‘ನಾಗಾರ್ಜುನ ಸ್ಥಾವರದಿಂದ ರಾಜ್ಯಕ್ಕೆ 50 ಸಾವಿರ ಕೋಟಿ ರೂ.ನಷ್ಟ’
ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಈಗ ಸುದ್ದಿ ಮಾಡುತ್ತಿರುವುದು ನಾಗಾರ್ಜುನ ಶಾಖೋತ್ಪನ್ನ ಕೇಂದ್ರ. ಕೊಜೆಂಟ್ರಿಕ್ಸ್ ಜೊತೆಗೇ ಜಿಲ್ಲೆಗೆ ಬಂದಿದ್ದ ನಾಗಾರ್ಜುನ ಸ್ಥಾವರ ಸದ್ದಿಲ್ಲದೆ ತನ್ನ ಕೆಲಸಗಳನ್ನು ನಿರ್ವಹಿಸುತ್ತಲೇ ಬಂದಿತ್ತು. 1000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದ್ದಿದ ಕೊಜೆಂಟ್ರಿಕ್ಸ್‌ನ್ನು ವಿರೋಧಿಸುವ ಭರದಲ್ಲಿ ಪರಿಸರವಾದಿಗಳು 1015 ಮೆಗಾವ್ಯಾಟ್ ಸಾಮರ್ಥ್ಯದ ನಾಗಾರ್ಜುನ ತಲೆಯೆತ್ತುತ್ತಿರುವುದನ್ನು ಅಷ್ಟಾಗಿ ಗಮನಿಸಲೇ ಇಲ್ಲ.
ಕೊಜೆಂಟ್ರಿಕ್ಸ್ ವಿರುದ್ಧ ಪರಿಸರವಾದಿಗಳ ಹೋರಾಟ ನಡೆಯುತ್ತಿರುವಾಗ ನಾಗಾರ್ಜುನ ಸ್ಥಾವರದ ಅಧಿಕಾರಿಗಳು ಪ್ರಾದೇಶಿಕ ಸಂಸ್ಕೃತಿ ರಕ್ಷಣಾ ಶಿಬಿರಗಳನ್ನು, ವಿಚಾರಸಂಕಿರಣಗಳನ್ನು ಆಯೋಜಿಸಿ ಜಿಲ್ಲೆಯ ಚಿಂತಕರು ಮತ್ತು ಪರಿಸರವಾದಿ ಸಾಹಿತಿಗಳಿಂದಲೇ ಭಾಷಣಗಳನ್ನು ಮಾಡಿಸಿದರು.
ಕೊಜೆಂಟ್ರಿಕ್ಸ್ ತೆರಳಿದ ನಂತರ ವಿಜಯೋತ್ಸವದಲ್ಲಿದ್ದ ಪರಿಸರವಾದಿಗಳ ಕೈಗೆ ಕುದುರೆಮುಖ ಕಂಪೆನಿಯ ಗುತ್ತಿಗೆ ವಿಸ್ತರಣೆ ವಿರೋಧಿ ಆಂದೋಲನ ಕೈಗೆ ಸಿಕ್ಕಿತು. ಇವುಗಳ ನಡುವೆ ಯಾವುದೇ ಪ್ರಚಾರ, ಮಹತ್ವದ ವಿವಾದಗಳಿಗೆ ತುತ್ತಾಗದೇ ನಾಗಾರ್ಜುನ ಬೆಳೆಯುತ್ತಿತ್ತು. ಸ್ಥಾವರಕ್ಕಾಗಿ ಭೂಸ್ವಾಧೀನ ಕಾರ್ಯ ನಡೆಯುವಾಗ ಸಹಜವಾಗಿ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತಷ್ಟೇ.
ನಾಗಾರ್ಜುನ ವಿರೋಧಿಸುವ ಮಾತು ಬೆಂಗಳೂರಿನಲ್ಲಿ ...
ಈಗ ನಾಗಾರ್ಜುನ ವಿರೋಧಿಸುವ ಮಾತು ಮತ್ತೆ ಕೇಳಿ ಬಂದಿದೆ. ಅದು ಬೆಂಗಳೂರಿನಲ್ಲಿ. 1015 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಖರೀದಿ ಮಾಡಿದಲ್ಲಿ ಮೂವತ್ತು ವರ್ಷ ಅವಧಿಯಲ್ಲಿ ರಾಜ್ಯಕ್ಕೆ 50 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅರ್ಥ ಶಾಸ್ತ್ರಜ್ಞ ಅರುಣ್ ಕುಮಾರ್ ಅಗರವಾಲ್ ಹೇಳಿದ್ದಾರೆ.
ಅಗರ್‌ವಾಲ್ ಪ್ರಕಾರ ರಸಗೊಬ್ಬರ ಸಬ್ಸಿಡಿ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ನಾಗಾರ್ಜುನ ಕಂಪೆನಿ ಈ ಯೋಜನೆಯನ್ನು ಜಯಪ್ರಕಾಶ್ ಇಂಡಸ್ಟ್ರೀಸ್‌ನಿಂದ ಪಡಕೊಂಡು ಹಿಂಬಾಗಿಲಿನಿಂದ ಪ್ರವೇಶ ಮಾಡಿದೆ. ಪ್ರತಿ ಡಾಲರ್‌ಗೆ 42 ರೂಪಾಯಿಗಳಂತೆ ಲೆಕ್ಕ ತೋರಿಸಿ ಶೇ 70ಕ್ಕೂ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆ ಆಧಾರದ ಮೇಲೆ ಯೋಜನೆಗೆ ಸರಕಾರದಿಂದ ಅನುಮೋದನೆ ಪಡಕೊಂಡಿದೆ.
ಆದರೆ ಈಗಾಗಲೇ ಡಾಲರ್ ಬೆಲೆ 47ರಿಂದ 48 ರುಪಾಯಿವರೆಗಿದೆ. ಮೂವತ್ತು ವರ್ಷಗಳ ಅವಧಿಯಲ್ಲಿ ಇದು 100 ರೂಪಾಯಿಗೆ ತಲುಪಿದರೂ ಅಚ್ಚರಿಯಿಲ್ಲ. ಇದರಿಂದ ಕೇವಲ 30 ವರ್ಷ ಆಯುಸ್ಸಿನ ಕಂಪೆನಿಗಾಗಿ ರಾಜ್ಯ ಸುಮಾರು 50 ಸಾವಿರ ಕೋಟಿ ರೂಪಾಯಿ ನಷ್ಟ ಎದುರಿಸಬೇಕಾಗುತ್ತದೆ.
ಅಗರ್‌ವಾಲ್ ವಾದವನ್ನು ಪರಿಸರವಾದಿಗಳು ಅಷ್ಟೇನೂ ತಲೆಗೆ ಹಚ್ಚಿಕೊಂಡಂತೆ ಕಾಣುತ್ತಿಲ್ಲ. ದಕ್ಷಿಣ ಕನ್ನಡ ಪರಿಸರವಾದಿಗಳು ಕುದುರೆಮುಖದ ತುಂಗಾ ಮೂಲ ಉಳಿಸಿ ಆಂದೋಲನದಲ್ಲಿ ವ್ಯಸ್ತರಾಗಿರುವಂತಿದೆ. ಯಾಕೆಂದರೆ ಆ ಚಳುವಳಿಯ ನೇತಾರ ಪ್ರಖ್ಯಾತ ಸಾಹಿತಿ ಯು.ಆರ್. ಅನಂತ ಮೂರ್ತಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications