ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಇನ್ನೊಂದು ಮೈಲುಗಲ್ಲು: ಹ್ಯಾವ್ಲೆಟ್‌ ಪ್ಯಾಕರ್ಡ್‌ ಜೊತೆ ಒಪ್ಪಂದ

By Staff
|
Google Oneindia Kannada News

ಬೆಂಗಳೂರು : ಐಟಿ ಸೇವೆಗಳನ್ನು ಒದಗಿಸುವಲ್ಲಿ ಎತ್ತಿದ ಕೈ ಎನಿಸಿರುವ ‘ವಿಪ್ರೋ ಟೆಕ್ನಾಲಜೀಸ್‌’ ಹಾಗೂ ಇ-ಮೇನೇಜ್‌ಮೆಂಟ್‌ ಸೇವೆಗಳನ್ನು ಒದಗಿಸುವುದರಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ‘ಹ್ಯಾವ್ಲೆಟ್‌ ಪ್ಯಾಕರ್ಡ್‌’ (ಹೆಚ್‌ಪಿ) ಪರಸ್ಪರ ಕೈಗೂಡಿಸುವ ಒಪ್ಪಂದಕ್ಕೆ ಬಂದಿವೆ.

ನೆಟ್‌ವರ್ಕ್‌ ಮೇನೇಜ್‌ಮೆಂಟ್‌ ಸಲ್ಯೂಷನ್ಸ್‌ಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಹಾಗೂ ಅಳವಡಿಸುವ ‘ ವಿಪ್ರೋ -ಹೆಚ್‌ಪಿ’ ನಡುವಣ ಒಪ್ಪಂದವನ್ನು ಗುರುವಾರ ನಗರದಲ್ಲಿ ಪ್ರಕಟಿಸಲಾಯಿತು. ಇದರಿಂದಾಗಿ ಹೆಚ್‌ಪಿಯಾಂದಿಗೆ ಒಪ್ಪಂದಕ್ಕೆ ಬಂದ ಮೊದಲ ಭಾರತೀಯ ಕಂಪನಿ ಎನ್ನುವ ಹೆಗ್ಗಳಿಕೆ ವಿಪ್ರೋಗೆ ದಕ್ಕಿದೆ.

ವಿಪ್ರೋ -ಹೆಚ್‌ಪಿ ನಡುವಣ ಒಪ್ಪಂದ ಗ್ರಾಹಕರಿಗೆ ಅನುಕೂಲರಕರವಾಗಿದೆ. ಇದರಿಂದಾಗಿ ವಿಪ್ರೋ ದ ಜಾಗತಿಕ ಗ್ರಾಹಕರು ಸಿದ್ಧ ಸೇವೆಗಳನ್ನು ಹೊಂದುವರಲ್ಲದೆ, ಹೆಚ್‌ಪಿ ಗ್ರಾಹಕರಿಗೆ ಕೂಡ ವಿಪ್ರೋ ದ ಸೇವೆಗಳು ಲಭ್ಯವಾಗಲಿವೆ. ಟೆಲಿಕಾಂ ಕ್ಷೇತ್ರದಲ್ಲಿ ವಿಪ್ರೋ ದ ಅಪಾರ ಅನುಭವ, ಸಾಫ್ಟ್‌ವೇರ್‌ ಅಳವಡಿಕೆಯಲ್ಲಿನ ವೇಗ ಹಾಗೂ ಪರಿಣಾಮಕಾರಿ ಸೇವೆಗಳಿಗೆ ಹೆಚ್‌ಪಿ ವೇದಿಕೆಯಾಗಲಿದೆ ಎಂದು ‘ ವಿಪ್ರೋ -ಹೆಚ್‌ಪಿ’ ಜಂಟಿ ಪ್ರಕಟಣೆ ತಿಳಿಸಿದೆ.

ಈ ಒಪ್ಪಂದದ ಯೋಜನೆ 5 ವರ್ಷಗಳ ಹಿಂದಿನದಾಗಿದ್ದು , ಈವರೆಗೂ ಈ ಕುರಿತು ಚಿಂತನೆಗಳು ನಡೆಯುತ್ತಿದ್ದವು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಒಪ್ಪಂದ ನಮ್ಮ ಗ್ರಾಹಕರಿಗೆ ತಮ್ಮ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಹಾಗೂ ಸೇವೆಗಳನ್ನು ಬದಲಿಸಿಕೊಳ್ಳುವಲ್ಲಿ ಸಹಾಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವಿಪ್ರೋ ಟೆಕ್ನಾಲಜಿಸ್‌ನ ಟೆಲಿಕಾಮ್‌ ಸೇವೆಗಳು ವಿಭಾಗದ ಚೀಫ್‌ ಎಕ್ಸಿಕ್ಯೂಟಿವ್‌ ಟಿ.ಕೆ.ಕುರಿಯನ್‌ ಹೇಳಿದರು. ಹೆಚ್‌ಪಿಯ ಏಷ್ಯಾ ಫೆಸಿಫಿಕ್‌ ವಲಯದ ಜನರಲ್‌ ಮೇನೇಜರ್‌ ಸ್ಟೀವ್‌ ಉ-ಯೆಂಗ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X