Get Updates
Get notified of breaking news, exclusive insights, and must-see stories!

ವಿಶ್ವೇಶ್ವರಯ್ಯ ನಾಲೆಯಲ್ಲಿ ಬಿರುಕು: ತನಿಖೆಗೆ ಇಬ್ಬರು ತಜ್ಞರ ಸಮಿತಿ

ಬೆಂಗಳೂರು : ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾರ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ಭಾರೀ ಬಿರುಕಿನ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಇಬ್ಬರು ತಜ್ಞರ ಸಮಿತಿಯನ್ನು ನೇಮಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಬಿರುಕನ್ನು ತಡೆಗಟ್ಟುವಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ವಿಫಲವಾಗಿರುವ ಕುರಿತು ಗುರುವಾರ ಸ್ಥಳಕ್ಕೆ ಭೇಟಿ ಕೊಟ್ಟಾಗ ಸ್ಥಳೀಯರು ದೂರುಗಳನ್ನು ಸಲ್ಲಿಸಿದರು ಎಂದು ಪಾಟೀಲ್‌ ಹೇಳಿದರು. ರೈತರ ಎಚ್ಚರಿಕೆಗಳನ್ನು ಕಡೆಗಣಿಸಿರುವ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ಕನಿಷ್ಠ 20 ಕೋಟಿ ರುಪಾಯಿ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಹಾಗೂ ಒಬ್ಬ ಜೂನಿಯರ್‌ ಇಂಜಿನಿಯರ್‌ ಅವರನ್ನು ಕರ್ತವ್ಯಲೋಪದ ಮೇರೆಗೆ ಸಸ್ಪೆಂಡ್‌ ಮಾಡಲಾಗಿದೆ ಎಂದರು.

20 ದಿನಗಳೊಳಗಾಗಿ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇನ್ನು ಹದಿನೈದು ದಿನಗಳಲ್ಲಿ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸುತ್ತಿದ್ದು , ಮಂಡ್ಯ ಉಪ ಜಿಲ್ಲಾಧಿಕಾರಿಗಳು ಈ ಕಾರ್ಯದ ನೇತೃತ್ವ ವಹಿಸುತ್ತಾರೆ ಎಂದು ಪಾಟೀಲ್‌ ಹೇಳಿದರು.

ಹರಿನಾಲಾ ಹಾಗೂ ಮಾರ್ಕಂಡೇಯ ನೀರಾವರಿ ಯೋಜನೆಗಳಿಂದ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಪ್ರಸ್ತಾವನೆ ಮುಂದಿನ ಸಂಪುಟ ಸಭೆಯ ಎದುರು ಬರಲಿದೆ. ನವಂಬರ್‌ ವೇಳೆಗೆ ಮಾರ್ಕಂಡೇಯ ಅಣೆಕಟ್ಟೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಪಾಟೀಲ್‌ ಹೇಳಿದರು.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+