Get Updates
Get notified of breaking news, exclusive insights, and must-see stories!

ಅಮೆರಿಕಾದ ಪರಮಭಕ್ತನಿಂದ ಸಾಯಿಬಾಬಾಗೆ 600 ಕೋಟಿ ದೇಣಿಗೆ

ಹೈದರಾಬಾದ್‌ : ಎಲ್‌ಟಿಟಿಇ ಭಯೋತ್ಪಾದಕರ ಬಂದೂಕಿನ ಗುರಿಗೆ ಈಡಾಗುವ ಮೂಲಕ ಸುದ್ದಿಯಲ್ಲಿದ್ದ ವಿವಾದಿತ ದೇವಮಾನವ ಸಾಯಿಬಾಬಾ ಮತ್ತೆ ಸುದ್ದಿಕೇಂದ್ರಕ್ಕೆ ಬಂದಿದ್ದಾರೆ. ಈ ಬಾರಿ ಅವರು ಯಾವುದೇ ಬೆದರಿಕೆಯನ್ನು ಎದುರಿಸುತ್ತಿಲ್ಲ , ಭಾರೀ ಮೊತ್ತವನ್ನು ದೇಣಿಗೆಯಾಗಿ ಸ್ವೀಕರಿಸುತ್ತಿದ್ದಾರೆ!

ಅಮೆರಿಕ ಮೂಲದ ಸಾಯಿಭಕ್ತರೊಬ್ಬರು 600 ಕೋಟಿ ರುಪಾಯಿ ದೇಣಿಗೆಯನ್ನು ಅರ್ಪಿಸುವುದಾಗಿ ಬಾಬಾ ಅವರಿಗೆ ವಾಗ್ದಾನ ಮಾಡಿದ್ದಾರೆ. ಮುಂದಿನ ವಾರ ಅಮೇರಿಕಾದಿಂದ ನೇರವಾಗಿ ಪ್ರಶಾಂತಿ ನಿಲಯಕ್ಕೆ ಆಗಮಿಸಲಿರುವ ದೇವಮಾನವನ ಪರಮಭಕ್ತ , ಬೃಹತ್‌ ಮೊತ್ತವನ್ನು ಪರಮಗುರುವಿಗೆ ಹಸ್ತಾಂತರಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಬಾಬಾ ಬಹಿರಂಗಪಡಿಸಿದ್ದಾರೆ.

ಅಂದಹಾಗೆ, ಸಾಯಿಬಾಬಾ ಅವರು ನೇರವಾಗಿ ದೇಣಿಗೆ ಸ್ವೀಕರಿಸುವುದು ಅಪರೂಪ. ವ್ಯಕ್ತಿಯಾಬ್ಬ ಭಾರೀ ಮೊತ್ತವನ್ನು ದೇಣಿಗೆಯಾಗಿ ನೀಡುತ್ತಿರುವುದಂತೂ ಇದೇ ಮೊದಲು. ಸಾಯಿಕೃಪೆ ಸಾಮಾನ್ಯವೆನ್ನುತ್ತೀರಾ?

post your view on this article

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+