Get Updates
Get notified of breaking news, exclusive insights, and must-see stories!

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನ್ಯಾ. ರೆಡ್ಡಿ, ಭಾನ್‌ ಪ್ರಮಾಣ ವಚನ

ನವದೆಹಲಿ : ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರಾಗಿದ್ದ ನ್ಯಾಯಮೂರ್ತಿ ಪಿ.ವೆಂಕಟರಾಮ ರೆಡ್ಡಿ ಹಾಗೂ ಹಿರಿಯ ನ್ಯಾಯಾಧಿಶರಾಗಿದ್ದ ನ್ಯಾ. ಅಶೋಕ್‌ ಭಾನ್‌ ಅವರು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಈ ಇಬ್ಬರು ಹಿರಿಯ ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧಿಶರಾದ ಎ.ಎಸ್‌. ಆನಂದ್‌ ಪ್ರತಿಜ್ಞಾವಿಧಿ ಭೋದಿಸಿದರು. ಈ ಸಮಾರಂಭದಲ್ಲಿ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ, ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ಭಾಗವಹಿಸಿದ್ದರು.

ಈ ಇಬ್ಬರು ನ್ಯಾಯಾಧೀಶರ ಪ್ರಮಾಣ ವಚನದೊಂದಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆ 26ಕ್ಕೆ ಏರಿದೆ. ಮತ್ತು ಸಂಪೂರ್ಣ ಸಾಮರ್ಥ್ಯವನ್ನು ಗಳಿಸಿಕೊಂಡಿದೆ.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+