ದಸರೆ ಹತ್ತಿರ ಬಂತು, ಎಲ್ಲಿ ಹೋದೆಯೋ ಗಜರಾಜ ಬಲರಾಮ!
ಮೈಸೂರು : ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ದಸರೆಯ ಕೇಂದ್ರ ಆಕರ್ಷಣೆಯಾಗಿ ಮೆರೆಯುತ್ತಿದ್ದ ಆನೆ ಬಲರಾಮ ನಾಗರಹೊಳೆಯ ಕಳ್ಳಾಲ ಕ್ಯಾಂಪ್ನಿಂದ ಕಾಣೆಯಾಗಿದ್ದಾನೆ!
ನಾಲ್ಕು ದಿನಗಳಿಂದ ಕಾಣೆಯಾಗಿರುವ ಬಲರಾಮನನ್ನು ಪತ್ತೆ ಹಚ್ಚಲು ಅರಣ್ಯ ಸಿಬ್ಬಂದಿ ತೀವ್ರ ಶೋಧ ನಡೆಸಿದೆ. ಎಂದಿನಂತೆ 12 ಮಂದಿ ಸಂಗಡಿಗರೊಂದಿಗೆ ಅಡ್ಡಾಡಲೂ ಬಲರಾಮ ತೆರಳಿದ್ದ . 12 ಮಂದಿ ವಾಪಸ್ಸಾದರೂ ಬಲರಾಮ ಮಾತ್ರ ಕ್ಯಾಂಪ್ಗೆ ವಾಪಸ್ಸಾಗದಿದ್ದಾಗ ಗಾಬರಿಗೊಳ್ಳುವ ಸರದಿ ಬಲರಾಮನದ್ದು . ಬಲರಾಮ ಸಂಗಾತಿಯನ್ನು ಹುಡುಕಿಕೊಂಡು ಹೋಗಿರಬಹುದೇ? ಈ ಗುಮಾನಿ ತಳ್ಳಿ ಹಾಕಲಾಗದು ಎನ್ನುತ್ತದೆ ಅರಣ್ಯ ಸಿಬ್ಬಂದಿ ವಲಯ.
ಕಳೆದ ಎರಡು ವರ್ಷಗಳಿಂದ ಅಂಬಾರಿ ಹೊರುತ್ತಿರುವ ಬಲರಾಮ, ಈ ಬಾರಿಯೂ ಅಂಬಾರಿ ಹೊರಬೇಕಾಗಿದೆ. ಅಲ್ಲದೆ, ರಾಜ ಗಾಂಭೀರ್ಯಕ್ಕೆ ಹೆಸರಾದ ಬಲರಾಮನನ್ನು ಹೊರತುಪಡಿಸಿ ಇತರ ಯಾವುದೇ ಆನೆ ಅಂಬಾರಿಯನ್ನು ಹೊರುವ ತರಬೇತಿ ಪಡೆದಿಲ್ಲ . ಅಂದಹಾಗೆ, ಅಕ್ಟೋಬರ್ 17 ರಿಂದ ದಸರಾ ಉತ್ಸವ ಪ್ರಾರಂಭವಾಗುತ್ತದೆ.
ಬಲರಾಮನಿಗಿಂತ ಮುನ್ನ ದ್ರೋಣ ಹೆಸರಿನ ಆನೆ ಅಂಬಾರಿಯನ್ನು ಹೊರುತ್ತಿತ್ತು . ಸುಮಾರು ಎರಡು ವರ್ಷಗಳ ಹಿಂದೆ ವಿದ್ಯುತ್ ತಂತಿಗೆ ಸಿಲುಕಿ ದ್ರೋಣ ಪ್ರಾಣ ಕಳೆದುಕೊಂಡಿದ್ದರಿಂದ ಅಂಬಾರಿ ಹೊರುವ ಕರ್ತವ್ಯ ಬಲರಾಮನಿಗೆ ವರ್ಗಾವಣೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications