Get Updates
Get notified of breaking news, exclusive insights, and must-see stories!

ಜನವರಿ18ರಿಂದ ಪರ್ಯಾಯ : ಶ್ರೀಕೃಷ್ಣನಿಗೆ ಭಾರೀ ವಜ್ರ ಕವಚ

ಬೆಂಗಳೂರು : ಬರುವ ಜನವರಿ 18ರಿಂದ ಉಡುಪಿ ಕ್ಷೇತ್ರದಲ್ಲಿ ಪರ್ಯಾಯ ಮಹೋತ್ಸವ ಹಾಗೂ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಪೂಜಾ ಕೈಂಕರ್ಯಗಳು ಪ್ರಾರಂಭವಾಗಲಿವೆ. ಶ್ರೀಕೃಷ್ಣ ಮೂರ್ತಿಗೆ 2 ಕೋಟಿ ರುಪಾಯಿ ಮೌಲ್ಯದ ವಜ್ರ ಕವಚ ತೊಡಿಸಲಿರುವುದು ಈ ಪರ್ಯಾಯದ ವಿಶೇಷ.

ಮಧ್ವಾಚಾರ್ಯರ ಪರಂಪರೆಯ ಯತಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು ಶ್ರೀ ವಿಶ್ವೇಶತೀರ್ಥ ಸ್ವಾಮಿಗಳಿಂದ ಶ್ರೀ ಕೃಷ್ಣನ ಪೂಜಾ ಕೈಂಕರ್ಯಗಳನ್ನು ವಹಿಸಿಕೊಳ್ಳಲಿದ್ದಾರೆ. ನಗರದಲ್ಲಿ ಚಾತುರ್ಮ್ಯಾಸ್ಯ ಪೂಜಾ ದೀಕ್ಷೆ ನಡೆಸುತ್ತಿರುವ ಶ್ರೀ ವಿದ್ಯಾಧೀಶ ತೀರ್ಥರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಶ್ರೀ ವಿದ್ಯಾಮಾನ್ಯ ತೀರ್ಥಂಕರರು ಸಂಕಲ್ಪಿಸಿದ ವಜ್ರ ಕವಚವನ್ನು ಸಿದ್ಧಪಡಿಸಿ, ಪರ್ಯಾಯ ಉತ್ಸವದ ವೇಳೆ ಶ್ರೀಕೃಷ್ಣನಿಗೆ ತೊಡಿಸುವುದಾಗಿ ಅವರು ಹೇಳಿದರು. ಪರ್ಯಾಯದ ಇನ್ನಷ್ಟು ಕಾರ್ಯಕ್ರಮಗಳು ಹಾಗೂ ಮುಂದುವರಿದ ಯೋಜನೆಗಳು ಇಂತಿವೆ...

  • ಭಾರತೀಯ ದಾರ್ಶನಿಕ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹ
  • ವೇದಾಧ್ಯಯನ, ನಿತ್ಯ ಪ್ರವಚನ, ಗ್ರಂಥ ಪಾಠ ಪ್ರವಚನ, ಧಾರ್ಮಿಕ ಸಾಹಿತ್ಯ ಪ್ರಕಟಣೆಗೆ ಒತ್ತು
  • ಬಡ ವಿದ್ಯಾರ್ಥಿಗಳಿಗೆ ಹಾಗೂ ಬಡ ಜನರಿಗೆ ನಿತ್ಯ ಅನ್ನದಾನ
  • ಸ್ವ- ಉದ್ಯೋಗ ಯೋಜನೆಗೆ ಬೆಂಬಲ
  • ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಗೋಸೇವೆ. ಸಹಸ್ರಕೋಟಿ ರಾಮನಾಮ ಲೇಖನ, ಯಜ್ಞ, ಹೋಮ- ಹವನಗಳನ್ನು ನಡೆಸುವುದು.
  • 100 ವಿದ್ಯಾರ್ಥಿಗಳಿಗೆ ವೇದಪಾಠ ಶಾಲೆ ಪ್ರಾರಂಭಿಸುವುದು.
ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಕೇಂದ್ರ ಸಚಿವರಾದ ಮುರಳಿ ಮನೋಹರ ಜೋಷಿ, ಅನಂತಕುಮಾರ್‌ ಮುಂತಾದವರು ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀಗಳು ತಿಳಿಸಿದರು.

ವಜ್ರ ಕವಚಕ್ಕೆ ಈಗಾಗಲೇ 25 ಲಕ್ಷ ರುಪಾಯಿಯಷ್ಟು ಧನ ಸಹಾಯ ಮಾಡಲು ದಾನಿಗಳು ಮುಂದೆ ಬಂದಿದ್ದಾರೆ. ಭಕ್ತಾದಿಗಳು ಈ ಕಾರ್ಯಕ್ಕೆ ಸಾಕಷ್ಟು ನೆರವನ್ನು ಕೊಟ್ಟು, ಆಧ್ಯಾತ್ಮಿಕ ಪಾಲುದಾರಿಕೆಗೆ ಪಾತ್ರರಾಗಬೇಕು ಎಂದು ಶ್ರೀ ವಿದ್ಯಾಧೀಶ ತೀರ್ಥರು ಕರೆ ಕೊಟ್ಟರು.

ದಾನಿಗಳು ಚೆಕ್‌ ಅಥವಾ ಡಿಡಿಯನ್ನು ಈ ವಿಳಾಸಕ್ಕೆ ಕಳುಹಿಸಬಹುದು- ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಶ್ರೀ ಪಲಿಮಾರು ಮಠ, ರಥಬೀದಿ, ಉಡುಪಿ- 576 101. ಇನ್ನಷ್ಟು ಮಾಹಿತಿ ಪಡೆಯಲು (08252) 23402 ನಂಬರಿಗೆ ಫೋನಾಯಿಸಿ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+