Get Updates
Get notified of breaking news, exclusive insights, and must-see stories!

ಆ.22 ರಿಂದ ಮುಂಬಯಿಯಲ್ಲಿ ಬಸ್‌,ಆಸ್ಪತ್ರೆ,ನೀರು...ಎಲ್ಲವೂ ಉಚಿತ!

ಮುಂಬಯಿ : ಇತ್ತೀಚೆಗೆ ಮುಂಬಯಿ ಉಚ್ಛ ನ್ಯಾಯಲಯವು ಮುಷ್ಕರದ ಹೆಸರಿನಲ್ಲಿ ಅಗತ್ಯ ಸೇವೆಗಳನ್ನು ನಿಲ್ಲಿಸಬಾರದು ಎಂದು ಎಚ್ಚರಿಸಿ ನಗರಲ್ಲಿ ಮುಷ್ಕರವನ್ನೇ ನಿಷೇಧಿಸಿಬಿಟ್ಟಿದೆ. ಮನವಿಗಳಿಗೆ ಕಿವುಡಾಗಿರುವ ಸರಕಾರವನ್ನು ಹೇಗೆ ಮಾತಾಡಿಸುವುದು ? ಅದಕ್ಕೆ ಅಲ್ಲಿನ ಮಹಾನಗರ ಪಾಲಿಕೆ ನೌಕರರು ಹೊಸ ಮಾರ್ಗ ಕಂಡು ಹಿಡಿದಿದ್ದಾರೆ.ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಂಬಯಿ ಮಹಾನಗರ ಪಾಲಿಕೆಯ ನೌಕರರು ಗಣೇಶ ಚತುರ್ಥಿ ಹಬ್ಬದಿಂದ 10 ದಿನಗಳವರೆಗೆ ತಮ್ಮ ಸೇವೆಗಳಿಗೆ ಪ್ರತಿಯಾಗಿ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ . ಸಾರ್ವಜನಿಕರಿಗೆ ಎಲ್ಲವೂ ಬಿಟ್ಟಿ. ಈ ಮೂಲಕ ಅತ್ತ ಸರಕಾರದ ಬೊಕ್ಕಸಕ್ಕೆ ಏಟು, ಇತ್ತ ಪ್ರಯಾಣಿಕರಿಗೆ ಮತ್ತು ಬಳಕೆದಾರರಿಗೆ ಗಣೇಶ ಹಬ್ಬದ ಗಿಫ್ಟ್‌, ಜೊತೆಗೆ ನಿಯತ್ತಾಗಿ ಕೋರ್ಟ್‌ ಆದೇಶ ಪಾಲನೆ- ಮೂರು ಕೆಲಸವನ್ನು ಏಕಕಾಲಕ್ಕೆ ಮಾಡಲಿದ್ದಾರೆ.

ಆಗಸ್ಟ್‌ 22ರಿಂದ 10 ದಿನಗಳವರೆಗೆ ಮುಂಬಯಿ ಮಹಾನಗರ ಪಾಲಿಕೆ ನೌಕರರು ಸರಕಾರಕ್ಕೆ ಆದಾಯ ತರುವ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿದ್ದಾರೆ. ಈ ಪ್ರಕಾರ, ಬಸ್‌ನಲ್ಲಿ ಟಿಕೇಟು ನೀಡುವುದಿಲ್ಲ , ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯಕೀಯ ಶುಲ್ಕ ವಿಧಿಸುವುದಿಲ್ಲ, ಆಸ್ತಿ ಹಾಗೂ ನೀರಿನ ತೆರಿಗೆಯನ್ನೂ ವಿಧಿಸುವುದಿಲ್ಲ ಎಂದು ಅಲ್ಲಿನ ಕಾರ್ಮಿಕ ಮುಖಂಡ ಶರದ್‌ ರಾವ್‌ ಹೇಳಿದ್ದಾರೆ.

ಈ ಹೊಸ ನಮೂನೆಯ ಪ್ರತಿಭಟನೆಯಿಂದ ರಾಜ್ಯ ಸರಕಾರಕ್ಕೆ ಪ್ರತಿದಿನ 80 ಕೋಟಿ ರೂಪಾಯಿ ನಷ್ಟವಾಗಲಿದೆ. ಆಗಸ್ಟ್‌ 22ರೊಳಗೆ ಮಹಾನಗರ ಪಾಲಿಕೆ ನೌಕರರಿಗೆ ಬರಬೇಕಾದ ಎಕ್ಸ್‌ಗ್ರೇಷಿಯಾ ವೇತನವನ್ನು ನೀಡುವ ಬಗ್ಗೆ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ರೈಲ್ವೇ ನೌಕರರೂ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+