ಮೈಸೂರಿನಲ್ಲಿ ಉಚಿತ ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ ಸೇವೆ ಆರಂಭ
ಮೈಸೂರು: ನಗರದ ಬಿಜಿಎಸ್ ಅಪೊಲೋ ಆಸ್ಪತ್ರೆಯಲ್ಲಿ ಪ್ರಥಮ ಉಚಿತ ತುರ್ತು ಚಿಕಿತ್ಸಾ ಸಂಚಾರಿ ಅಂಬ್ಯುಲೆನ್ಸ್ ಮಂಗಳವಾರದಿಂದ ಆರಂಭವಾಗಿದೆ.
ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ತುರ್ತುಚಿಕಿತ್ಸೆ ನೀಡಲು ರೋಗಿಯನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗುವ ಸಂದರ್ಭದಲ್ಲಿ ಈ ಸಂಚಾರಿ ತುರ್ತು ಚಿಕಿತ್ಸಾ ಆಸ್ಪತ್ರೆ ಸಹಾಯಕ್ಕೆ ಬರಲಿದೆ. ಈ ವಾಹನದಲ್ಲಿ ವೈದ್ಯರು ಮತ್ತು ಸಹಾಯಕರೊಬ್ಬರು ಇರುತ್ತಾರೆ.
ಸದ್ಯದಲ್ಲಿಯೇ ಈ ಅಂಬ್ಯುಲೆನ್ಸ್ ಮಾದರಿಯ ಸಂಚಾರಿ ಆಸ್ಪತ್ರೆಗೆ ಫೋನ್ ಸಂಪರ್ಕ ದೊರಕಲಿದ್ದು , ಈಗಾಗಲೇ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫೋನ್ ನಂಬರ್ನ್ನು ನೀಡಲಾಗಿದೆ. ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ನ ಅಗತ್ಯ ಇರುವವರು 566666 ಈ ನಂಬರಿಗೆ ಉಚಿತವಾಗಿ ಫೋನಾಯಿಸಿ ರೋಗಿ ಇರುವ ಸ್ಥಳದ ವಿವರ ನೀಡಬಹುದು.
ರೋಗಿಗೆ ಪ್ರಥಮ ಚಿಕಿತ್ಸೆ ನೀಡಿ, ಆತನನ್ನು ತಕ್ಷಣ ಅದೇ ವ್ಯಾನಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು . ರೋಗಿ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬಯಸುತ್ತಾನೋ ಅದೇ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಗುವುದು. ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ ಅಲ್ಲದೇ ಇತರ ನಾಲ್ಕು ಅಂಬ್ಯುಲೆನ್ಸ್ ಸೇವೆಯನ್ನೂ ಆಸ್ಪತ್ರೆ ಮಂಗಳವಾರ ಆರಂಭಿಸಿದೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications