Get Updates
Get notified of breaking news, exclusive insights, and must-see stories!

ಬೆಂಗಳೂರಿನ ಎಲ್ಲೆಡೆ ಶೀಘ್ರವೇ ಎಲ್‌ಪಿಜಿ ಬಂಕ್‌ ಸ್ಥಾಪನೆ : ಸಚಿವ

ಬೆಂಗಳೂರು : ಬೆಂಗಳೂರು - ಮಂಗಳೂರು ನಡುವೆ ಎಲ್‌.ಪಿ.ಜಿ. ಇಂಧನ ಸಾಗಿಸುವ ಸಲುವಾಗಿ ಅಳವಡಿಸಲಾಗುತ್ತಿರುವ ಪೈಪ್‌ಲೈನ್‌ ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ತಿಳಿಸಿದ್ದಾರೆ.

ಈ ಯೋಜನೆ ಕಾರ್ಯಾರಂಭವಾದರೆ, ರಾಜ್ಯದಲ್ಲಿ ವಾಹನಗಳಿಗೆ ಪರ್ಯಾಯ ಇಂಧನ ಸುಲಭವಾಗಿ ಲಭ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್‌ (ಸಿ.ಎನ್‌.ಜಿ) ಅಳವಡಿಕೆಗೆ ಸದ್ಯಕ್ಕೆ ಅವಕಾಶವಿಲ್ಲ ಎಂದೂ ಹೇಳಿದರು.

ಆದರೆ, ವಾಹನಗಳಿಗೆ ಎಲ್‌.ಪಿ.ಜಿ. ಇಂಧನ ಅಳವಡಿಸುವ ಬಗ್ಗೆ ಕೇಂದ್ರ ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಎಲ್‌.ಪಿ.ಜಿ. ಬಂಕ್‌ ಪ್ರಾರಂಭಿಸಲಾಗಿದೆ. ನಗರದ ಉಳಿದ ಭಾಗಗಳಲ್ಲೂ ಎ.ಪಿ.ಜಿ. ಬಂಕ್‌ ಸ್ಥಾಪಿಸಲು ಭಾರತೀಯ ತೈಲ ನಿಗಮ ಮತ್ತು ಹಿಂದೂಸ್ಥಾನ್‌ ಪೆಟ್ರೋಲಿಯಂ ಕಂಪನಿಗಳು ಮುಂದಾಗಿವೆ ಎಂದು ಅವರು ಹೇಳಿದರು.

(ಪಿ.ಟಿ.ಐ/ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+