‘ಇನ್ನೊಮ್ಮೆ ಕೈ ಸುಟ್ಟುಕೊಳ್ಳುವ ತಪ್ಪು ಮಾಡುವುದಿಲ್ಲ ’-ಅಮಿತಾಬ್ ಬಚ್ಚನ್
ಮುಂಬಯಿ : ‘ಇನ್ನೆಂದೂ ರಾಜಕೀಯಕ್ಕೆ ಬರುವುದಿಲ್ಲ ’. ತುಸು ನಾಚಿಕೆಯಿಂದಲೇ ರಾಜಕೀಯದ ಬಗೆಗಿನ ತಮ್ಮ ಅಸಹನೆ, ಅಸಮಾಧಾನವನ್ನು ಬಿಗ್ ಬಿ, ಅಮಿತಾಬ್ ಬಚ್ಚನ್ ತೋಡಿಕೊಂಡರು.
‘ಈಗಾಗಲೇ ನಾನೊಮ್ಮೆ ಕೈ ಸುಟ್ಟು ಕೊಂಡಿದ್ದೇನೆ. ಇನ್ನೊಮ್ಮೆ ಅದೇ ತಪ್ಪು ಮಾಡಲು ಬಯಸುವುದಿಲ್ಲ ’ ಎಂದು ಯುಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಅಮಿತಾಬ್ ಹೇಳಿರುವುದಾಗಿ ಸಿಫಿ.ಕಾಂ ವರದಿ ಮಾಡಿದೆ. ಗೆಳೆಯ ಸಮಾಜವಾದಿ ಪಕ್ಷದ ಅಮರ್‌ಸಿಂಗ್ ಪರವಾಗಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಚಾರ ಮಾಡುವ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಅಮರ್‌ಸಿಂಗ್ ಗೆಳೆಯನಿಗಿಂತ ಮಿಗಿಲಾದವ, ನನ್ನ ಕಿರಿಯ ಸೋದರನಿದ್ದಂತೆ. ಆತ ಕೇಳಿದರೆ ನಾನು ಏನನ್ನಾದರೂ ಮಾಡಲು ಸಿದ್ಧ . ಆದರೆ, ನನ್ನಿಂದ ಸಾಧ್ಯವಾಗದೆ ಹೋಗುವುದನ್ನು ಆತ ಅಪೇಕ್ಷಿಸುವುದಿಲ್ಲ ಎನ್ನುವ ಬಗೆಗೆ ತಮಗೆ ಭರವಸೆ ಇದೆ ಎಂದು ಅಮಿತಾಬ್ ಹೇಳಿದರು. ಈ ಮೂಲಕ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಪ್ರಚಾರ ಕಣದಲ್ಲಿ ಭಾಗವಹಿಸದಿರುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಗೆಳೆಯರಿಗೆ ಎಂದೂ ಇಲ್ಲ ಎಂದು ಹೇಳಿ ಅಭ್ಯಾಸವಿಲ್ಲದ ಅಮಿತಾಬ್, ಅಮರ್‌ಸಿಂಗ್ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುವರೆಂದು ಈ ಮುನ್ನ ವರದಿಯಾಗಿತ್ತು . ಮಾಜಿ ಪ್ರಧಾನಿ ಹಾಗೂ ಬಾಲ್ಯದ ಗೆಳೆಯ ರಾಜೀವ್‌ಗಾಂಧಿ ಒತ್ತಾಯದ ಮೇರೆಗೆ ಈ ಮುನ್ನ ರಾಜಕೀಯಕ್ಕೆ ಅಮಿತಾಬ್ ಪ್ರವೇಶಿಸಿದುದನ್ನು , ಬೇಸತ್ತು ರಾಜಕೀಯ ಸನ್ಯಾಸ ಸ್ವೀಕರಿಸಿದುದನ್ನು ಇಲ್ಲಿ ಸ್ಮರಿಸಬಹುದು. 1984 ರ ಲೋಕಸಭೆ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಿಂದ ಅಮಿತಾಬ್ ಸಂಸತ್ತಿಗೆ ಆಯ್ಕೆಯಾಗಿದ್ದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications