ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇನ್ಫೋಸಿಸ್‌’ಭಾರತದ ನಂ.1ಕಂಪನಿ : TNS Survey-2001

By Staff
|
Google Oneindia Kannada News

ನವದೆಹಲಿ : ‘ಇನ್ಫೋಸಿಸ್‌’ ಭಾರತದ ಅತ್ಯಂತ ಜನಪ್ರಿಯ ಕಂಪನಿ ಹಾಗೂ ಇನ್ಫೋಸಿಸ್‌ನ ಸಿಇಓ ಎನ್‌.ಆರ್‌.ನಾರಾಯಣಮೂರ್ತಿ ದೇಶದ ಅತ್ಯುತ್ತಮ ಮೂವರು ಕಾರ್ಯ ನಿರ್ವಾಹಕ ಅಧಿಕಾರಿಗಳಲ್ಲಿ ಒಬ್ಬರು ಎಂದು Taylor Nelson SofresMode ( ಟಿಎನ್‌ಎಸ್‌) ನ 2001 ನೇ ಇಸವಿಯ ಸಮೀಕ್ಷೆ ತಿಳಿಸಿದೆ. ಇನ್ಫೋಸಿಸ್‌ ಮಾತ್ರವಲ್ಲದೆ ಇತರ ICE14 ಕಂಪನಿಗಳು ಟಾಪ್‌ 60 ಕಂಪನಿಗಳಲ್ಲಿ ಸೇರಿವೆ ಎಂದೂ ಸಮೀಕ್ಷೆ ತಿಳಿಸಿದೆ.

ಹಳೆಯ ಹುಲಿ ರಿಲಯನ್ಸ್‌ ಇಂಡಸ್ಟ್ರೀಸ್‌- ವಿಪ್ರೋ, ಹಿಂದೂಸ್ತಾನ್‌ ಲಿವರ್‌, ಲಾರ್ಸನ್‌ ಅಂಡ್‌ ಟರ್ಬೊ, ಬಜಾಜ್‌ ಆಟೊ, ಎಚ್‌ಡಿಎಫ್‌ಸಿ, ಕಾಲ್ಗೇಟ್‌ ಪಾಮೊಲಿವ್‌, ಟಾಟಾ ಪವರ್‌ ಅಂಡ್‌ ಬಿಪಿಎಲ್‌ಗಳೊಂದಿಗೆ 2 ನೇ ಸ್ಥಾನವನ್ನು ಹಂಚಿಕೊಂಡಿದೆ ಎಂದು Business Baronನಲ್ಲಿ ಪ್ರಕಟವಾಗಿರುವ ಸಮೀಕ್ಷೆ ತಿಳಿಸಿದೆ. ಇನ್ಫೋಸಿಸ್‌ನ ನಾರಾಯಣಮೂರ್ತಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಧೀರುಬಾಯ್‌ ಅಂಬಾನಿ ಹಾಗೂ ವಿಪ್ರೋದ ಅಜೀಂ ಪ್ರೇಂಜಿ ದೇಶದ ಮೂವರು ಅತ್ಯುತ್ತಮ ಸಿಇಓಗಳು ಎಂದು ಸಮೀಕ್ಷೆ ಬಣ್ಣಿಸಿದೆ.

ಕಾರ್ಯ ನಿರ್ವಹಣೆ ಗುಣಮಟ್ಟ ಹಾಗೂ ನೀತಿ, ಹಣಕಾಸು ಪರಿಸ್ಥಿತಿ, ಷೇರುದಾರರಿಗೆ ಹಿಂತಿರುಗಿಸುವಿಕೆ ಹಾಗೂ ಕಂಪನಿಯ ನೀತಿಗಳನ್ನು ಸಮೀಕ್ಷೆಯಲ್ಲಿ ಮಾನದಂಡವಾಗಿ ಬಳಸಲಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಸಮೀಕ್ಷೆಯ ಏಜೆನ್ಸಿಯಾಗಿರುವ ಟಿಎನ್‌ಎಸ್‌ ತಾನು ಪಟ್ಟಿ ಮಾಡಿರುವ ಅತ್ಯುತ್ತಮ 60 ಕಂಪನಿಗಳ ಪಟ್ಟಿಯಲ್ಲಿ 16 ತಂತ್ರಜ್ಞಾನ ಕಂಪನಿಗಳನ್ನು ಸೇರಿಸಿದೆ. ಅವುಗಳಲ್ಲಿ ಮುಖ್ಯವಾದವು-

ಇನ್ಫೋಸಿಸ್‌, ವಿಪ್ರೋ, ಎಚ್‌ಸಿಎಲ್‌, ಸತ್ಯಂ ಕಂಪ್ಯೂಟರ್ಸ್‌, ಎನ್‌ಐಟಿಟಿ, ರಿkುೕ, ವಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌, ಹ್ಯೂಗಸ್‌ ಸಾಫ್ಟ್‌ವೇರ್‌, ಪೊಲಾರಿಸ್‌, ಗ್ಲೋಬಲ್‌ ಟೆಲಿ, ಡಿಜಿಟಲ್‌ ಎಕ್ವಿಪ್‌ಮೆಂಟ್ಸ್‌, ಸಿಲ್ವರ್‌ಲೈನ್‌, ಎಸ್‌ಎಸ್‌ಐ ಅಂಡ್‌ ವಿಷುಯಲ್‌ ಸಾಫ್ಟ್‌ ಟೆಕ್ನಾಲಜೀಸ್‌.

ಹಣಕಾಸು ವಲಯದಲ್ಲಿ ‘ಎಚ್‌ಡಿಎಫ್‌ಸಿ, ಎಲ್‌ಐಸಿ ಹಾಗೂ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ’ಗಳು ಸಮೀಕ್ಷೆಯ ಟಾಪ್‌ 60 ಕಂಪನಿಗಳಲ್ಲಿ ಸೇರಿವೆ. ಆಟೋ ಕ್ಷೇತ್ರದ ಹುದ್ದರಿಗಳಾದ ಬಜಾಜ್‌ ಆಟೋ, ಹೀರೋ ಹೊಂಡಾ, ಟೆಲ್ಕೋ, ಮಹೀಂದ್ರ ಅಂಡ್‌ ಮಹೀಂದ್ರ ಹಾಗೂ ಟಿವಿಎಸ್‌ ಸುಜುಕಿ ಕಂಪನಿಗಳು ಕೂಡ ಈ ಪಟ್ಟಿಯಲ್ಲಿವೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X