್ಸಿಗಳ ರಚನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಗ್ಯಾಲಕ್ಸಿಗಳ ಉಗಮ ಹಾಗೂ ವಿಕಾಸ, ಮಿಲ್ಕಿವೇ ಹಾಗೂ ಅವುಗಳ ಸಹವರ್ತಿಗಳ ಇತಿಹಾಸ, ನಕ್ಷತ್ರಗಳ ಹುಟ್ಟು ಹಾಗೂ ವಿಕಾಸ ಇತ್ಯಾದಿ ಬಾಹ್ಯಾಕಾಶ ವೈಚಿತ್ರ್ಯಗಳನ್ನು ಅರ್ಥೈಸಿಕೊಳ್ಳಲು ಎನ್‌ಜಿಎಸ್‌ಟಿ ಸಹಾಯ ಮಾಡುತ್ತದೆಂದು ಬೆಕ್‌ವಿತ್‌ ಹೇಳಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X