Get Updates
Get notified of breaking news, exclusive insights, and must-see stories!

ತುಂಗಾಮೂಲ ಉಳಿಸಿ ಆಂದೋಲನಕ್ಕೆ ಶೃಂಗೇರಿ ಸ್ವಾಮೀಜಿ ಬೆಂಬಲ

ಶಿವಮೊಗ್ಗ : ಕುದುರೆಮುಖ ಗಣಿಗಾರಿಕೆ ವಿರೋಧೀ ಆಂದೋಲನಕ್ಕೆ ಮತ್ತಷ್ಟು ಗಣ್ಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪರಿಸರ ಚಿಂತಕ ಡಾ. ನಿ. ಮುರಾರಿ ಬಲ್ಲಾಳ್‌ ಅವರು ಕೆಐಓಸಿಎಲ್‌ ಕಂಪೆನಿ ಒಂದು ಕ್ಷಣವೂ ಮುಂದುವರೆಯಬಾರದು ಎಂದು ಹೇಳಿದ್ದರೆ, ಪರಿಸರ ರಕ್ಷಣೆಗಾಗಿ ಶೃಂಗೇರಿಮಠವು ಎಲ್ಲ ರೀತಿಯಿಂದಲೂ ಸಹಾಯ ಮಾಡುವುದು ಎಂದು ಶೃಂಗೇರಿ ಶಂಕರ ಮಠದ ಭಾರತೀ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ತುಂಗಾ ಮೂಲ ಉಳಿಸಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಿರುವ ಸ್ವಾಮೀಜಿಗಳು ಯಾವುದೇ ಕಾರಣಕ್ಕೂ ಕುದುರೆಮುಖದಲ್ಲಿ ಗಣಿಗಾರಿಕೆ ಮುಂದುವೆರಿಸಲು ರಾಜ್ಯ ಸರಕಾರ ಅವಕಾಶ ನೀಡಬಾರದು ಎಂದು ಹೇಳಿರುವುದಾಗಿ ಸಾಹಿತಿ ಡಾ. ಯು. ಆರ್‌. ಅನಂತ ಮೂರ್ತಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಣಿಗಾರಿಕೆ ನಿಲ್ಲಿಸಲು ಸರಕಾರವನ್ನು ಆಗ್ರಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ನಿ. ಮುರಾರಿ ಬಲ್ಲಾಳ್‌ ಅವರ ಪ್ರಕಾರ, ಈಗ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 2,500 ಕಾರ್ಮಿಕರ ಭವಿಷ್ಯದ ಪ್ರಶ್ನೆಯ ನೆಪವೊಡ್ಡಿ ಸರಕಾರವು ಗಣಿಗಾರಿಕೆಗೆ ಪರವಾನಿಗೆ ಮುಂದುವರೆಸಲು ಹುನ್ನಾರ ನಡೆಸುತ್ತಿದೆ. ಮಾಹಿತಿ ತಂತ್ರಜ್ಞಾನದ ನೆಪದಿಂದ 2.4 ಲಕ್ಷ ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಇವ್ಯಾವುದರ ಪರಿವೆ ಇಲ್ಲದ ಸರಕಾರ ಕೆಐಓಸಿಎಲ್‌ನ ಕಾರ್ಮಿಕರ ಭವಿಷ್ಯದ ಬಗ್ಗೆ ಅತೀವ ತಲೆ ಕೆಡಿಸಿಕೊಂಡು ಪರಿಸರ ರಕ್ಷಣೆಯ ಬಗೆಗೆ ಕಿಂಚಿತ್ತೂ ಆಸಕ್ತಿ ತೋರಿಸಿಲ್ಲ ಎಂದು ಹೇಳಿದ್ದಾರೆ.

ಜನರ ಹೋರಾಟವನ್ನು ನಿರ್ಲಕ್ಷಿಸಿ ಸ್ಥಳೀಯರ ಕ್ಷೇಮವನ್ನು ಸರಕಾರ ಮರೆತಿದೆ ಎಂದು ಸರಕಾರದ ಧೋರಣೆಯನ್ನು , ಕರಾವಳಿಯ ಲೇಖಕಿ ವೈದೇಹಿ ಟೀಕಿಸಿದ್ದಾರೆ. ಪರಿಸರನಾಶದತ್ತ ದಾಪುಗಾಲು ಇಡುತ್ತಿರುವ ಸರಕಾರಕ್ಕೆ ಪ್ರಕೃತಿಯನ್ನು ಬೇಕೆಂದಾಗಲೆಲ್ಲ ಸೃಷ್ಟಿಸುವುದು ಸಾಧ್ಯವಿಲ್ಲ ಎಂಬುದು ತಿಳಿದಿರಬೇಕು. ಗಣಿಗಾರಿಕೆಯನ್ನು ಬೇಗ ಮುಚ್ಚಿದಷ್ಟೂ ನಮಗೇ ಒಳಿತು ಎಂದಿದ್ದಾರೆ.

ಪರಿಸರವಾದಿಗಳ ಪರವಾಗಿ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತೀರ್ಪು ನೀಡಿರುವುದನ್ನು ಉಲ್ಲೇಖಿಸುತ್ತಾ ಪತ್ರಕರ್ತ, ಲೇಖಕ, ವರದೇಶ್‌ ಟಿ. ಹಿರೇಗಂಗೆ ಗಣಿಗಾರಿಕೆ ಮುಂದುವರಿಕೆಯನ್ನು ಖಂಡಿಸಿದ್ದಾರೆ. ಗಣಿಗಾರಿಕೆಯಾಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮುಂದುವರೆಯುತ್ತಿರುವ ಸರಕಾರ ಕೃಷಿಯಿಂದಲೇ ಬದುಕು ಎಂಬುದನ್ನು ಸಂಪೂರ್ಣವಾಗಿ ಮರೆತಿದೆ ಎಂದು ಹಿರೇಗಂಗೆ ವಾದಿಸಿದ್ದಾರೆ.

ಕುದುರೆಮುಖ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರಿಗೆ ಪತ್ರ ಬರೆಯಲಾಗಿದ್ದು ತುಂಗಾ ಮೂಲ ಉಳಿಸಿ ಹೋರಾಟಕ್ಕೆ ರಂಭಾಪುರಿ ಪೀಠದ ಸ್ವಾಮೀಜಿಯವರ ಬೆಂಬಲವನ್ನೂ ಕೋರಲಾಗಿದೆ ಎಂದು ಅನಂತ ಮೂರ್ತಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+