ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷಗಳ ನಂತರಬೆಂಗಳೂರಿನಲ್ಲಿ ಸಿನಿಮಾ ಹಬ್ಬದ ಸಂಭ್ರಮ

By Staff
|
Google Oneindia Kannada News

ಬೆಂಗಳೂರು : ನಗರದಲ್ಲಿ ಅಕ್ಟೋಬರ್‌ 10ರಿಂದ 20ರವರೆಗೆ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ಶಂಕರ್‌ನಾಗ್‌ ಚಿತ್ರಮಂದಿರ(ಸಿಂಫೋನಿ) ಸಮೀಪದ ಕ್ಯಾನೋಪಿ ಹೋಟೆಲನ್ನು ತನ್ನ ಮಾರಾಟ ಕೇಂದ್ರವಾಗಿ ರೂಪಿಸಲು ನಿರ್ಧರಿಸಿದೆ.

ಚಿತ್ರೋತ್ಸವದಲ್ಲಿ ಚಿತ್ರಗಳನ್ನು ಪ್ರದರ್ಶಿಸಲು ಕಂಟೋನ್ಮೆಂಟ್‌ ಪ್ರದೇಶದ ಸಿಂಫೋನಿ, ಗೆಲಾಕ್ಸಿ, ರೆಕ್ಸ್‌, ಲಿಡೋ, ನಾಗ ಹಾಗೂ ಕೆಂಪೇಗೌಡ ರಸ್ತೆಯಲ್ಲಿರುವ ಪಲ್ಲವಿ, ಸಾಗರ್‌, ಅಭಿನಯ್‌, ಸಂತೋಷ್‌, ಕಪಾಲಿ ಮತ್ತು ಕಲ್ಪನಾ ಚಿತ್ರಮಂದಿರಗಳನ್ನು ಆಯ್ಕೆ ಮಾಡಲಾಗಿದೆ.

ಚಿತ್ರೋತ್ಸವ ನಡೆಯಲಿರುವುದು ಕಂಠೀರವ ಕ್ರೀಡಾಂಗಣದಲ್ಲಿ. ಅಲ್ಲಿ, ಧ್ವನಿ ವ್ಯವಸ್ಥೆ ಹಾಗೂ ವೇದಿಕೆ ಸಜ್ಜುಗೊಳಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಿ, ಚಿತ್ರೋತ್ಸವದ ವಿವಿಧ ವಿಭಾಗಗಳ ಜವಾಬ್ದಾರಿ ವಹಿಸಿಕೊಡಲಾಗಿದೆ. ಇದರೊಂದಿಗೆ ಕೆಲಸ ಮಾಡಲು 120 ಮಂದಿ ಸದಸ್ಯರ ಸಮನ್ವಯ ಸಮಿತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಚಿಸಿದೆ. ಈಗಾಗಲೇ ಚಿತ್ರೋತ್ಸವ ತಯಾರಿಗಾಗಿ ಸಭೆ ಸೇರಿರುವ ಸಮಿತಿ, 17 ಅಂಶದ ಕಾರ್ಯಸೂಚಿಯನ್ನೂ ಸಿದ್ಧಪಡಿಸಿದೆ.

ಹತ್ತು ವರ್ಷಗಳ ನಂತರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಯೋಜಿಸುವ ಅವಕಾಶ ಬೆಂಗಳೂರಿಗೆ ದಕ್ಕಿದೆ. ವಿಶ್ವದ ವಿವಿಧ ಭಾಗಗಳಿಂದ ಬರುವ ಪ್ರತಿನಿಧಿಗಳಿಗೆ ಬೆಂಗಳೂರು ಭೇಟಿಯನ್ನು ಅವಿಸ್ಮರಣೀಯವಾಗಿ ಮಾಡಲು ಸರಕಾರ ಎಲ್ಲ ಪ್ರಯತ್ನ ನಡೆಸಿದೆ.

ಇದೇ ಸಂದರ್ಭದಲ್ಲಿ ಕನ್ನಡ ಚಿತ್ರೋದ್ಯಮ ನಡೆದು ಬಂದ ದಾರಿಯ ಬಗ್ಗೆ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕರ ಚಿತ್ರಗಳ ತುಣುಕುಗಳನ್ನು ಆಯ್ದು ಪ್ರದರ್ಶಿಸಲಾಗುವುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಬಾರಿ ತಾಂತ್ರಿಕ ತೊಂದರೆಗಳು ಎದುರಾಗದಂತೆ ಎಚ್ಚರ ವಹಿಸಲಾಗುವುದು. ಕಳೆದ ಬಾರಿ ಚಿತ್ರಮಂದಿರಗಳಲ್ಲಿನ ತಾಂತ್ರಿಕ ದೋಷಗಳು ಚಿತ್ರೋತ್ಸವದಲ್ಲಿ ಕಿರಿಕಿರಿ ಉಂಟುಮಾಡಿತ್ತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X