Get Updates
Get notified of breaking news, exclusive insights, and must-see stories!

ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ತಲೆಯೆತ್ತಲಿರುವ ಇಕೋ-ಪಾರ್ಕ್‌

ಮೈಸೂರು : ನಗರದಲ್ಲಿ ಜೀವ ಸಮತೋಲವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಸಿದ್ಧ ಕುಕ್ಕರ ಹಳ್ಳಿ ಕೆರೆಯ ಪಕ್ಕದಲ್ಲಿಯೇ ಇಕೋ-ಪಾರ್ಕ್‌ ಒಂದನ್ನು ಸ್ಥಾಪಿಸಲು ಸರಕಾರ 50 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಇದರೊಂದಿಗೆ ಸೃಜನಶೀಲರ ಕನಸುಗಳು ಇನ್ನೊಮ್ಮೆ ಕುಡಿಯಾಡೆದಿವೆ.

ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ಲಿಸ್ಟ್‌ಗೆ ‘ಇಕೋ-ಪಾರ್ಕ್‌’ ಹೊಸ ಸೇರ್ಪಡೆಯಾಗಲಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಿಷಯವನ್ನು ಗುರುವಾರದ ಕಾರ್ಯಾಗಾರವೊಂದರಲ್ಲಿ ಘೋಷಿಸಿತು. ಪರಿಸರ ರಕ್ಷಣೆ, ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ಜನರಲ್ಲಿ ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ದೃಷ್ಠಿಯಿಂದ ಈ ಪಾರ್ಕ್‌ನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪರಿಸರಾಧಿಕಾರಿ ಶಾಮಸುಂದರ್‌ ಹೇಳಿದ್ದಾರೆ.

ಮರ ಗಿಡಗಳೊಂದಿಗೆ ಪುಸ್ತಕಗಳು
ಪಾರ್ಕಿನಲ್ಲಿ ಬರೇ ಗಿಡ, ಮರ, ಕಲ್ಲುಬೆಂಚುಗಳಿರುವುದಿಲ್ಲ. ರಜಾಕಾಲೀನ ತರಬೇತಿ ಕೇಂದ್ರ, ಹುಲ್ಲು ಹಾಸಿನ ನಡುವೆ ಪುಟ್ಟ ಗ್ರಂಥಾಲಯವನ್ನೂ ಸ್ಥಾಪಿಸಲಾಗುತ್ತದೆ. ಮಳೆ ನೀರಿನ ರಕ್ಷಣೆ ಮತ್ತು ಬಳಕೆಯ ಬಗ್ಗೆ, ಫ್ಯಾಕ್ಟರಿ ತ್ಯಾಜ್ಯಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಕುರಿತು ಇಲ್ಲಿ ಮಾಹಿತಿ, ತರಬೇತಿ ಸಲಹೆಗಳನ್ನು ನೀಡಲಾಗುವುದು. ನಗರದ ಕುಕ್ಕರಹಳ್ಳಿ ಕೆರೆಯ ಪಕ್ಕ ಪಾರ್ಕ್‌ ತೆರೆಯಲು ಉದ್ದೇಶಿಸಲಾಗಿದೆ. ಆದರೆ ಇದಕ್ಕೆ ಸರಕಾರದ ಮುದ್ರೆ ಬೀಳಬೇಕಷ್ಟೆ.

ವಿಶಾಲ ಪಾರ್ಕ್‌ ಸುಮಾರು ಆರೂವರೆ ಎಕರೆ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ. ಪಾರ್ಕ್‌ ಪೂರ್ತಿಗೊಳ್ಳುವಾಗ ಒಂದು ಕೋಟಿ ರೂಪಾಯಿ ಕೈ ಬಿಟ್ಟು ಹೋಗುತ್ತದೆ. ಸರಕಾರ ನೀಡಿದ 50 ಲಕ್ಷ ರೂಪಾಯಿ ಜೊತೆಗೆ ವೆಚ್ಚವನ್ನು ಭರ್ತಿ ಮಾಡಲು ಎನ್‌ಜಿಓಗಳ ನೆರವು ಕೇಳಲಾಗುವುದು ಮತ್ತು ದೇಣಿಗೆ ವಂತಿಗೆಗಳ ಮೂಲಕ ಹಣ ಸಂಗ್ರಹಿಸಲಾಗುವುದು ಎಂದು ಶಾಮಸುಂದರ್‌ ಹೇಳುತ್ತಾರೆ.

ಪರಿಸರ ಸ್ನೇಹಿ ಎಳೆ ಉಳಿಸುವ ಪ್ರಯತ್ನಕ್ಕೆ ನೀವೂ ಕೈ ಜೋಡಿಸಿ

ಕಾಮಗಾರಿ ಪೂರ್ತಿಯಾದ ನಂತರ ಪಾರ್ಕ್‌ ಹೇಗೆ ಕಾಣಿಸಬಹುದು ಎಂದರೆ, ಶಾಮಸುಂದರ್‌, ಬೆಂಗಳೂರಿನ ಪೀಣ್ಯದಲ್ಲಿರುವ ಪಾರ್ಕ್‌ನ ಉದಾಹರಣೆ ಕೊಡುತ್ತಾರೆ. ಅದೇ ಮಾದರಿಯಲ್ಲಿ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆಯಂತೆ. ಇತ್ತೀಚೆಗೆ ವಲಸೆ ಬಂದ ಹಕ್ಕಿಗಳ ಮರಣ, ಸುಖವಾಗಿದ್ದ ಮೀನುಗಳ ಸಾಮೂಹಿಕ ಸಾವುಗಳಿಂದಾಗಿ ಪರಿಸರ ಸ್ನೇಹಿ ಎಳೆಯನ್ನು ಉಳಿಸಿಕೊಳ್ಳಲು ಈ ವಿಶಾಲ ಪಾರ್ಕ್‌ ಅತ್ಯಗತ್ಯ. ಆದ್ದರಿಂದ ಸದ್ಯದಲ್ಲಿಯೇ ಪಾರ್ಕ್‌ ನಿರ್ಮಾಣ ಕಾರ್ಯ ಆರಂಭವಾಗಬೇಕಾಗಿದೆ ಎಂಬುದು ಶಾಮಸುಂದರ್‌ ಅಭಿಪ್ರಾಯ.

ಇಕೋ-ಪಾರ್ಕ್‌ನಲ್ಲಿ ಬೆಳಗುವುದು ಸೋಲಾರ್‌ ದೀಪಗಳು. ಗಿಡಗಳ ಬುಡಕ್ಕೆ ಸುರಿಯುವುದು ಮರುಸಂಸ್ಕರಿಸಿದ ನೀರು. ಮರುಸಂಸ್ಕರಿಸಿದ ನೀರನ್ನು ಹೇಗೆ ಗಿಡಗಳಿಗೆ ಬಳಸಬೇಕು ಎಂಬ ಬಗ್ಗೆ ಪಾರ್ಕ್‌ನ ಮಾಹಿತಿ ಕೇಂದ್ರದಲ್ಲಿ ತಿಳಿಸಿಕೊಡಲಾಗುವುದು ಎಂದು ಶಾಮಸುಂದರ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+