ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನಗರ ಪಾಲಿಕೆಯಿಂದ ಬೆಂಗಳೂರಿನಲ್ಲಿ ‘ಖಾತಾ ಮೇಳ’

By Staff
|
Google Oneindia Kannada News

ಬೆಂಗಳೂರು ಮಹಾನಗರ ಪಾಲಿಕೆ ನಾಗರಿಕರೊಂದಿಗೆ ಸ್ನೇಹ -ಸೌಹಾರ್ದ ಹೊಂದುವ ನಿಟ್ಟಿನಲ್ಲಿ ಸರಳ ಖಾತಾ ಯೋಜನೆಯನ್ನು ಜಾರಿಗೆ ತಂದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀವು, ನಿವೇಶನ- ಮನೆ ಅಥವಾ ಆಸ್ತಿ ಹೊಂದಿದ್ದು, ಖಾತೆ ಮಾಡಿಸಿಕೊಳ್ಳದಿದ್ದಲ್ಲಿ ಅಥವಾ ಖಾತಾ ವರ್ಗಾವಣೆ ಮಾಡಿಸಿಕೊಳ್ಳದಿದ್ದಲ್ಲಿ ಸುಲಭವಾಗಿ ಖಾತೆ ಮಾಡಿಸಿಕೊಳ್ಳುವ - ವರ್ಗಾಯಿಸಿಕೊಳ್ಳುವ ಅವಕಾಶ ಇಲ್ಲಿದೆ.

ಆಗಸ್ಟ್‌ 23ರಿಂದ 25ರವರೆಗೆ ಮೂರು ದಿನ ಮಾತ್ರ ನಡೆಯುವ ಈ ಖಾತಾಮೇಳದಲ್ಲಿ ಸುಲಲಿತ ಖಾತಾ ನೋಂದಣಿಗಾಗಿ ಪುಸ್ತಕ ಖರೀದಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರಿನ 28 ಕಂದಾಯ ಕಚೇರಿಗಳೂ ಸೇರಿದಂತೆ ನಗರದ ಒಟ್ಟು 73 ಸ್ಥಳಗಳಲ್ಲಿ ವಿಶೇಷ ಖಾತಾ ಶಿಬಿರಗಳನ್ನು ನಡೆಸಲಾಗುತ್ತಿದೆ.

ಈ ಮೇಳದಲ್ಲಿ ಖಾತಾ ನೋಂದಣಿ ಮತ್ತು ವರ್ಗಾವಣೆಗೆ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಶೀಲಿಸಿ, ಸೆ.6ರಿಂದ 8ರವರೆಗೆ ನಡೆಯಲಿರುವ ಎರಡನೇ ಹಂತದ ಖಾತಾ ಮೇಳದಲ್ಲಿ ಖಾತಾ ಪ್ರಮಾಣ ಪತ್ರ ನೀಡಲಾಗುವುದು. ದೀರ್ಘ ಕಾಲಾವಧಿಯ ಖಾತಾ ಪ್ರಮಾಣ ಪತ್ರಗಳನ್ನು ಸೆ.23ರಿಂದ 25ರವರೆಗೆ ಮೂರನೇ ಹಂತದ ಮೇಳ- ಶಿಬಿರದಲ್ಲಿ ನೀಡಲಾಗುವುದು.

ಸರಳ ಖಾತಾ ಮಾಹಿತಿ ಎಂಬ ಪುಸ್ತಕವನ್ನೇ ಪಾಲಿಕೆ ಸಿದ್ಧಪಡಿಸಿದ್ದು, ಖಾತೆ ಮಾಡಿಸಿಕೊಳ್ಳ ಬಯಸುವವರಿಗೆ ಈ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ನಮೂನೆ ದೊರಕಲಿದೆ. ಹೆಚ್ಚಿನ ವಿವರಗಳನ್ನು ಆಯಾ ವಾರ್ಡ್‌ನ ಸಹಾಯಕ ಕಂದಾಯ ಅಧಿಕಾರಿಗಳಿಂದ ಪಡೆಯಬಹುದಾಗಿದೆ.

ಮಾಹಿತಿ ಒದಗಿಸುವ ದೂರವಾಣಿ ಸಂಖ್ಯೆಗಳು : ಸಹಾಯವಾಣಿ - 2227822, ಉಪ ಆಯುಕ್ತರು ಪೂರ್ವ - 5582247, ಉಪ ಆಯುಕ್ತರು ಪಶ್ಚಿಮ - 3361704, ಉಪ ಆಯುಕ್ತರು ದಕ್ಷಿಣ - 2223197.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X