Get Updates
Get notified of breaking news, exclusive insights, and must-see stories!

ರೈಸ್‌ಟೆಕ್‌ ಕಂಪನಿ ಬಾಸುಮತಿಗೆ ಪೇಟೆಂಟ್‌: ಆತಂಕಕ್ಕೆ ಕಾರಣವಿಲ್ಲವೆ?

ವಾಷಿಂಗ್ಟನ್‌: ಟೆಕ್ಸಾನ್‌ನ ರೈಸ್‌ಟೆಕ್‌ ಕಂಪನಿ ತನ್ನ ಮೂರು ವಿಧದ ಬಾಸುಮತಿ ಅಕ್ಕಿಯ ಮಾರಾಟಕ್ಕೆ ಆಗಸ್ಟ್‌ 14 ರಂದು ಪಡೆದಿರುವ ಪೇಟೆಂಟ್‌ ಭಾರತದ ಬಾಸುಮತಿ ಅಕ್ಕಿಯ ಮಾರಾಟವನ್ನು ಯಾವುದೇ ರೀತಿ ಪ್ರತಿಬಂಧಿಸುವುದಿಲ್ಲ ಎಂದು World Agricultural Forum India ಕೋ ಆರ್ಡಿನೇಟರ್‌ ಮದನ್‌ ದಿವಾನ್‌ ಹೇಳಿದ್ದಾರೆ.

ಟೆಕ್ಸಾನ್‌ ಕಂಪನಿಯ ಬಾಸುಮತಿ ಅಕ್ಕಿಯ ಮಾರಾಟಕ್ಕೆ ನೀಡಿರುವ ಪೇಟೆಂಟ್‌ನಿಂದ ಭಾರತದ ಬಾಸುಮತಿ ಅಕ್ಕಿಯ ಮಾರಾಟಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ . ಯಾವುದೇ ಟ್ರೇಡ್‌ಮಾರ್ಕ್‌, ಬ್ರಾಂಡ್‌ ಹಾಗೂ ವಿಶೇಷ ಮಾರುಕಟ್ಟೆಯ ಹಕ್ಕುಗಳನ್ನು ರೈಸ್‌ಟೆಕ್‌ ಕಂಪನಿಗೆ ನೀಡಿಲ್ಲ ಎಂದು ಮದನ್‌ ದಿವಾನ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟೆಕ್ಸಾನ್‌ನ ರೈಸ್‌ಟೆಕ್‌ ಕಂಪನಿ ಮೂರು ವಿಧದ ಬಾಸುಮತಿ ಅಕ್ಕಿಯನ್ನು ಅಭಿವೃದ್ಧಿಪಡಿಸಿದ್ದು , ಅವುಗಳನ್ನು ಯುಎಸ್‌ ಪೇಟೆಂಟ್‌ ಕಚೇರಿಯಲ್ಲಿ ನೋಂದಾಯಿಸಿದೆ. 1997-2000 ಕೋರ್ಟ್‌ ಹೋರಾಟದ ನಂತರ ಭಾರತೀಯರು ಕೂಡ ತಮ್ಮದೇ ಆದ ಬಾಸುಮತಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮದನ್‌ ಹೇಳಿದ್ದಾರೆ. ಆದರೆ, ರೈಸ್‌ಟೆಕ್‌ ಕಂಪನಿ ಪಡೆದಿರುವ ಪೇಟೆಂಟ್‌, ಭಾರತೀಯರು ತಾವು ಅಭಿವೃದ್ಧಿಪಡಿಸಿದ ತಳಿಗಳ ಮೇಲೆ ತ್ವರಿತವಾಗಿ ಪೇಟೆಂಟ್‌ ಪಡೆಯುವುದಕ್ಕೆ ಕರೆಗಂಟೆಯಾಗಿದೆ ಎನ್ನುವುದನ್ನು ಮದನ್‌ ಒಪ್ಪಿಕೊಂಡಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+