ಕಾರಿಡಾರ್‌ಯೋಜನೆಗೆ ಅನುಮತಿ: ಪರಿಸರ ಸಚಿವಾಲಯ ತರಾಟೆಗೆ
ಬೆಂಗಳೂರು : 2,000 ಕೋಟಿ ರುಪಾಯಿ ಅಂದಾಜು ವೆಚ್ಚದ ಬೆಂಗಳೂರು- ಮೈಸೂರು ಕಾರಿಡಾರ್ (ಬಿಎಂಐಸಿ) ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಗಸ್ಟ್ 8ರಂದು ಹಸಿರು ನಿಶಾನೆ ತೋರಿದೆ. ಆದರೆ...
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೆೃಸ್ (ಎನ್‌ಐಸಿಇ) ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಅದು 30 ಕರಾರುಗಳಿಗೆ ಬದ್ಧವಾಗಿರಬೇಕು ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ. ನದಿ ತಟಗಳ ಮರಳನ್ನು ಯೋಜನೆಗೆ ಬಳಸಕೂಡದೆಂಬುದೂ ಕರಾರುಗಳಲ್ಲಿ ಒಂದು. ಆದರೆ ಎನ್‌ಐಸಿಇ ಯೋಜನೆಯ ತನ್ನ ಪ್ರಸ್ತಾವನೆಯಲ್ಲಿ ನದಿ ತಟಗಳ ಮರಳನ್ನು ಬಳಸುವುದಾಗಿ ಹೇಳಿತ್ತು.
ಕಳೆದ 5 ವರ್ಷಗಳಿಂದ ಪರಿಸರ ವಾದಿಗಳ ಒಂದಿಲ್ಲೊಂದು ತಕರಾರಿಗೆ ಒಳಗಾಗಿ ಮುಂದೂಡಿಕೊಂಡೇ ಬಂದಿರುವ ಈ ಯೋಜನೆ ಗೆ ಈಗಲೂ ಎಡರುಗಳು ಎದುರಾಗುತ್ತಿವೆ. 3 ಪರಿಸರ ಹಾಗೂ ಗ್ರಾಹಕ ಸಂಸ್ಥೆಗಳು ಕಾರಿಡಾರ್ ಯೋಜನೆಗೆ ಅನುಮತಿ ಕೊಟ್ಟಿರುವ ಕೇಂದ್ರ ಪರಿಸರ ಸಚಿವಾಲಯವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ಇದು ಸಂವಿಧಾನ ಬಾಹಿರ ಎಂದು ಆರೋಪಿಸಿವೆ. ಕೇಂದ್ರದ ಈ ನಡಾವಳಿಯನ್ನು ಪ್ರಶ್ನಿಸುವುದಾಗಿ ಹೇಳಿವೆ.
ಪರಿಸರ ಸಹಕಾರಿ ಸಂಘ, ಮೈಸೂರು ಗ್ರಾಹಕ ರಕ್ಷಕ ಪರಿಷತ್ತು ಹಾಗೂ ಕರ್ನಾಟಕ ವಿಮೋಚನಾ ರಂಗದ ಪ್ರತಿನಿಧಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸಾಕಷ್ಟು ವಿಚಾರಣೆ ನಡೆದಿತ್ತು. ಮಾನವ ಹಕ್ಕುಗಳ ಆಯೋಗ ತನ್ನ ತೀರ್ಪನ್ನು ಸದ್ಯದಲ್ಲೇ ನೀಡುವ ನಿರೀಕ್ಷೆಯಿದೆ. ಅದು ತೀರ್ಪು ನೀಡುವವರೆಗೂ ಕಾಯದೆ, ಪರಿಸರ ಸಚಿವಾಲಯ ಯೋಜನೆಗೆ ಹಸಿರು ನಿಶಾನೆ ತೋರಿರುವುದು ತರವಲ್ಲ ಎಂದರು.
2 ಲಕ್ಷ ಜನ ಮನೆ ಕಳಕೊಳ್ಳುತ್ತಾರೆ : ತಜ್ಞರ ಸಮಿತಿಯಾಂದು ಕಾರಿಡಾರ್ ಯೋಜನೆಯನ್ನು ಪರಾಮರ್ಶಿಸುತ್ತಿದ್ದು, ಅದೂ ಕೂಡ ಇನ್ನೂ ವರದಿ ನೀಡಿಲ್ಲ. ಕಾರಿಡಾರ್ ಯೋಜನೆಯಾಟ್ಟಿಗೇ ಬೆಂಗಳೂರು- ಮೈಸೂರು ನಡುವೆ 5 ಮುಖ್ಯ ಟೌನ್‌ಷಿಪ್ ಯೋಜನೆಗಳೂ ಜಾರಿಗೆ ಬರಲಿವೆ. ಪ್ರತಿ ಟೌನ್‌ನಲ್ಲಿ 5 ಲಕ್ಷ ಜನಸಂಖ್ಯೆ ಇರಲಿದೆ. 170 ಹಳ್ಳಿಗಳ ಸುಮಾರು 2 ಲಕ್ಷ ಮಂದಿ ನಿರಾಶ್ರಿತರಾಗುವ ಭಯವಿದ್ದು, ಇವೆಲ್ಲಾ ಕೇಂದ್ರ ಪರಿಸ ಸಚಿವಾಲಯದ ಗಮನಕ್ಕೆ ಬರಲಿಲ್ಲವೇ ಎಂಬುದು ಪರಿಸರ ವಾದಿಗಳ ಪ್ರಶ್ನೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications