Get Updates
Get notified of breaking news, exclusive insights, and must-see stories!

ಬೆಳಗಾವಿಯ ವೀರಕನ್ನಡ ಮಹಿಳೆಯರಿಗೆಪುತ್ತಿಗೆ ಶ್ರೀಗಳಿಂದ ಸನ್ಮಾನ

ಬೆಳಗಾವಿ : ಕನ್ನಡ ನಾಡಿಗಾಗಿ ಜೀವದ ಹಂಗು ತೊರೆದು ಹೋರಾಡಿದ ಸತ್ಯಭಾಮಾ ಮತ್ತು ಸೀತಾ ಬಾಯಿಯವರ ಹೆಸರನ್ನು ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀಗಳಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಸಲಹೆ ಮಾಡಿದ್ದಾರೆ.

ನಗರದಲ್ಲಿ ಭಾನುವಾರ, ಮರಾಠಿಗರ ಪುಂಡಾಟಿಕೆಯನ್ನು ದಿಟ್ಟತನದಿಂದ ಎದುರಿಸಿದ ಸೀತಾಬಾಯಿ ನರಸಿಂಹರಾವ ಮತ್ತು ಸತ್ಯಭಾಮ ಅರವಿಂದರಾವ ಜೋಶಿ ಅವರನ್ನು ವೀರಕನ್ನಡ ಮಹಿಳೆಯರೆಂದು ಗುರುತಿಸಿ, ಸ್ವಾಮೀಜಿ ಸನ್ಮಾನಿಸಿದರು.

ಒನಕೆ ಓಬವ್ವ ಮತ್ತು ಕಿತ್ತೂರ ಚೆನ್ನಮ್ಮರ ಸಾಲಿಗೆ ಸೇರುವ ಸತ್ಯಭಾಮ ಮತ್ತು ಸೀತಾಬಾಯಿ ಅವರ ವೀರಗಾಥೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕಿದ್ದಲ್ಲಿ ಅವರ ಹೆಸರು ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗುವುದು ಸೂಕ್ತ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಆರ್‌. ಎಚ್‌. ಕುಲಕರ್ಣಿ, ಬೆಳಗಾವಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಮತ್ತು ಕನ್ನಡ ಭಾಷೆಗಾಗಿ ನಡೆದ ಹೋರಾಟಗಳನ್ನು ಸ್ಮರಿಸಿಕೊಳ್ಳುತ್ತಾ ಕನ್ನಡಿಗರ ಮತ್ತು ಮರಾಠಿ ಭಾಷಿಕರ ನಡುವೆ ನಡೆದ ಘರ್ಷಣೆಯಲ್ಲಿ ಬೆಳಗಾವಿ ಮಹಿಳೆಯರ ಪಾತ್ರ ದೊಡ್ಡದು ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+