Get Updates
Get notified of breaking news, exclusive insights, and must-see stories!

ಉದ್ಯಾನದಿ ಉದ್ಭವಮೂರ್ತಿ!

Gopura of a Templeಬೆಂಗಳೂರು : ಅಕ್ರಮ ದೇವಾಲಯಗಳನ್ನು ಮುಲಾಜಿಲ್ಲದೆ ಕೆಡವಿ ಅಂತ ಮುಖ್ಯಮಂತ್ರಿ ಕೃಷ್ಣ ಅಪ್ಪಣೆ ಕೊಡಿಸಿದ್ದಾರೆ. ಆದರೆ ನಗರದ 40 ಪಾರ್ಕುಗಳಲ್ಲಿ ಹಿಂಡುಗಟ್ಟಲೆ ಭಕ್ತರು ಕೈಮುಗಿದು ನಿಂತಿರುತ್ತಾರೆ. ಇದನ್ನು ನೋಡುವ ಪಾಲಿಕೆ ಸಿಬ್ಬಂದಿ, ‘ಎಂಥಾ ಇಕ್ಕಟ್ಟಿಗೆ ಸಿಕ್ಕಿಸಿದೆಯಪ್ಪಾ, ನಿನ್ನನ್ನು ಕೆಡವೋ ಗತಿ ಬಂತಲ್ಲಾ ’ ಅಂತ ಒರಲುತ್ತಿದ್ದಾರೆ.

ಈ ಇಲ್ಲೀಗಲ್‌ ದೇವತಾಣಗಳನ್ನು ಬಿಸಿಸಿ ನಿರ್ದಾಕ್ಷಿಣ್ಯವಾಗಿ ಕೆಡವುತ್ತದೆಯೇ? ಸದ್ಯಕ್ಕಂತೂ ಇಲ್ಲ. ಹಬ್ಬಗಳ ಕಾಲದಲ್ಲಿ ದೇವಸ್ಥಾನ ಬೀಳಿಸೋದು ಅಂದರೆ... ಅದಕ್ಕೇ ಪರ್ವ ಕಾಲ ಮುಗಿದ ನಂತರ ಇವುಗಳನ್ನು ನೆಲಸಮ ಮಾಡುವ ಕೆಲಸ ಕೈಗೆತ್ತಿಕೊಳ್ಳಲು ಬಿಸಿಸಿ ನಿರ್ಧರಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 400 ಉದ್ಯಾನವನಗಳಿವೆ. ಈ ಪೈಕಿ 150 ಅಭಿವೃದ್ಧಿ ಹೊಂದಿದಂಥವು. ಇವು ಬರೇ ವಾಯುಸಂಚಾರಕ್ಕೆ, ಹರಟೆಗೆ, ಪ್ರೇಮಕ್ಕೆ ಹೇಳಿ ಮಾಡಿಸಿದ ತಾಣಗಳಾಗಿ ಈಗ ಉಳಿದಿಲ್ಲ. ಗಂಟೆ ಸದ್ದು- ಮಂತ್ರಘೋಷ ಜೋರಾಗಿ ಕೇಳುತ್ತಿದೆ.

ನಮೂನೆಗೆ-

  • ಸಜ್ಜನ್‌ ರಾವ್‌ ವೃತ್ತ ಒಂದು ಸುಂದರ ಪಾರ್ಕು. ಅದರ 30 ಮೀ. ಉದ್ದ 17 ಮೀ. ಅಗಲದ ಜಾಗೆ ಈಗ ಅಯ್ಯಪ್ಪನದು ! ಬಗಲಲ್ಲೇ ಶನೇಶ್ವರನೂ ಉಂಟು.
  • ಹನುಮಂತನಗರದ ಹರಿಹರ ಗುಡ್ಡ ಪಾರ್ಕಿನಲ್ಲಿ ಹರಿಹರೇಶ್ವರನಿಗೆ ಪೂಜೆಯಾಗುತ್ತಿದೆ. ಇವನು ಆಕ್ರಮಿಸಿಕೊಂಡಿರುವ ಸ್ಥಳ 22 ಅಡಿ ಉದ್ದ 50 ಅಡಿ ಅಗಲ.
  • ಜಯನಗರದ 4 ಹಾಗೂ 6ನೇ ಬ್ಲಾಕಿನಲ್ಲಿರುವ ಎರಡು ಪಾರ್ಕುಗಳು ಈಗ ಪೂರ್ಣ ಪ್ರಮಾಣದ ಗಣೇಶ ದೇವಾಲಯಗಳು. ಅವು ಪಾರ್ಕು ಎನ್ನಲು ಯಾವ ಪುರಾವೆಗಳೂ ಇಲ್ಲ.
ಗಣೇಶ ಚತುರ್ಥಿ ಇಂಚು ದೂರವಿದೆ. ಬೆಂಗಳೂರಿನ ತುಂಬೆಲ್ಲಾ ಭಕ್ತಿ ತುಂಬಿ ತುಳುಕುತ್ತಿದೆ. ಈ ಹೊತ್ತಿನಲ್ಲಿ ದೇವಸ್ಥಾನ ಕೆಡವಿದರೆ ಬದುಕೋದುಂಟೇ ಎಂಬ ಧೋರಣೆ ತಳೆದಿರುವ ಬಿಸಿಸಿ ತಣ್ಣಗಾಗಿದೆ. ಕೃಷ್ಣಾಜ್ಞೆ ಹೊರ ಬಿದ್ದಾಗ ಮುಲಾಜಿಲ್ಲದೆ ಅಕ್ರಮ ದೇವಾಲಯಗಳ ಮೇಲೆ ಬುಲ್ಡೋಜರನ್ನು ಹರಿಸಿದ ಎಂಜಿನಿಯರುಗಳಿಗೀಗ ‘ಲತ್ತೆ ಹೊಡೆದರೆ..?’ ಅನ್ನುವ ಭಯ ಕಾಡುತ್ತಿದೆಯಂತೆ. ಗಣೇಶ ದೊಡ್ಡ ಕೆರೆಯಲ್ಲಿ ಮುಳುಗಲಿ. ಆಮೇಲೆ ನೋಡೋಣ ಅನ್ನುವ ಸೊಲ್ಲು ಹೆಚ್ಚಾಗಿದೆಯೇ ವಿನಃ ಕೆಡವೇ ತೀರೋಣ ಎಂಬ ಠರಾವು ಈಗ ಕಾವು ಕಳಕೊಂಡಿದೆ.

ಬಿಸಿಸಿ ಆಯುಕ್ತ ಅಶೋಕ್‌ ದಳವಾಯಿ ಅಕ್ರಮ ದೇವತಾಣಗಳಿಗೆ ಖಂಡಿತ ಉಳಿಗಾಲವಿಲ್ಲ. ಅವುಗಳನ್ನು ಪಟ್ಟಿ ಮಾಡಿರೆಂದು ಸಿಬ್ಬಂದಿಗೆ ಹೋಂವರ್ಕ್‌ ಕೊಟ್ಟಿದ್ದಾರೆ. ಪಟ್ಟಿ ಬಹುತೇಕ ಸಿದ್ಧವಾಗಿದೆ. ಆದರೆ, ಇದು ಭಾವನಾತ್ಮಕ ಹಾಗೂ ಸೂಕ್ಷ್ಮ ವಿಷಯವಾದ್ದರಿಂದ ಏಕಾಏಕಿ ದಾಳಿ ಸಾಧ್ಯವಿಲ್ಲ ಎನ್ನುತ್ತಾರವರು.

ಅಂದಹಾಗೆ, ಅಕ್ರಮ ಮೂರುತಿಗಳಿಗೆ ಪೂಜೆ ನಡೆಯುತ್ತಿರುವ ಪಾರ್ಕುಗಳ ಮೊದಲ ಪಟ್ಟಿ ಇಂತಿದೆ....

ಯಡಿಯೂರು ಪಾರ್ಕು, ರಾಮಾಂಜನೇಯ ಗುಡ್ಡ, ಬಿಟಿಎಂ ಲೇಔಟ್‌ ಪಾರ್ಕ್‌, ಲಕ್ಷ್ಮಣ್‌ ರಾವ್‌ ಬೌಲೆವಾರ್ಡ್‌, ಚಂದ್ರ ಲೇಔಟ್‌ ಪಾರ್ಕ್‌, ಮಲ್ಲೇಶ್ವರಂ ಪಾರ್ಕ್‌, ದೊಮ್ಮಲೂರು ಪಾರ್ಕ್‌, ಆವಲಹಳ್ಳಿ ಪಾರ್ಕ್‌, ಕದಿರೇನಹಳ್ಳಿ ಪಾರ್ಕ್‌ ಹಾಗೂ ಪುಲಿಕೇಶಿನಗರ ಪಾರ್ಕ್‌. ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ಈ ಸುದ್ದಿ ಪ್ರಕಟಿಸಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+