‘ಮಾಲಿನ್ಯ ರಹಿತ ವಿಧಾನಸೌಧ’: ಸರ್ಕಾರದ ಕನಸು ನನಸಾದೀತೆ?
ಬೆಂಗಳೂರು : ವಿಧಾನಸೌಧದ ಸುತ್ತಲ 2 ಕಿ.ಮೀ. ತ್ರಿಜ್ಯದ ಪ್ರದೇಶವನ್ನು ಕೇಂದ್ರ ಆಡಳಿತ ಜಿಲ್ಲೆ ಎಂದು ಘೋಷಿಸಿ, ಈ ವ್ಯಾಪ್ತಿಯಲ್ಲಿ ಭಾರೀ ವಾಹನ ಸಂಚಾರವನ್ನು ಸ್ಥಗಿತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ವಿಧಾನಸೌಧದ ಸೌತ್ ಬ್ಲಾಕ್ ನಿರ್ಮಾಣವಾದ ನಂತರ ವಾಹನ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಲಿದ್ದು, ವಿಧಾನಸೌಧದ ಆಸುಪಾಸಿನಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಸರ್ಕಾರ ಈ ರೀತಿ ಚಿಂತಿಸುತ್ತಿದೆ ಎಂದು ಕಚೇರಿ ಮೂಲಗಳು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ಡಾಟ್ ಕಾಂ ವರದಿ ಮಾಡಿದೆ. ಇದು ಜಾರಿಗೆ ಬಂದಲ್ಲಿ ವಿಧಾನಸೌಧದಿಂದ 2 ಕಿ.ಮೀ. ತ್ರಿಜ್ಯದ ಪ್ರದೇಶದಲ್ಲಿ ಬಸ್, ವ್ಯಾನ್ ಹಾಗೂ ಆಟೋರಿಕ್ಷಾ ಸಂಚರಿಸುವಂತಿಲ್ಲ.
ರಾಜ್ಯ ಸಚಿವಾಲಯ, ಜನರಲ್ ಪೋಸ್ಟ್ ಆಫೀಸ್, ಮಹಾ ಲೆಕ್ಕಿಗರ ಕಚೇರಿ, ಟೆಲಿಗ್ರಾಫ್ ಕಚೇರಿ ಹಾಗೂ ಹೈಕೋರ್ಟ್ -ವಿಧಾನಸೌಧದ 2 ಕಿ.ಮೀ. ತ್ರಿಜ್ಯದ ಪ್ರದೇಶದಲ್ಲಿ ಇವೆಲ್ಲಾ ಇವೆ. ಜೊತೆಗೆ ಪ್ರವಾಸೀ ಕೇಂದ್ರ ಕಬ್ಬನ್ ಉದ್ಯಾನವಿದೆ. ಈ ಎಲ್ಲಾ ಜಾಗೆಗಳಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಬಿಎಂಟಿಸಿ ಬಸ್ಸುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸಂಚರಿಸುತ್ತಿವೆ. ವಿಧಾನಸೌಧದ ಸೌತ್‌ಬ್ಲಾಕ್ ನಿರ್ಮಾಣ ಪೂರ್ಣಗೊಂಡ ನಂತರ ವಿಧಾನಸೌಧದ ಆಜೂಬಾಜಿನಲ್ಲಿ ಪ್ರವಾಸೀ ವಾಹನಗಳು, ಕಚೇರಿಗಳ ಸಿಬ್ಬಂದಿ ವಾಹನಗಳು ಹಾಗೂ ಕಚೇರಿ ಕೆಲಸಕ್ಕಾಗಿ ಬರುವವರ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರವನ್ನು ರದ್ದು ಪಡಿಸುವ ಸಾಧ್ಯತೆಯಿದೆ.
ಈ ಯೋಚನೆಯನ್ನು ಜಾರಿಗೆ ತರುವ ಮುನ್ನಾ ಕ್ರಮಗಳನ್ನು ಸದ್ಯದಲ್ಲೇ ಸರ್ಕಾರ ಕೈಗೊಳ್ಳಲಿದೆ. ಸರ್ಕಾರ ಈ ವಿಷಯದಲ್ಲಿ ಹಠಾತ್ ಹೆಜ್ಜೆ ಇಡುವುದಿಲ್ಲ. ಸೌತ್ ಬ್ಲಾಕ್ ನಿರ್ಮಾಣದ ಕಾಮಗಾರಿ ಮುಂದಿನ ವಾರದಿಂದ ಶುರುವಾಗಲಿದ್ದು, ವಾಹನ ಸಂಚಾರದ ಬದಲೀ ವ್ಯವಸ್ಥೆಗಾಗಿ ಬ್ಲೂಪ್ರಿಂಟ್ ಇನ್ನೂ ಸಿದ್ಧವಾಗಿಲ್ಲ. ಜನಾಭಿಪ್ರಾಯ ಸಂಗ್ರಹಿಸಿದ ನಂತರವೇ ತನ್ನ ಯೋಚನೆಗೆ ಚಾಲನೆ ನೀಡಲು ಅದು ನಿರ್ಧರಿಸಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.
ಅಂದಹಾಗೆ, ಸೌತ್‌ಬ್ಲಾಕ್ ಕಟ್ಟಡ ವಿಧಾನಸೌಧವನ್ನೇ ಹೋಲಲಿದ್ದು, 8 ಅಂತಸ್ತಿನ ಈ ಕಟ್ಟಡ 600 ಕಾರುಗಳನ್ನು ಪಾರ್ಕ್ ಮಾಡಲೂ ಅವಕಾಶ ಕಲ್ಪಿಸಲಿದೆ. ಇದರ ಅಂದಾಜು ವೆಚ್ಚ 100 ಕೋಟಿ ರುಪಾಯಿ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications