ತಮಿಳುನಾಡಿನ ಭಕ್ತನಿಂದ ಕೊಲ್ಲೂರು ದೇವಿಗೆ ಸ್ವರ್ಣ ಸಿಂಹವಾಹನ
ಕುಂದಾಪುರ : ಕೊಲ್ಲೂರು ಮೂಕಾಂಬಿಕಾ ದೇವಿಯ ವಾಹನವಾದ ಸಿಂಹದ ಮೂರ್ತಿಗೆ ತಮಿಳುನಾಡಿನ ಭಕ್ತನೋರ್ವ ಸುಮಾರು 9 ಲಕ್ಷ ರೂಪಾಯಿ ವೆಚ್ಚದ ಚಿನ್ನದ ಮುಖವಾಡವನ್ನು ಆಗಸ್ಟ್ 31ರ ಶುಕ್ರವಾರ ಸಮರ್ಪಿಸಲಿದ್ದಾರೆ.
1 ಕೆ.ಜಿ. 800 ಗ್ರಾಂ ತೂಕದ ಸ್ವರ್ಣಮಯ ಸಿಂಹದ ಮುಖವಾಡವನ್ನು ಕೊಲ್ಲೂರು ದೇವಿಗೆ ಸಮರ್ಪಿಸಲಿರುವ ಭಕ್ತ ತಮ್ಮ ಹೆಸರನ್ನು ಬಹಿರಂಗಪಡಿಸಬಾರದೆಂದು ಕೇಳಿಕೊಂಡಿರುವುದಾಗಿ ದೇವಳದ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಇಷ್ಟು ವರುಷಗಳಲ್ಲಿ ಅಲಂಕಾರ ಪೂಜೆಗೆ ದೇವಿಯ ವಾಹನವಾಗಿ ಬೆಳ್ಳಿಯ ಸಿಂಹವನ್ನು ಬಳಸಲಾಗುತಿತ್ತು. ಇದೀಗ ಸ್ವರ್ಣ ಸಿಂಹ ಶುಕ್ರವಾರ ದಂದು ಮೂಕಾಂಬಿಕಾ ದೇವಿಗೆ ಅಲಂಕಾರವಾಗಲಿದೆ.
ತಮ್ಮ ಬಹುವರ್ಷದ ಹಂಬಲ ಇದಾಗಿದ್ದು ಈವರ್ಷ ಚಿನ್ನದ ಸಿಂಹ ಮುಖವಾಡವನ್ನು ದೇವಿಗರ್ಪಿಸಲು ಸಾಧ್ಯವಾಗಿದೆ ಎಂದು ಆ ಭಕ್ತರು ಹೇಳಿಕೊಂಡಿದ್ದಾರೆ. ಶುಕ್ರವಾರ ನಡೆಯಲಿರುವ ಸ್ವರ್ಣ ಸಿಂಹ ವಾಹಿನಿ ದೇವಿಯ ಅಲಂಕಾರ ವಿಶೇಷ ಪೂಜೆಗೆ ಕೊಲ್ಲೂರಿನಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications