ವಿಶ್ವಹಿಂದೂ ಪರಿಷತ್ನಿಂದ 30 ಸಾವಿರ ದೇವಸ್ಥಾನಗಳ ಪುನರುತ್ಥಾನ
ನವದೆಹಲಿ : ರಾಮಮಂದಿರ ನಿರ್ಮಾಣದ ನಂತರ ದೇಶದಲ್ಲಿ ದುಸ್ಥಿತಿಯಲ್ಲಿರುವ ಸುಮಾರು 30 ಸಾವಿರ ದೇವಸ್ಥಾನಗಳ ಪುನರುತ್ಥಾನ ಕಾರ್ಯವಿಶ್ವಹಿಂದೂ ಪರಿಷತ್ ವತಿಯಿಂದ ನಡೆಯಲಿದೆ ಎಂದು ಪರಿಷತ್ನ ಉಪಾಧ್ಯಕ್ಷ ಆಚಾರ್ಯ ಗಿರಿರಾಜ್ ಕಿಶೋರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಮಮಂದಿರದ ಬಗ್ಗೆ ವಾಜಪೇಯಿ ಸರಕಾರ ಯಾವುದೇ ನಿಲುವುಗಳ ಹೊರತಾಗಿಯೂ ವಿಶ್ವಹಿಂದೂ ಪರಿಷತ್ ಮಂದಿರ ನಿರ್ಮಾಣ ಕಾರ್ಯವನ್ನು ಬರುವ ಮಾರ್ಚ್ನಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಪುನರುಚ್ಚರಿಸಿದರು. ದೇಶದಲ್ಲಿ ಹಿಂದೆ ಹಾನಿಗೊಳಗಾಗಿದ್ದ ಸಾಕಷ್ಟು ದೇವಸ್ಥಾನಗಳು ಜೀರ್ಣೋದ್ಧಾರವನ್ನು ಕಾಣದೇ ದುಸ್ಥಿತಿಯಲ್ಲಿವೆ. ಅಂಥ 30 ಸಾವಿರ ದೇವಸ್ಥಾನಗಳನ್ನು ಪುನರುತ್ಥಾನ ಮಾಡುವುದು ಮಂದಿರ ನಿರ್ಮಾಣ ಕಾರ್ಯವನ್ನು ಮುಗಿದ ಬಳಿಕ ಪರಿಷತ್ ಕೈಗೆತ್ತಿಕೊಳ್ಳಲಿದೆ.
ಸರಕಾರವು ವಿವಾದಿತ ದೇವಸ್ಥಾನ ಎಂದು ಕೆಲವು ದೇವಾಲಯಗಳನ್ನು ಗುರುತಿಸಿದೆ. ಆದರೆ ವಿಶ್ವಹಿಂದೂ ಪರಿಷತ್ನ ದೇವಸ್ಥಾನಗಳ ಪುನರುತ್ಥಾನ ಕಾರ್ಯದಲ್ಲಿ ಇಂತಹ ದೇವಸ್ಥಾನಗಳೂ ಸೇರಿರುತ್ತವೆ. ಈ ಬಗ್ಗೆ ದೇಶಾದ್ಯಂತ ಇರುವ ಪರಿಷತ್ನ ಪ್ರಾದೇಶಿಕ ಘಟಕಗಳು ಕೆಲಸ ನಿರ್ವಹಿಸಲಿವೆ ಎಂದು ಕಿಶೋರ್ ಹೇಳಿದ್ದಾರೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications