ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು : ತೆಂಗಿಗೆ ‘ನುಸಿ’- ಜನತೆಗೆ ‘ಮಲೇರಿಯಾ, ಕರಳುಬೇನೆ’

By Staff
|
Google Oneindia Kannada News

ತುಮಕೂರು : ಭೂತಾಕಾರವಾಗಿ ಕಾಡುತ್ತಿರುವ ನುಸಿಪೀಡೆ ರೈತರನ್ನು ಹಣ್ಣು ಮಾಡುತ್ತಿದ್ದರೆ, ಇನ್ನೊಂದೆಡೆ ಮಲೇರಿಯಾ ಹಾಗೂ ಕರಳುಬೇನೆ ಕಾಯಿಲೆಗಳು ಜಿಲ್ಲೆಯಲ್ಲಿ ಕಾಣಸಿಕೊಂಡಿವೆ.

ಜಿಲ್ಲೆಯ ಬಹಳಷ್ಟು ತಾಲ್ಲೂಕುಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು, 3 ಲಕ್ಷದ 84 ಸಾವಿರದ 10 ಜನರ ರಕ್ತ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಇತ್ತೀಚೆಗೆ ಮಲೇರಿಯಾ ಹಾಗೂ ಕರಳುಬೇನೆ ಸೋಂಕು ತೀವ್ರ ಪ್ರಮಾಣದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ದಾಕ್ಷಾಯಿಣಿ ಅಶ್ವಥ್‌ ತಿಳಿಸಿದ್ದಾರೆ.

ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಹಾಗೂ ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕರೆ ನೀಡಿದ್ದಾರೆ.

ನುಸಿ ಪೀಡೆ ವಿರುದ್ಧ ಆಗಸ್ಟ್‌ 21 ರಿಂದ ಔಷಧಿ ಸಿಂಪರಣೆ

ಆಗಸ್ಟ್‌ 21 ರಿಂದ 31 ರವರೆಗೆ ಜಿಲ್ಲೆಯ ಎಲ್ಲಾ ರೈತರು ತೆಂಗಿಗೆ ತಗುಲಿರುವ ನುಸಿಯ ವಿರುದ್ಧ ಮೂರು ಹಂತಗಳಲ್ಲಿ ಔಷಧಿ ಸಿಂಪರಿಸಬೇಕೆಂದು ಜಿಲ್ಲಾಧಿಕಾರಿ ಬಿ.ಆರ್‌. ಜಯರಾಮರಾಜೇ ಅರಸ್‌ ರೈತರಿಗೆ ಕರೆ ನೀಡಿದ್ದಾರೆ. ಶೇ 75 ರಿಯಾಯಿತಿ ದರದಲ್ಲಿ ಸರ್ಕಾರ ಔಷಧಿ ವಿತರಿಸುತ್ತದೆ ಎಂದು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X