ಸೆಪ್ಟೆಂಬರ್ 12- 17 : ಬೆಂಗಳೂರಲ್ಲಿ ಎಕ್ಸ್‌ಪ್ಲೋಸಿಟಿ ರಂಗ ಹಬ್ಬ
ಬೆಂಗಳೂರು : ಸೆಪ್ಟೆಂಬರ್ 12ರಿಂದ 17ರವರೆಗೆ ನಗರದಲ್ಲಿ ನಾಟಕ ಮೇಳ. ಎಕ್ಸ್‌ಪ್ಲೋಸಿಟಿ. ಕಾಂ ಸಿಲಿಕಾನ್ ನಗರಿಯಲ್ಲಿ ಈ ಅಪರೂಪದ ನಾಟಕೋತ್ಸವ ಆಯೋಜಿಸಿದೆ. ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿರುವ ಈ ರಂಗ ಪರ್ವದಲ್ಲಿ 6 ಪ್ರಮುಖ ರಂಗ ತಂಡಗಳು ಭಾಗವಹಿಸಲಿವೆ.
ರಂಗ ಪ್ರಯೋಗದ ವಿವಿಧ ಮಜಲುಗಳ ಅಭಿವ್ಯಕ್ತಿ ಈ ನಾಟಕಮೇಳ. ಇಲ್ಲಿ ಹಾಸ್ಯ, ಗಂಭೀರ ಹಾಗೂ ಸಾಮಾಜಿಕ ಕಳಕಳಿಯ ಅವತರಣಿಕೆಯ ಅನಾವರಣ. ಪೊಯ್ಲ್ ಸೇನ್ ಗುಪ್ತಾ, ನೀಲ್ ಸೈಮನ್, ಅರುಣ್ ಮುಖರ್ಜಿ, ಮೈಕ್ ಕುಲ್ಲೆನ್, ಅರ್ಥರ್ ಮಿಲ್ಲರ್, ಮಾರ್ಕ್ ಮೆಡೋಫ್ ಮೊದಲಾದ ದಿಗ್ಗಜರ ನಾಟಕಗಳ ನೋಡುವ ಅಪರೂಪದ ಅವಕಾಶ ಇದು. ರಂಗ ಕರ್ಮಿ ಹಾಗೂ ಗರ್ವ ಧಾರಾವಾಹಿ ಖ್ಯಾತಿಯ ಪ್ರಕಾಶ್ ಬೆಳವಾಡಿ ಸಹಯೋಗದಲ್ಲಿ ಈ ರಂಗ ಹಬ್ಬ ಸಜ್ಜಾಗಿದೆ. ಪ್ಲೇ ಪೆನ್, ಥಿಯೇಟರ ಲ್ಯಾಬ್, ಬಿಎಲ್‌ಟಿ, ಎಆರ್‌ಟಿ, ಥಿಯೇಟರ್ ಕ್ಲಬ್ ಹಾಗೂ ಫರಮ್ ಥ್ರೀ ರಂಗ ತಂಡಗಳು ಪ್ರದರ್ಶನ ನೀಡಲಿವೆ.
ನನ್ನಂಥ ರಂಗ ಕರ್ಮಿಗಳನ್ನೆಲ್ಲಾ ಒಂದೇ ಸೂರಿನಡಿ ತರುವ ಅಪರೂಪದ ಯತ್ನವನ್ನು ಎಕ್ಸ್‌ಪ್ಲೋ ಸಿಟಿ.ಕಾಂ ಮಾಡುತ್ತಿದೆ. ಇದರ ಸಂಪೂರ್ಣ ಉಪಯೋಗವನ್ನು ಪಡೆದು, ಛಾಪು ಮೂಡಿಸಬೇಕಾದ್ದು ರಂಗ ಕರ್ಮಿಗಳ ಹೊಣೆ ಎಂದು ಪ್ರಕಾಶ್ ಬೆಳವಾಡಿ ಸುದ್ದಿಗಾರರಿಗೆ ತಿಳಿಸಿದರು.
ಅಂದಹಾಗೆ, ನಾಟಕಗಳಿಗೆ ಟಿಕೇಟು ಇಲ್ಲಿ ಸಿಗುತ್ತದೆ- ಎಕ್ಸ್‌ಪ್ಲೋಸಿಟಿ. ಕಾಂ, 24 ರೆಸ್ಟ್ ಹೌಸ್ ಕ್ರೆಸೆಂಟ್, ದಿ ಸೂಪರ್ ಮಾರ್ಕೆಟ್, ಬ್ರಿಗೇಡ್ ರಸ್ತೆ. ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications