ನಗರದಲ್ಲಿ ಅಪರಾಧ ನಿಯಂತ್ರಿಸಲು ವಿಶೇಷ ಗಸ್ತು ವ್ಯವಸ್ಥೆ
ಬೆಂಗಳೂರು : ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳಿಂದ ನಾಗರಿಕರಲ್ಲಿ ಮೂಡಿರುವ ಭಯ ನಿವಾರಿಸುವ ಪ್ರಯತ್ನವಾಗಿ ಸುಮಾರು 100 ವಿಶೇಷ ದ್ವಿಚಕ್ರ ವಾಹನಗಳಲ್ಲಿ ಪೊಲೀಸರು ರಾತ್ರಿ ಗಸ್ತು ತಿರುಗಲಿದ್ದಾರೆ.
ದಂಡುಪಾಳ್ಯ ಗ್ಯಾಂಗ್‌ನರಿಂದ ನಡೆಯಿತೆನ್ನಲಾದ ಮತ್ತೆರಡು ಕೊಲೆಗಳಿಂದ ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಮನೆಯಲ್ಲಿರುವುದಕ್ಕೂ ಭಯ ಹುಟ್ಟಿಕೊಂಡಿದೆ. ನಗರದಲ್ಲಿರುವ ಹಿರಿಯ ನಾಗರಿಕರ ಜೀವ ಸುರಕ್ಷತೆಯ ಬಗ್ಗೆ ಅನಿವಾಸೀ ಭಾರತೀಯರೂ ಕಳವಳ ವ್ಯಕ್ತಪಡಿಸಿರುವುದು ಸರಕಾರದ ಅಪಾರಧ ನಿಯಂತ್ರಣ ಸಾಮರ್ಥ್ಯದ ಬಗ್ಗೆ ಸಂಶಯ ಮೂಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ರಾತ್ರಿ ಹೊತ್ತು ನಗರಾದ್ಯಂತ ಪೊಲೀಸರು ವಿಶೇಷ ವಾಹನದಲ್ಲಿ ಗಸ್ತು ತಿರುಗಲಿದ್ದಾರೆ. ದ್ವಿಚಕ್ರವಾಹನಗಳಿಗೆ ವಿಶೇಷ ಸೈರನ್ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಹಿರಿಯ ನಾಗರಿಕರು ಮತ್ತು ಸಾರ್ವಜನಿಕರು ಸೈರನ್ ಸದ್ದು ಕೇಳಿ ನಿಶ್ಚಿಂತೆಯಿಂದ ನಿದ್ದೆ ಹೋಗಬಹುದು. ಸಿಓಡಿ ಕೇಂದ್ರ ಕಚೇರಿಯಲ್ಲಿ ನಡೆದ ಪೊಲೀಸ್ ಮತ್ತು ಹಿರಿಯ ನಾಗರಿಕರ ಅನೌಪಚಾರಿಕ ಮಿಲನದ ನಂತರ ರಾಜ್ಯ ಪೊಲೀಸ್‌ಮಹಾ ನಿರ್ದೇಶಕ ವಿ.ವಿ. ಭಾಸ್ಕರ್‌ಈ ವಿಷಯವನ್ನು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
- ಮೊದಲ ಸುತ್ತಿನಲ್ಲಿ 100 ವಾಹನಗಳು ರಾತ್ರಿ ಗಸ್ತು ತಿರುಗಲಿದ್ದು ನಂತರ 1000 ವಿಶೇಷ ದ್ವಿಚಕ್ರ ವಾಹನಗಳನ್ನು ಕೊಳ್ಳಲಾಗುವುದು.
- ಪ್ರತಿ ಠಾಣೆಯ ಮೂವರು ಪೊಲೀಸ್ ಅಧಿಕಾರಿಹಗಳು ಠಾಣಾ ವಲಯದ ಸಾರ್ವಜನಿಕರ ಜೊತೆ ಅನೌಪಚಾರಿಕ ಸಂಪರ್ಕ ಇಟ್ಟುಕೊಂಡು ಸಾರ್ವಜನಿಕರ ಕಷ್ಟ ಸುಖ ತಿಳಿದುಕೊಳ್ಳಲಿದ್ದಾರೆ.
- ಪ್ರತಿ ತಿಂಗಳ ಎರಡನೇ ಶನಿವಾರ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಕಾನ್‌ಸ್ಟೇಬಲ್ ಮತ್ತು ಸಾರ್ವಜನಿಕರ ಸಭೆ ನಡೆಸಲಾಗುತ್ತದೆ.
- ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳ ಆರಂಭ
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications