ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆಂಟು ಹೊಸ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಸಂಪುಟ ಸಮ್ಮತಿ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ನಾಲ್ಕು ಪ್ರಮುಖ ಕೋರ್ಸ್‌ಗಳಿಗೆ ತಲಾ 60 ಸೀಟಿನಂತೆ ಒಟ್ಟು 240 ಸೀಟುಗಳುಳ್ಳ ಎಂಟು ಹೊಸ ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮತಿ ನೀಡಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎ.ಐ.ಸಿ.ಟಿ.ಇ) ಅನುಮತಿ ಪಡೆದು ಈ ಕಾಲೇಜುಗಳು ಪ್ರಾರಂಭವಾಗಲಿವೆ.

ಹೊಸ ಎಂಟು ಕಾಲೇಜುಗಳ ಜೊತೆಗೆ ಹಾಲಿ ಇರುವ ಆರು ಕಾಲೇಜುಗಳಲ್ಲಿ 435 ಸೀಟುಗಳನ್ನು ಹೆಚ್ಚಿಸಲೂ ಸಮ್ಮತಿಸಲಾಗಿದೆ. ಹೊಸ ಕಾಲೇಜುಗಳ ಆರಂಭದಿಂದ ಒಟ್ಟಾರೆಯಾಗಿ 1920 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ಈ ನಿರ್ಧಾರವನ್ನು ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಕೃಷ್ಣ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತರುವಾಯ ಒಟ್ಟು 21 ಹೊಸ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಆಗಿದೆ. ಈಗ 8 ಹೊಸ ಕಾಲೇಜುಗಳಿಗೆ ನೀಡಿರುವ ಅನುಮತಿಯಿಂದಾಗಿ ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆ 110ಕ್ಕೆ ಏರಲಿದೆ.

ಅನುಮತಿ ಪಡೆದ ಹೊಸ ಕಾಲೇಜುಗಳು : ಅಲ್‌ ಅಮೀನ್‌ ಎಜುಕೇಷನ್‌ ಟ್ರಸ್ಟ್‌, ಬೆಂಗಳೂರು; ಆಲ್ಫಾ ಎಜುಕೇಷನ್‌ ಟ್ರಸ್ಟ್‌, ಬೆಂಗಳೂರು; ನಿಟ್ಟೆ ಎಜುಕೇಷನ್‌ ಟ್ರಸ್ಟ್‌, ಮಂಗಳೂರು; ಆದಿ ಚುಂಚನಗಿರಿ ಎಜುಕೇಷನ್‌ ಟ್ರಸ್ಟ್‌, ನಾಗಮಂಗಲ; ವಿಶ್ವೇಶ್ವರಯ್ಯ ಎಜುಕೇಷನ್‌ ಟ್ರಸ್ಟ್‌, ಬೆಂಗಳೂರು; ಅಭ್ಯುದಯ ಶಿಕ್ಷಣ ಸಂಸ್ಥೆ ಮತ್ತು ಪೀಪಲ್ಸ್‌ ಎಜುಕೇಷನ್‌ ಟ್ರಸ್ಟ್‌, ಬೆಂಗಳೂರು.

ಹೆಚ್ಚುವರಿ ಸೀಟು ಪಡೆದ ಕಾಲೇಜುಗಳು : ಸಿದ್ಧಾರ್ಥ ಕಾಲೇಜು - ತುಮಕೂರು, ಬೇಲಿಮಠ ತಾಂತ್ರಿಕ ಕಾಲೇಜು - ನೆಲಮಂಗಲ, ಅಂಬೇಡ್ಕರ್‌ ತಾಂತ್ರಿಕ ಕಾಲೇಜು, ನಾಗರಬಾವಿ - ಬೆಂಗಳೂರು, ಆಚಾರ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ - ಬೆಂಗಳೂರು, ಎಚ್‌.ಎಂ.ಎಸ್‌. ತಾಂತ್ರಿಕ ಕಾಲೇಜು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X