ಮದುವೆಯ ನಂತರ ಮದುಮಗಳು ತವರಿಗೆ, ಹುಡುಗ ಮರಳಿ ಜೈಲಿಗೆ!
ಬೆಳಗಾವಿ : ಇಲ್ಲಿನ ಕೇಂದ್ರ ಕಾರಾಗೃಹ ಕ್ಷಣಕಾಲ ಕಲ್ಯಾಣ ಮಂಟಪವಾಗಿ ಬದಲಾಗುವ ಮುಹೂರ್ತವನ್ನು ಒದಗಿಸಿದ್ದು ಸೆಪ್ಟಂಬರ್ 1 ರ ಶನಿವಾರ! ರೇವಪ್ಪ ಬಸರಗಿ ಹಾಗೂ ಶಾಂತಮ್ಮ ಹಾರ ಬದಲಿಸಿಕೊಂಡು ಸತಿಪತಿಗಳಾದ ಘಟನೆಗೆ ಕಾರಾಗೃಹದ ಸಿಬ್ಬಂದಿ ವರ್ಗ ಸಾಕ್ಷ್ಯ ಒದಗಿಸಿದ್ದರು. ಮಂತ್ರಗಳಿಗಿಂತ ಮನಸ್ಸುಗಳಿಗೇ ಅಲ್ಲಿ ಅಗ್ರಸ್ಥಾನ.
ಗೃಹಸ್ಥಾಶ್ರಮ ಪ್ರವೇಶಿಸಿದ ರೇವಪ್ಪ ಬಸರಗಿ ಕೇಂದ್ರ ಕಾರಾಗೃಹದಲ್ಲಿನ ಖೈದಿ. ಖೈದಿಯಾದರೇನು, ಭಾವನೆಗಳಿಗೇನು ಬರವೇ? ಪ್ರೇಮಕ್ಕೆ ಸರಳುಗಳು ಅಡ್ಡಿಯಾದಾವೇ? ರೇವಪ್ಪನನ್ನು ಮದುವೆಯಾಗಲು ಶಾಂತಮ್ಮ ಒಪ್ಪಿಕೊಂಡಳು. ಶಾಂತಮ್ಮ ರೇವಪ್ಪನಿಗೆ ಮೆಚ್ಚುಗೆಯಾದಳು. ರೇವಪ್ಪ ಕಾರಾಗೃಹದಿಂದ ಹೊರಬರುವಂತಿಲ್ಲವಾದ್ದರಿಂದ ವಧು ವರರ ಕಲ್ಯಾಣಕ್ಕೆ ಕಾರಾಗೃಹವೇ ವೇದಿಕೆಯಾಯಿತು. ಮದುವೆಯ ವಿಷಯವನ್ನು ಕಾರಾಗೃಹದ ಎಸ್ಪಿ ಪಿ.ಎಂ. ವೆಂಕಟರಾಯಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೇವಪ್ಪ ಕಳೆದ ಐದು ವರ್ಷಗಳಿಂದ ಜೈಲುವಾಸಿ. ಮಾತ್ರವಲ್ಲ ಅನಾಥ ಕೂಡ. ರೇವಪ್ಪನ ಮದುವೆಯಾಗಿರುವ ಶಾಂತಮ್ಮ ಕೂಡ ಅನಾಥೆಯೇ. ಅನಾಥರಿಬ್ಬರು ಮದುವೆಯಾಗುವ ಮೂಲಕ ಜೊತೆಯಾಗಿದ್ದಾರೆ. ಅಂದಹಾಗೆ, ಶನಿವಾರ ನಡೆದ ಮದುವೆಯನ್ನು ಕೋರ್ಟ್ ಕೂಡ ಒಪ್ಪಿಕೊಂಡಿದೆ.
ಇಬ್ಬರು ಅನಾಥರ ಮದುವೆಯೇನೋ ಆಯಿತು. ಅಂದಮಾತ್ರಕ್ಕೆ ಹೊಸ ಬಾಳು ಶುರುವಾಯಿತು ಎಂದೇನಲ್ಲ . ಮದುವೆ ಜರುಗಿದ ನಂತರ ರೇವಪ್ಪ ಮತ್ತೆ ಸರಳುಗಳ ಹಿಂದೆ ತೆರಳಿದ. ಶಾಂತಮ್ಮ ಕುತ್ತಿಗೆಯಲ್ಲಿ ಮಾಂಗಲ್ಯ, ಕೈಯ್ಯಲ್ಲಿ ಮದರಂಗಿ ಹೊತ್ತು ಮರಳಿ ತನ್ನ ಹಳ್ಳಿಗೆ ತೆರಳಿದಳು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications