ಕರಾಚಿಯಲ್ಲಿ ಗುಂಡಿನ ಚಕಮಕಿ : ದಾವೂದ್- ಶಕೀಲ್‌ಗೆ ಗಾಯ?
ಮುಂಬಯಿ : ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಗಾಯಗೊಂಡಿದ್ದಾರೆ. ಶನಿವಾರ ಕರಾಚಿಯಲ್ಲಿ ಎರಡು ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯ ಪರಿಣಾಮವಿದು ಎಂದು ಪಾಕಿಸ್ತಾನದ ಬೇಹುಗಾರಿಕಾ ದಳದ ಮೂಲಗಳು ತಿಳಿಸಿವೆ. ಆದರೆ ಮುಂಬಯಿ ಪೊಲೀಸರು ಈ ಕುರಿತು ಅಧಿಕೃತ ಮಾಹಿತಿಯ ನಿರೀಕ್ಷೆಯಲ್ಲಿದ್ದಾರೆ.
ಗುಂಡಿನ ಚಕಮಕಿಯಲ್ಲಿ ದಾವುದ್‌ಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆದರೆ ಛೋಟಾ ಶಕೀಲ್ ಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗುತ್ತಿದೆ. ಕೆಲವು ಮೂಲಗಳು ಛೋಟಾ ಶಕೀಲ್ ಸತ್ತೇ ಹೋಗಿದ್ದಾನೆ ಎಂಬ ಸುದ್ದಿಯನ್ನೂ ಹಬ್ಬಿಸುತ್ತಿವೆ. ಆದರೆ ಈ ವಿಷಯ ಇನ್ನೂ ದೃಢಪಟ್ಟಿಲ್ಲ.
1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಹಿಂದಿನ ಮಿದುಳು ದಾವುದ್ ಇಬ್ರಾಹಿಂ ಹಾಗೂ ಹಲವಾರು ಕೊಲೆಗಳ ಆರೋಪ ಎದುರಿಸುತ್ತಿರುವ ಶಕೀಲ್‌ಗಾಗಿ ಮುಂಬಯಿ ಪೊಲೀಸರು ತಲಾಷು ನಡೆಸುತ್ತಿದ್ದಾರೆ. ಗುಂಡಿನ ಚಕಮಕಿ ನಡೆದಿರುವುದು ಎರಡು ಗುಂಪುಗಳ ಮಧ್ಯೆ ಎನ್ನಲಾಗಿದ್ದು, ಪೂರ್ಣ ವಿವರಗಳು ಇನ್ನೂ ದೊರಕಿಲ್ಲ.
ದಾವೂದ್ ಹಾಗೂ ಆತನ ಸಹಚರರಿಗೆ ನಾವು ಆಶ್ರಯ ಕೊಟ್ಟಿಲ್ಲ. ಪಾಕಿಸ್ತಾನದಲ್ಲಿ ಅವರು ಇಲ್ಲವೇ ಇಲ್ಲ ಎಂದು ಆಗ್ರಾ ಶೃಂಗಸಭೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಹೇಳಿದ್ದರು. ಈ ಕಾರಣಕ್ಕಾಗಿ ಈ ಘಟನೆ ನಿಜವೇ ಆದಲ್ಲಿ, ಇದೊಂದು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ. ಪಾಕಿಸ್ತಾನ ದಾವೂದ್ ತನ್ನಲ್ಲಿ ಇಲ್ಲ ಎನ್ನುವುದನ್ನು ಈಗಲೂ ಸಮರ್ಥಿಸಿಕೊಳ್ಳಲು ಯತ್ನಿಸುವುತ್ತಿರುವುದರಿಂದಲೇ ಹಕೀಕತ್ತು ಬಯಲಿಗೆ ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೋನಾಯಿಸಿದ ಶಕೀಲ್ : ಛೋಟಾ ಶಕೀಲ್ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಮುಂಬಯಿ ಪೊಲೀಸರಿಗೆ ಫೋನಾಯಿಸಿದ್ದು, ಪಾಕಿಸ್ತಾನದಲ್ಲಿ ಯಾವುದೇ ದಾಳಿ, ಗುಂಡಿನ ಚಕಮಕಿ ನಡೆದಿಲ್ಲ. ತಾನು ಸುರಕ್ಷಿತವಾಗಿ ಇದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ವ್ಯಕ್ತಿ ಛೋಟಾ ಶಕೀಲ್ ಹೌದೋ ಅಲ್ಲವೋ ಎಂಬ ಅನುಮಾನ ಪೊಲೀಸರದು.
ಮುಂಬಯಿ ಪೊಲೀಸರೆಲ್ಲಾ ಭಾನುವಾರ ಸಭೆ ಸೇರಿ ಈ ಪ್ರಕರಣದ ಬಗ್ಗೆ ಚರ್ಚಿಸಲಿದ್ದಾರೆ. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಬಂದಿಲ್ಲ. ಬೇಹುಗಾರಿಕಾ ದಳದೊಂದಿಗೆ ಪೊಲೀಸರು ಸಂಪರ್ಕ ಇಟ್ಟುಕೊಂಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications