ಇಸ್ರೋದ ‘ಚಂದ್ರನತ್ತ ನಾವು’ ಯೋಜನೆಗೆ ಕೇಂದ್ರದ ಸಮ್ಮತಿ
ಮಧುರೈ : ಚಂದ್ರನಲ್ಲಿಗೆ ‘ಪೇ- ಲೋಡ್’ ರವಾನಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಇಲಾಖೆ (ಇಸ್ರೋ)ಯ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ ಎಂದು ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಎ.ಪಿ.ಜೆ.ಅಬುಲ್ ಕಲಾಂ ತಿಳಿಸಿದ್ದಾರೆ.
ತ್ಯಾಗರಾಜ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ತ್ಯಾಗರಾಜ ಅಭಿವೃದ್ಧಿ ಸಂಶೋಧನಾ ಕೇಂದ್ರಕ್ಕೆ ಕೆಸರುಗಲ್ಲು ಹಾಕಿ, ಅವರು ಮಾತಾಡುತ್ತಿದ್ದರು. ಚಂದ್ರನ ಮೇಲೆ ಇಂತಹ ಮಹತ್ತರ ಯೋಜನೆ ನಡೆಸಲು ಭಾರತ ಸರ್ವಶಕ್ತ. ತಂತ್ರಜ್ಞಾನ ಹಾಗೂ ಬುದ್ಧಿಮತ್ತೆ ನಮ್ಮಲ್ಲಿ ಸಾಕಷ್ಟು ಇದೆ ಎಂದು ಹೇಳಿದರು.
ದೂರಗಾಮಿ ಗುರಿಗಳನ್ನು ಗೊತ್ತುಡಿಸಿದ ವಿಕ್ರಂ ಸಾರಾಭಾಯಿ ತಮ್ಮ ಮಾದರಿ ವ್ಯಕ್ತಿ ಎಂದ ಕಲಾಂ, ವಿಜ್ಞಾನ ಹಾಗೂ ತಂತ್ರಜ್ಞಾನ, ರಾಜಕೀಯ, ಉದ್ದಿಮೆ ಮೊದಲಾದ ಕ್ಷೇತ್ರಗಳಲ್ಲಿ ದೇಶಕ್ಕೆ ದಕ್ಷ ನಾಯಕರ ಅಗತ್ಯವಿದೆ. ಯುವಕರ ತುಡಿತ ಹಾಗೂ ಕಷ್ಟ ಪಟ್ಟು ದುಡಿಯುವ ಮನೋಭಾವ- ಇವೆರಡರ ಸಮ್ಮಿಲನ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವಷ್ಟು ಶಕ್ತ ಎಂದರು.
ಶೋಧನಾ ಶಕ್ತಿಯುಳ್ಳ ನಾವು, ಭಾರತೀಯರು ಅಳುಕಿನಿಂದ ಹೊರಬರಬೇಕು ಎಂಬ ಸರ್ ಸಿ.ವಿ.ರಾಮನ್ ಅವರ ಮಾತನ್ನು ಕಲಾಂ ನೆನಪಿಸಿಕೊಂಡರು. ಚಿಂತನೆ- ಕನಸುಗಳನ್ನು ನೂತನ ಯೋಜನೆಗಳನ್ನಾಗಿಸುವ ಧೋರಣೆ ಬಲವಾಗಬೇಕು ಎಂದರು. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಿ.ಟೆಕ್ ಎಂಬ ಕೋರ್ಸು ಹಾಗೂ ಸಂಶೋಧನಾ ಪ್ರಕಟಣೆಗಳನ್ನೂ ಡಾ.ಕಲಾಂ ಬಿಡುಗಡೆ ಮಾಡಿದರು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications