ನಾನು ತೆಂಡೂಲ್ಕರ್‌ಮಯ ಆಗಿದ್ದೆ !
ಸಿಡ್ನಿ : ನಾನೂ ಬ್ಯಾಟ್ಸ್‌ಮನ್ ಆಗಿದ್ದರೆ ಸಚಿನ್ ತೆಂಡೂಲ್ಕರಷ್ಟೇ ಆತ್ಮವಿಶ್ವಾಸದಿಂದ ಆಡಬಯಸುತ್ತೇನೆ. ಆತ ನಂಬರ್ ಒನ್. ಪ್ರೀತಿ- ದ್ವೇಷಗಳ ಸಂಬಂಧ ಅದು; ಕಣದಲ್ಲಿ ಎಷ್ಟೋ ಬಾರಿ ನಾನು ಅನುಭವಿಸಿದ್ದು.
ಆಸ್ಟ್ರೇಲಿಯಾದ ಲೆಗ್ಗಿ ಶೇನ್ ವಾರ್ನ್ ಬರೆದಿರುವ ಆತ್ಮಕತೆ ಹುದುಗಿಸಿಟ್ಟುಕೊಂಡಿರುವ ಮಾತುಗಳಿವು. ಇಲ್ಲಿನ ಪುಸ್ತಕದಂಗಡಿ ಶೆಲ್ಫ್ ಮೇಲಿರುವ ಬಿಸಿ ಬಿಸಿ ಪುಸ್ತಕ. ಇದರಲ್ಲಿ ಸಚಿನ್ ಬಗೆಗೆ ವಾರ್ನ್ ಬರೆದಿರುವ ಸಾಲುಗಳ ತುಣುಕುಗಳು ಇಂತಿವೆ...
- ಎಷ್ಟೊಂದು ಪಂದ್ಯಗಳನ್ನಾಡಿದ್ದೇನೆ. ಎಂತೆಂಥಾ ಬ್ಯಾಟ್ಸ್‌ಮನ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ. ಆದರೆ ಸಚಿನ್ ಹಾಗೂ ಲಾರಾಗೆ ಬೌಲ್ ಮಾಡುವಾಗ ಮನಸ್ಸು ಆಗುತ್ತಿದ್ದ ಬಿಗುವು ಅಷ್ಟಿಷ್ಟಲ್ಲ. I was tendulcorized.
- ಸಚಿನ್ ಜೊತೆ ನಾನು ವೈಯಕ್ತಿಕವಾಗಿ ಪೋಟಿಗಿಳಿಯುತ್ತಿದ್ದೆ.
- 1997- 98ರ ಟೆಸ್ಟ್ ಪಂದ್ಯವೊಂದರಲ್ಲಿ ನನ್ನ ಹಾಗೂ ಸಚಿನ್ ನಡುವಣ ಕ್ರಿಕೆಟ್ಟನ್ನು ಎಷ್ಟೋ ಜನ ತಮ್ಮ ಜೀವನದ ಅದ್ಭುತ ಕ್ಷಣಗಳೆಂದು ಬಣ್ಣಿಸಿದ್ದಾರೆ. ಆ ಕ್ಷಣಗಳನ್ನು ನನ್ನಷ್ಟೇ ಸಚಿನ್ ಕೂಡ ಖಂಡಿತ ಅನುಭವಿಸಿದ್ದಾರೆ.
- ಯಾರೊಬ್ಬರಿಗಿಂತ ನನ್ನ ಚೆಂಡುಗಳಿಗೆ ಸಚಿನ್ ದಿಟ್ಟ ಉತ್ತರ ಕೊಟ್ಟಿದ್ದಾರೆ. ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಚೆಂಡಿನ ಲೆಂಗ್ತ್ ಅಳೆಯುವಲ್ಲಿ ಕ್ಷಿಪ್ರ ಗತಿಯ ಧೋರಣೆ ತಳೆದಿದ್ದಾರೆ. ಕಣ್ಣಿನ ಎತ್ತರದ ಸ್ಥಾನವನ್ನೂ ಮೀರಿ ಚೆಂಡು ಎಸೆದರೂ ಸಚಿನ್ ಆಟದ ಚುರುಕು ಮಾಸುವುದೇ ಇಲ್ಲ. ಆತ ಚೆಂಡನ್ನು ದಂಡಿಸಲು ಕಂಡುಕೊಳ್ಳುವ ನಡೆ ಅಜರುದ್ದೀನ್ ಹಾಗೂ ರಾಹುಲ್ ದ್ರಾವಿಡ್‌ಗಿಂತ ಮಿಗಿಲು ಮತ್ತು ಚೆನ್ನು.
- ಸಚಿನ್ ಪಾದಚಲನೆಯಂತೂ ಅತ್ಯದ್ಭುತ. ಬಲ ಮುಂಭಾಗಕ್ಕೆ ಬಂದು ಅಥವಾ ಹಿಂದೆ ಸರಿದು, ಚೆಂಡಿನ ಗತಿ ಲೆಕ್ಕಿಸಿ ಹೊಡೆಯುವ ಅವರ ಪಕ್ಕಾ ಹೊಡೆತಗಳಿಗೆ ನಾನೂ ಅಭಿಮಾನಿ !
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications