Get Updates
Get notified of breaking news, exclusive insights, and must-see stories!

ಕ್ಷಾಮದ ಊರಲ್ಲಿ ಪಶುಗಳಿಗೆ ನೀರು, ಹುಲ್ಲು ನೀಡುತ್ತಿರುವ ಗೋಶಾಲೆ

ಬಳ್ಳಾರಿ : ಜಿಲ್ಲೆಯ ಸುಡು ಬಿಸಿಲಿಗೆ ತತ್ತರಿಸುತ್ತಿರುವ ಸಣಕಲು ದನ ಕರುಗಳಿಗಾಗಿ ಸಾಯಿ ಸೇವಾ ಟ್ರಸ್ಟ್‌ ಗೋಶಾಲೆಯಾಂದನ್ನು ನಿರ್ಮಿಸಿದೆ.

ವೇಣೀವೀರಪುರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಈ ಗೋಶಾಲೆಯಲ್ಲಿ ಈಗಾಗಲೇ 300 ಹಸು ಕರುಗಳು, ಎತ್ತು, ಎಮ್ಮೆಗಳು ಹೊಟ್ಟೆ ತಂಪಾಗಿಸಿಕೊಂಡು ಮೆಲುಕು ಹಾಕುತ್ತಿವೆ. 14 ಎಕರೆ ವಿಸ್ತೀರ್ಣದಲ್ಲಿ ವಿಶಾಲ ಗೋಶಾಲೆಯನ್ನು ಕಟ್ಟಲಾಗಿದೆ.

ಮನೆ ಯಜಮಾನ ಕುಡಿಯುವ ನೀರನ್ನರಸಿ ಮನೆ ಬಿಟ್ಟು ಗುಳೇ ಹೊರಡುವಾಗ, ಆಸಕ್ತರು ಪ್ರೀತಿಯ ದನ ಕರುಗಳ ಹಗ್ಗ ಬಿಚ್ಚಿ ಸಾಕಬಹುದು ಎಂಬ ಬೋರ್ಡನ್ನು ಗೋವಿನ ಕುತ್ತಿಗೆಗೆ ಸಿಕ್ಕಿಸಿ, ಅದರ ಪಾಡಿಗೆ ಬಿಟ್ಟು ಬಿಟ್ಟ.

ಊರಿನಾದ್ಯಂತ ಚಿಕ್ಕೆ ಹನಿ ನೀರಿಲ್ಲದಿರುವಾಗ ಈ ಪ್ರಾಣಿಗಳ ಹೊಟ್ಟೆಗೆಲ್ಲಿಂದ ಮೇವು ಬರಬೇಕು? ಈ ಪರಿಸ್ಥಿತಿಯನ್ನು ನೋಡಿಯೇ ನಾವು ಗೋಶಾಲೆಯನ್ನು ಕಟ್ಟಿದೆವು ಎಂದು ಸಾಯಿ ಸೇವಾ ಟ್ರಸ್ಟ್‌ನ ಪ್ರತಾಪ್‌ ರೆಡ್ಡಿ ಪತ್ರಿಕೆಯಾಂದರ ಬಳಿ ಮಾತನಾಡುತ್ತಾ ಹೇಳುತ್ತಾರೆ.

ಜಾನೆ ಕುಂಟೆ, ಕುಡ್ತಿನಿ, ಹರಿಗಿನದೋಣಿ, ಬೆಳಗಲ್‌ ವೇಣೀವೀರಪುರಂಗಳ ಪಶುಗಳಿಗೆ ಗೋಶಾಲೆಯಾಂದು ವರದಾನವಾಗಿ ಪರಿಣಮಿಸಿದೆ. ಮೇವು, ಅಕ್ಕಚ್ಚು ಮತ್ತು ಯಥೇಷ್ಟ ನೀರು ಈ ಪ್ರಾಣಿಗಳಿಗೆ ಗೋಶಾಲೆಯಲ್ಲಿ ಸಿಗುತ್ತದೆ.

ಈ ಕಾರ್ಯದಲ್ಲಿ ಸಾಯಿ ಸೇವಾ ಟ್ರಸ್ಟ್‌ನೊಂದಿಗೆ ‘ಕ್ಯೂಪಾ’ (Compassion Unlimited Plus Action )ಕೂಡ ಕೈಜೋಡಿಸಿದೆ. ಕ್ಯೂಪಾ ವತಿಯಿಂದ ಈಗಾಗಲೇ ಮೊದಲ ಹಂತದ ಸಹಾಯಾರ್ಥವಾಗಿ 10 ಟ್ರಕ್‌ಲೋಡ್‌ ಮೇವು ಗೋಶಾಲೆಗೆ ಸಾಗಿಸಲಾಗಿದೆ. ಬೆಂಗಳೂರಿನಲ್ಲಿಯೂ ಮೇವು ಪೂರೈಕೆದಾರರನ್ನು ಸಂಪರ್ಕಿಸಿ ಕ್ಯೂಪಾ ನೆರವು ಕೇಳುತ್ತಿದೆ. ಪ್ರತಿದಿನ ಗೋಶಾಲೆಗೆ 1 ಟ್ರಕ್‌ಲೋಡ್‌ ಮೇವಿನ ಅಗತ್ಯವಿದೆ.

ಪಶುಗಳನ್ನು ಬೆಳಗ್ಗೆ ಗೋಶಾಲೆಗೆ ಕರೆತಂದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಕರೆದುಕೊಂಡು ಹೋಗುವವರೂ ಇದ್ದಾರೆ. ತಾಲ್ಲೂಕಿನಲ್ಲಿ ಬರದ ತೀವ್ರತೆ ಕಡಿಮೆಯಾಗುವವರೆಗೆ ಈ ನೆರವು ನೀಡಲಾಗುವುದು ಎಂದು ರೆಡ್ಡಿ ಹೇಳುತ್ತಾರೆ. ಗೋಶಾಲೆಯ ಬಗ್ಗೆ ತಾಲ್ಲೂಕಿನ ಜನರಿಗೆ ಸಾಕಷ್ಟು ಮಾಹಿತಿ ತಿಳಿದಿಲ್ಲ. ಇಲ್ಲವಾದಲ್ಲಿ ಇನ್ನಷ್ಟು ಪಶುಗಳು ಇಲ್ಲಿ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.

ಅತ್ತ ಹಟ್ಟಿಯ ಪಶುಗಳನ್ನೂ ಸಾಕಲಾಗದೇ, ಇತ್ತ ಅವುಗಳನ್ನು ಮುಕ್ಕಾಸಿಗೆ ಕಸಾಯಿಕಾನೆಗೆ ಮಾರಲು ಕರಳು ಒಪ್ಪದೇ ಸಂಕಟ ಅನುಭವಿಸುತ್ತಿರುವ ರೈತರಿಗೆ ಗೋಶಾಲೆ ಒಂದು ಆಶಾಕಿರಣ. ಒಂದು ಪುಟ್ಟ ಊರಿನಿಂದ 30-40 ಹಸುಗಳನ್ನು ಒಟ್ಟಿಗೇ ಒಬ್ಬ ರೈತ ಹೊಡೆದುಕೊಂಡು ಬಂದಿರುವ ಘಟನೆಗಳೂ ಉಂಟು. ತಮ್ಮ ದನಕರುಗಳನ್ನು ಕಿಲೋಮೀಟರುಗಟ್ಟಲೆ ಹೊಡೆದುಕೊಂಡು ಬರುವ ರೈತನಿಗೆ ಅವುಗಳ ನೆತ್ತಿ ತಂಪಾದಾಗ ನೆಮ್ಮದಿ.

ಬಳ್ಳಾರಿಯ ದಲಾರೆ ಗುಡ್ಡ, ದಾಸರ ಗುಡ್ಡದಲ್ಲಿ ಕುಚ್ಚಿ ಹುಲ್ಲೂ ಬೆಳೆದಿಲ್ಲ. ಬಳ್ಳಾರಿಗೆ ಬಡಿದ ಬರದಿಂದ ನರಳಬೇಕಿದ್ದ ಪಶುಗಳನ್ನು ಗೋಶಾಲೆ ಬಚಾವು ಮಾಡಿರುವುದರ ಬಗ್ಗೆ ಗ್ರಾಮಸ್ಥರಿಗೆ ಕೃತಜ್ಞತೆ ಇದೆ. ಆದರೆ ಕೆಲಸವಿಲ್ಲದ ಮೀನುಗಾರರನಿಗೆ ಮೀನು ಕೊಟ್ಟು ಮಾಡುವ ಉಪಕಾರಕ್ಕಿಂತ ಮಳೆ ಬಂದು ಕೆರೆ ತುಂಬಿದರೆ, ಅದೇ ಭಾಗ್ಯ ಅಲ್ಲವೇ ?

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+