ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ವಿ.ವಿ.ಗೆ ಹತ್ತು : ದಶಮಾನೋತ್ಸವಪ್ರಯುಕ್ತ ದೂರಶಿಕ್ಷಣ ಡಿಪ್ಲೊಮ

By Staff
|
Google Oneindia Kannada News

ಬೆಂಗಳೂರು : ಹಂಪಿ ವಿಶ್ವ ವಿದ್ಯಾಲಯಕ್ಕೆ ದಶಮಾನೋತ್ಸವದ ಸಡಗರ! ಈ ಸಂಭ್ರಮವನ್ನು ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಆಚರಿಸಲಿದ್ದು, ವಸ್ತು ಸಂಗ್ರಹಾಲಯ, ಮಾಹಿತಿ ಕೇಂದ್ರದ ಸ್ಥಾಪನೆ, ದಶಮಾನೋತ್ಸವ ಭವನ ನಿರ್ಮಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಜೊತೆಗೆ ದೂರಶಿಕ್ಷಣದಲ್ಲಿ ಏಳು ಹೊಸ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಚ್‌. ಜೆ. ಲಕ್ಕಪ್ಪಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಶಮಾನೋತ್ಸವದ ಅಂಗವಾಗಿ ವಿಶ್ವವಿದ್ಯಾಲಯ ಹಾಕಿಕೊಂಡಿರುವ ಯೋಜನೆಗಳು-

  • ‘ಸಚಿತ್ರ ಕರ್ನಾಟಕ’ ಗ್ರಂಥವೂ ಸೇರಿದಂತೆ ಒಟ್ಟು 25 ಗ್ರಂಥಗಳ ಪ್ರಕಟಣೆ
  • ಮುಂದಿನ ಎರಡು ತಿಂಗಳ ಅವಧಿಯಲ್ಲಿ ವಿವಿಯ ಎಲ್ಲ ವಿಭಾಗಗಳ ಗಣಕೀಕರಣ
  • ‘ನೃಪತುಂಗ ವನ’ ಎಂಬ ಗಿಡಮೂಲಿಕೆ-ಔಷಧಿ ವನ ಸ್ಥಾಪನೆ
  • ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಅಧ್ಯಯನ ಪೀಠ, ವಿಜಯನಗರ ಅಧ್ಯಯನ ಪೀಠ ಮತ್ತು ಜೈನ ಅಧ್ಯಯನ ಪೀಠ ಸ್ಥಾಪನೆ
  • ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದಶಮಾನೋತ್ಸವ ಭವನ ನಿರ್ಮಾಣ
  • ‘ಕರ್ನಾಟಕ, ಹಿಂದೆ, ಇಂದು ಮತ್ತು ಮುಂದೆ’ ಎಂಬ ಘೋಷಣೆಯಡಿಯಲ್ಲಿ ವಿಶ್ವ ವಿದ್ಯಾಲಯದ ಆವರಣದಲ್ಲಿ ‘ ಕನ್ನಡ ಲೋಕ ’ ವಸ್ತುಸಂಗ್ರಹಾಲಯವನ್ನು ತೆರೆಯಲಾಗುವುದು.
  • ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ನವೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ‘ಹಂಪಿ ವಿವಿ ಮಾಹಿತಿ ಕೇಂದ್ರ’ವನ್ನು ತೆರೆಯಲಾಗುವುದು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X