Get Updates
Get notified of breaking news, exclusive insights, and must-see stories!

ಮೈಸೂರು ದಸರಾ ಕ್ರೀಡಾಕೂಟ ರದ್ದು , ಕುಸ್ತಿಗೆ ಮಾತ್ರ ವಿನಾಯ್ತಿ!

ಬೆಂಗಳೂರು : ವಿಶ್ವ ವಿಖ್ಯಾತ ಮೈಸೂರು ದಸರೆಯ ಒಂದು ಭಾಗವೇ ಆಗಿರುವ ಇತಿಹಾಸ ಪ್ರಸಿದ್ಧ ದಸರಾ ಕ್ರೀಡಾ ಕೂಟ ಈ ವರ್ಷ ರದ್ದಾಗುವ ಸಂಭವಗಳೇ ಹೆಚ್ಚಾಗಿದೆ. ರಾಜ್ಯ ಭೀಕರ ಬರಗಾಲ ಎದುರಿಸುತ್ತಿರುವ ಕಾರಣ ಕ್ರೀಡಾಕೂಟ ರದ್ದು ಮಾಡುವ ನಿರ್ಧಾರವನ್ನು ರಾಜ್ಯ ಕ್ರೀಡಾ ಇಲಾಖೆ ತಳೆದಿದೆ.

ಬರದ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರ ಆಚರಿಸಲು ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಪ್ರತಿ ವರ್ಷ 15 ಲಕ್ಷ ರುಪಾಯಿಗಳ ವೆಚ್ಚದಲ್ಲಿ ನಡೆಸಲಾಗುತ್ತಿದ್ದ ಅಥ್ಲೆಟಿಕ್‌ ಕ್ರೀಡಾಕೂಟವನ್ನು ರದ್ದು ಪಡಿಸಲು ಕ್ರೀಡಾ ಸಚಿವಾಲಯ ತೀರ್ಮಾನಿಸಿದೆ. ಈ ವಿಷಯವನ್ನು ರಾಜ್ಯ ಕ್ರೀಡಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಕ್ರೀಡಾಕೂಟವನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕೆ ಎಂಬ ಬಗ್ಗೆ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಮೈಸೂರು ಪರಂಪರೆಯ ದ್ಯೋತಕವಾಗಿರುವ ಕುಸ್ತಿ ಹೊರತು ಪಡಿಸಿ ಮಿಕ್ಕೆಲ್ಲಾ ಕ್ರೀಡೆಗಳನ್ನೂ ನಡೆಸದಿರಲು ಸರಕಾರ ನಿರ್ಧರಿಸಿದೆ.

ಬರಗಾಲದ ಹಿನ್ನೆಲೆಯಲ್ಲಿ ಹಂಪೆ ಉತ್ಸವ, ಕರಾವಳಿ ಉತ್ಸವ, ಕದಂಬೋತ್ಸವ, ಗಡಿನಾಡ ಉತ್ಸವ, ಬನವಾಸಿ ಉತ್ಸವ, ಪಟ್ಟದಕಲ್ಲ ಉತ್ಸವಗಳನ್ನು ಸಹ ರದ್ದು ಪಡಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಾರ್ತಾಸಂಚಯ

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+