ಐಟಿ ಸಚಿವರ ಮೂಲಕ ಲೋಕಸಭೆಗೆ ಲ್ಯಾಪ್‌ಟಾಪ್ ಪದಾರ್ಪಣ
ನವದೆಹಲಿ : ಆಯವ್ಯಯವನ್ನು ಮಂಡಿಸುವ ಸಂದರ್ಭದಲ್ಲಿ , ಕಡತಗಳನ್ನೊಳಗೊಂಡ ಸೂಟ್‌ಕೇಸ್ ಹಿಡಿದ ಹಣಕಾಸು ಸಚಿವರು ಪಾರ್ಲಿಮೆಂಟ್ ಪ್ರವೇಶಿಸುವುದನ್ನು ನೀವೆಲ್ಲ ನೋಡಿ ಬಲ್ಲಿರಿ. ಅವರು ಲ್ಯಾಪ್‌ಟಾಪ್ ಯಾಕೆ ಬಳಸಬಾರದು?
ಆ ದಿನ ದೂರವಿಲ್ಲ ಎನಿಸುತ್ತೆ. ಅದಕ್ಕೆ ಪೂರ್ವಭಾವಿಯೋ ಎನ್ನುವಂತೆ- ಇದೇ ಮೊದಲಬಾರಿಗೆ ಸಚಿವರೊಬ್ಬರು ಲೋಕಸಭೆಯಲ್ಲಿ ಶುಕ್ರವಾರ ಲ್ಯಾಪ್‌ಟಾಪ್ ಬಳಸಿದರು. ಈ ಮೂಲಕ ಸಂಸತ್ತಿಗೆ ಲ್ಯಾಪ್‌ಟಾಪ್ ಕಾಲಿರಿಸಿದಂತಾಯಿತು. ಈ ಅಗ್ಗಳಿಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ಅವರದು.
ಆಗಸ್ಟ್ 31 ರಂದು ಕೊನೆಗೊಳ್ಳುವ ಮಾನ್‌ಸೂನ್ ಅಧಿವೇಶನದ ಉಳಿದ ಭಾಗದ ಬಗೆಗಿನ ವಿವರಗಳನ್ನು ಪ್ರಮೋದ್ ಮಹಾಜನ್ ಲ್ಯಾಪ್‌ಟಾಪ್ ಬಳಸಿ ವಿವರಿಸಿದಾಗ, ಸದನದಲ್ಲಿದ್ದ ಸಂಸದರಿಗೆಲ್ಲ ಅಚ್ಚರಿ. ಸದನದ ಅಧ್ಯಕ್ಷ ಜಿಎಂಸಿ ಬಾಲಯೋಗಿ ಅವರು ಮಹಾಜನ್ ಅವರು ಮಾಹಿತಿ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವುದನ್ನು ಸದನದ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಸಂಸತ್ತಿನ ಪ್ರತಿಯಾಬ್ಬ ಸದಸ್ಯರಿಗೂ ಲ್ಯಾಪ್‌ಟಾಪ್ ನೀಡುವಂತೆ ಕಾಂಗ್ರೆಸ್ಸಿನ ಎ.ಸಿ.ಜೋಸ್ ಸೂಚಿಸಿದರು.
ಬಾಲಂಗೋಚಿ :ಲ್ಯಾಪ್‌ಟಾಪ್ ಎಂದರೇನು ಎಂದು ಯಾವ ಸದಸ್ಯರೂ ಕೇಳಿದ್ದು ವರದಿಯಾಗಿಲ್ಲ
ದೇಶದ ಸಾಕ್ಷರತೆಯ ಪ್ರಮಾಣ ಶೇ.65.38
2001 ನೇ ಜನಗಣತಿಯ ಮಾಹಿತಿಯ ಪ್ರಕಾರ ದೇಶದಲ್ಲಿ ಅಕ್ಷರಸ್ಥರ ಪ್ರಮಾಣ ಪ್ರತಿಶತ 65.38 ರಷ್ಟಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಬಚಿಸಿಂಗ್ ರಾವತ್ ಲಿಖಿತ ಹೇಳಿಕೆಯ ಮೂಲಕ ರಾಜ್ಯಸಭೆಯಲ್ಲಿ ತಿಳಿಸಿದರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications