ಕಾರಿಡಾರ್ ಕಾರ್ಯಗತವಾದರೆ ಬೆಂಗಳೂರಿಂದ ಮೈಸೂರಿಗೆ 75 ನಿಮಿಷ
ಬೆಂಗಳೂರು : ಬೆಂಗಳೂರು - ಮೈಸೂರು ಇನ್‌ಫ್ರಾಸ್ಟಕ್ಚರ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗುವ ದಿನ ಹತ್ತಿರವಾಗಿದೆ. ಯೋಜನೆಗೆ ಕೇಂದ್ರ ಪರಿಸರ ಖಾತೆ ಅನುಮತಿ ಸಿಕ್ಕಿದ್ದು, ಇನ್ನು ಕೇವಲ 3 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಧರ್ಮಸಿಂಗ್ ತಿಳಿಸಿದ್ದಾರೆ.
ಈ ಯೋಜನೆ ಕಾರ್ಯಗತವಾದರೆ ಬೆಂಗಳೂರು - ಮೈಸೂರು ನಡುವಣ ದೂರ 111 ಕಿ.ಮೀಟರ್ ಆಗಲಿದ್ದು, ಕೇವಲ 75 ನಿಮಿಷಯದಲ್ಲಿ ಮೈಸೂರು ತಲುಪಬಹುದಾಗಿದೆ. ಈ ಯೋಜನೆಗೆ ಪರಿಸರ ಸಚಿವಾಲಯ ಆಗಸ್ಟ್ 8ರಂದು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ.
ಈ ಯೋಜನೆಗಾಗಿ 20,930 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ಸರಕಾರಿ ಜಾಗ 5 ಸಾವಿರ ಎಕರೆ. ಇದರ ಜತೆಗೆ ಅರಣ್ಯ ಭೂಮಿ, ಬಿ.ಡಿ.ಎ. ಹಾಗೂ ಖಾಸಗಿ ಭೂಮಿಯನ್ನು ಪಡೆಯಲಾಗಿದೆ. ನಿಯಮಾವಳಿಗಳ ರೀತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಯೋಜನೆಯಲ್ಲಿ 58 ಕೋಟಿ ರುಪಾಯಿ ಸ್ಟಾಂಪ್ ಶುಲ್ಕ ವಿನಾಯ್ತಿಯನ್ನೂ ನೀಡಲಾಗಿದೆ.
ಈ ಯೋಜನೆಗೆ 2 ಸಾವಿರ ಕೋಟಿ ರುಪಾಯಿ ಅಂದಾಜು ಮಾಡಲಾಗಿದ್ದು, ನಿರ್ಮಾಣ- ನಿರ್ವಹಣೆ ಹಾಗೂ ಹಸ್ತಾಂತರ (ಬಿ.ಓ.ಟಿ) ಆಧಾರದ ಮೇಲೆ ಯೋಜನೆಯನ್ನು ಕಲ್ಯಾಣಿ ಗ್ರೂಪ್ ನೇತೃತ್ವದ ಸಮೂಹ ಸಂಸ್ಥೆಗೆ ವಹಿಸಿಕೊಡಲಾಗಿದೆ. 30 ವರ್ಷದ ತರುವಾಯ ಸಂಸ್ಥೆ ರಸ್ತೆಯನ್ನು ಸರಕಾರಕ್ಕೆ ವಹಿಸಿಕೊಡಲಿದೆ.
30 ವರ್ಷಗಳ ವರೆಗೆ ರಸ್ತೆ ಹಾಗೂ ಟೌನ್‌ಷಿಪ್ ನಿರ್ಮಿಸಿದವರು, ಮೈಸೂರು - ಬೆಂಗಳೂರು ಕಾರಿಡಾರ್ ರಸ್ತೆ ಬಳಸುವವರಿಂದ ಶುಲ್ಕ ವಸೂಲಿ ಮಾಡಲು ಅವಕಾಶ ನೀಡಲಾಗಿದ್ದು, ಶುಲ್ಕವನ್ನೂ ನಿಗದಿ ಮಾಡಲಾಗಿದೆ. ಈ ರಸ್ತೆ ಬಳಸುವ ವಾಹನಗಳಿಗೆ ಪ್ರತಿ ಕಿ.ಮೀಟರ್‌ಗೆ ವಿಧಿಸಲಾಗುವ ಶುಲ್ಕದ ವಿವರ ಇಂತಿದೆ:
ಕಾರಿಗೆ ಒಂದು ರುಪಾಯಿ, ಬಸ್ಸಿಗೆ 2.70, ಟ್ರಕ್‌ಗೆ 1.75, ಲಘು ಸರಕು ವಾಹನಗಳಿಗೆ 1.05 ರುಪಾಯಿ, ದ್ವಿಚಕ್ರವಾಹನಗಳಿಗೆ 40 ಪೈಸೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕು ಮತ್ತು 7ರಿಂದ ಕಾರಿಡಾರ್ ರಸ್ತೆಗೆ ಸಂಪರ್ಕ ಪಡೆಯುವವರು ತಾವು ಬಳಸುವ 9 ಕಿ.ಮೀಟರ್ ರಸ್ತೆಗೆ ನೀಡಬೇಕಾದ ಶುಲ್ಕ - ಕಾರಿಗೆ 12 ರುಪಾಯಿ, ಬಸ್‌ಗೆ 30 ರುಪಾಯಿ, ಲಘು ಸರಕು ವಾಹನಕ್ಕೆ 12 ರುಪಾಯಿ, ದ್ವಿಚಕ್ರ ವಾಹನಗಳಿಗೆ 5 ರುಪಾಯಿ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications