ಆಗಸ್ಟ್ ಅಂತ್ಯಕ್ಕೆಮೈಸೂರಿನಲ್ಲಿ ಸಂಚಾರಿ ಹೃದಯ ಚಿಕಿತ್ಸಾ ಪ್ರಯೋಗಾಲಯ
ಮೈ ಸೂರು : ಆಗಸ್ಟ್ 27ರಿಂದ 31ರವರೆಗೆ ಭಗವಾನ್ಮಹಾವೀರ ಜೈನ್ ಹಾರ್ಟ್ ಸೆಂಟರ್ನ ಸಂಚಾರಿ ಹೃದಯ ಚಿಕಿತ್ಸಾ ಪ್ರಯೋಗಾಲಯ ಮೈಸೂರಿನಲ್ಲಿ ಓಡಾಡಲಿದೆ.
ಸೆಪ್ಟೆಂಬರ್ನಲ್ಲಿ ಪ್ರತಿವಾರದ ಕೊನೆಯ ದಿನಗಳಲ್ಲಿ ಮೈಸೂರು ನಗರ ಮತ್ತು ಹತ್ತಿರದ ಹಳ್ಳಿಗಳಲ್ಲಿ ಸಂಚಾರಿ ಹೃದಯ ಚಿಕಿತ್ಸಾ ಪ್ರಯೋಗಾಲಯ ಸಂಚರಿಸಲಿದೆ. ಹಾರ್ಟ್ ಸೆಂಟರ್ನ ನಿರ್ವಹಣಾ ನಿರ್ದೇಶಕ ಡಾ. ಎಸ್. ಎಸ್. ರಮೇಶ್ ಅವರ ಪ್ರಕಾರ ಹೃದಯ ಚಿಕಿತ್ಸೆಯ ಅನುಭವೀ ವೈದ್ಯರು ಸಂಚಾರಿ ಪ್ರಯೋಗಾಲಯದಲ್ಲಿರುತ್ತಾರೆ. ಹೃದಯದ ಸಮಸ್ಯೆಯಿರುವವರಿಗೆ ಕೊರೋನರಿ ಆ್ಯಂಜಿಯೋಗ್ರಾಮ್ಸ್ ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಸಂಚಾರಿ ಪ್ರಯೋಗಾಲಯದಲ್ಲಿ ನೀಡಲಾಗುವುದು.
ಭಗವಾನ್ಮಹಾವೀರ ಜೈನ್ ಹಾರ್ಟ್ ಸೆಂಟರ್ ಕಳೆದ ವರ್ಷವಷ್ಟೇ ಆರಂಭವಾಗಿತ್ತು. ಸಂಚಾರಿ ಪ್ರಯೋಗಾಲಯಕ್ಕೆ ಅಗತ್ಯವಿರುವ ವಸ್ತುಗಳನ್ನು , ವೈದ್ಯಕೀಯ ಸಲಕರಣೆಗಳನ್ನು ಹೊಂದಿಸುವುದು ಕಷ್ಟದ ಕೆಲಸ. ಆದರೂ ಜೈನ್ ಹಾರ್ಟ್ ಸೆಂಟರ್ನ ಪ್ರಯೋಗಾಲಯ ಸುಸಜ್ಜಿತವಾಗಿದೆ. ರೋಗಿಗೆ ಆ್ಯಂಜಿಯೋಗ್ರಾಮ್ಸ್ ಚಿಕಿತ್ಸೆಯನ್ನು ಆತನ ಮನೆಯ ಮುಂದೆಯೇ ನಡೆಸಲಾಗುವುದು. ಅಲ್ಲದೆ ಕುಟುಂಬದ ಡಾಕ್ಟರು ಸೇರಿದಂತೆ ಮನೆ ಮಂದಿಯೆಲ್ಲ ಪ್ರಯೋಗಾಲಯದ ಬಳಿಯೇ ಇರುವುದರಿಂದ ರೋಗಿಗೆ ಆತ್ಮವಿಶ್ವಾಸ ಮೂಡುತ್ತದೆ ಎಂದು ರಮೇಶ್ ಹೇಳುತ್ತಾರೆ.
ಸಂಚಾರಿ ಪ್ರಯೋಗಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಈ ನಂಬರ್ಗಳಿಗೆ ಫೋನಾಯಿಸಬಹುದು. 9580-2267333, 2267600
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications