Get Updates
Get notified of breaking news, exclusive insights, and must-see stories!

ಅಯೋಧ್ಯೆಯ ಮಸೀದಿ ಅವಶೇಷಗಳಡಿ 12 ನೇ ಶತಮಾನದ ಶಾಸನ

ಪಾಟ್ನಾ : ಅಯೋಧ್ಯೆಯಲ್ಲಿ ಕೆಡವಿದ ಬಾಬರಿ ಮಸೀದಿಯ ಅವಶೇಷಗಳಡಿಯಲ್ಲಿ 12 ನೇ ಶತಮಾನದ ಶಾಸನವೊಂದು ಪತ್ತೆಯಾಗಿದ್ದು, ರಾಮಜನ್ಮಭೂಮಿ ಯಾರಿಗೆ ಸೇರಬೇಕು ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವಲ್ಲಿ ಈ ಶಿಲೆ ಮಹತ್ವದ ಪಾತ್ರ ವಹಿಸುತ್ತದೆಂದು ನಿರೀಕ್ಷಿಸಲಾಗಿದೆ.

ದೊರೆತಿರುವ ಶಾಸನದಲ್ಲಿ 20 ಸಾಲುಗಳ 30 ಸಂಸ್ಕೃತ ಶ್ಲೋಕಗಳಿವೆ. ಈ ಶಾಸನದ ಕಲ್ಲು ಭಗ್ನಗೊಂಡ ಬಾಬರಿ ಮಸೀದಿಯ ಗೋಡೆಯ ಕೆಳಭಾಗದಲ್ಲಿ ಪತ್ತೆಯಾಗಿದೆ. ಆದರೂ ರಾಮಜನ್ಮ ಭೂಮಿಯ ಸಮಸ್ಯೆ ಬಗೆಹರಿಸಲು ಸಂಘ ಪರಿವಾರದವರ ಕುತಂತ್ರ ಈ ಶಾಸನ ಎಂದೂ ಹೇಳಲಾಗಿದೆ.

ಈ ಶಾಸನವು ಸಮಸ್ಯೆಗೆ ಮಂಗಳ ಹಾಡಲಿದೆ ಎಂದು ತೀವ್ರವಾಗಿ ವಾದಿಸುತ್ತಿರುವ ಆಚಾರ್ಯ ಕಿಶೋರ್‌ ಕುನಾಲ್‌ ಇತ್ತೀಚೆಗೆ ಐಪಿಎಸ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಡರ್ಬಾಂಗ್‌ನ ಕಾಮೇಶ್ವರ್‌ ಸಿಂಘ್‌ ಸಂಸ್ಕೃತ ವಿಶ್ವ ವಿದ್ಯಾಲಯ ಉಪಕುಲಪತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕುಮನಾಲ್‌ ಪ್ರಕಾರ ಈ ಶಾಸನದ ವಿವರಗಳನ್ನು ಯುನೆಸ್ಕೋದಂತಹ ಸಂಸ್ಥೆಗಳು ಅಧಿಕಾರಯುತವಾಗಿ ನೀಡಬಹುದು.

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠದ ಆದೇಶದ ಮೇರೆಗೆ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾದ ಈ ಶಾಸನದ ಕಲ್ಲು ತುಂಡು ತುಂಡಾಗಿದೆ. ಈವರೆಗೆ ಈ ಶಾಸನದ ಅವಶೇಷಗಳನ್ನು ಕೋರ್ಟ್‌ ಸೀಲ್‌ ರಾಮಕಥಾ ಕುಂಜ್‌ನಲ್ಲಿ ಇಟ್ಟಿತ್ತು. ರಾಮಕಥಾ ಕುಂಜ್‌ ಬಾಬರಿ ಮಸೀದಿ ಕೆಡವುದಕ್ಕೆ ಮೊದಲು ವಿಶ್ವ ಹಿಂದೂ ಪರಿಷತ್‌ ಕಾರ್ಯಾಲಯವಾಗಿದ್ದು ಪ್ರಸ್ತುತ ಸರಕಾರದ ಅಧೀನದಲ್ಲಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+