Get Updates
Get notified of breaking news, exclusive insights, and must-see stories!

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ನೆರವು: ಎಸ್‌.ಎಂ.ಕೃಷ್ಣ ಒತ್ತಾಯ

ಬೆಂಗಳೂರು : ಮುಂಬಯಿ, ಹೈದರಾಬಾದ್‌ ಹಾಗೂ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ವಿಶೇಷ ನೆರವು ನೀಡಿರುವಂತೆಯೇ ರಾಜ್ಯದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೂ ವಿಶೇಷ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಕೃಷ್ಣ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.ಗುರುವಾರ ಮಧ್ಯಾಹ್ನ ಮೇಖ್ರೀ ವೃತ್ತದ ರಸ್ತೆ ವಿಭಜಕವನ್ನು ನಗರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರದಲ್ಲಿ ಆಡಳಿತದಲ್ಲಿದ್ದ ಹಿಂದಿನ ಸರಕಾರಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆರವು ನೀಡುತ್ತಾ ಬಂದಿವೆ. ಆದರೆ, ರಾಜ್ಯಕ್ಕೆ ಮಾತ್ರ ಆ ವಿಶೇಷ ನೆರವು ದೊರೆತಿಲ್ಲ ಎಂದು ಆರೋಪಿಸಿದರು.

ರಾಷ್ಟ್ರದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ 100 ರುಪಾಯಿ ಶುಲ್ಕ ಪಡೆಯಲಾಗುತ್ತದೆ. ಆ ಹಣವನ್ನು ರಾಷ್ಟ್ರದ ಬೇರೆಕಡೆಗಳಲ್ಲಿ ನಿರ್ಮಿಸುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಳಸಲಾಗುತ್ತದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ತಾವು ಕಳೆದ ಆರು ತಿಂಗಳಿನಿಂದಲೂ ಪ್ರಧಾನಿಯವರಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಸಂಸತ್‌ ಸದಸ್ಯರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಕರೆ ನೀಡಿದರು.

ದೇವನಹಳ್ಳಿಯ ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಗೆ ಕನಿಷ್ಠ 3 ಸಾವಿರ ರುಪಾಯಿಗಳು ಬೇಕು. ರಾಜ್ಯ ಸರ್ಕಾರ ಶಕ್ತಿ ಮೀರಿ ಇದಕ್ಕೆ ಹಣ ವಿನಿಯೋಗಿಸುತ್ತಿದೆ. ಕೇಂದ್ರ ಇದಕ್ಕೆ ಪೂರಕವಾಗಿ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಪ್ರೇಮಾ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಾಫರ್‌ ಷರೀಫ್‌, ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್‌, ಎ. ಕೃಷ್ಣಪ್ಪ, ನಫೀಸಾ ಫಜಲ್‌, ಪ್ರತಿಪಕ್ಷ ನಾಯಕರಾದ ಕೆ.ಎಚ್‌. ಶ್ರೀನಿವಾಸ್‌, ಶಾಸಕ ಸುರೇಶ್‌ ಕುಮಾರ್‌, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೊದಲಾದವರು ಪಾಲ್ಗೊಂಡಿದ್ದರು.

ಬಹಿಷ್ಕಾರ : ಮೇಖ್ರೀ ವೃತ್ತದ ರಸ್ತೆ ವಿಭಜಕವನ್ನು ಸಮರ್ಪಿಸುವ ಕಾರ್ಯಕ್ರಮ ಸಂಪೂರ್ಣವಾಗಿ ಕಾಂಗ್ರೆಸ್‌ ಸಾಧನೆಯ ಸಮಾವೇಶವಾದ ಕಾರಣ ತಾವು ಇದನ್ನು ಪ್ರತಿಭಟಿಸಿ ಕಾರ್ಯಕ್ರಮ ಬಹಿಷ್ಕರಿಸಿದ್ದಾಗಿ ಭಾರತೀಯ ಜನತಾಪಕ್ಷದ ಶಾಸಕರಾದ ಸುರೇಶ್‌ ಕುಮಾರ್‌ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+