Get Updates
Get notified of breaking news, exclusive insights, and must-see stories!

ಅನಿವಾಸಿ ಭಾರತೀಯರ ರಕ್ಷಣೆಗೆಸರಕಾರ ಬದ್ಧ- ಜಸ್ವಂತ್‌ಸಿಂಗ್‌

ಬೆಂಗಳೂರು : ಅನಿವಾಸಿ ಭಾರತೀಯರ ರಕ್ಷಣೆಗೆ ಸರಕಾರ ಯಾವತ್ತೂ ಬದ್ಧವಾಗಿದೆ. ಅವರು ತಮ್ಮ ಯಾವುದೇ ಸಮಸ್ಯೆಗಳನ್ನು ನೇರವಾಗಿ ಭಾರತ ಸರಕಾರಕ್ಕೆ ತಿಳಿಸಬಹುದು ಎಂದು ವಿದೇಶಾಂಗ ಮತ್ತು ರಕ್ಷಣಾ ಸಚಿವ ಜಸ್ವಂತ್‌ ಸಿಂಗ್‌ ತಿಳಿಸಿದ್ದಾರೆ.

ಅವರು ಭಾನುವಾರ ಚನ್ನೇನಹಳ್ಳಿಯಲ್ಲಿ ನಡೆದ ವಿಶ್ವ ಸಂಘ ಶಿಕ್ಷಾವರ್ಗ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡು ತ್ತಿದರು. ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು . ದೇಶ ಮತ್ತು ಪ್ರಪಂಚದ ವಿವಿಧ ಭಾಗದಲ್ಲಿರುವ ಭಾರತೀಯರ ರಕ್ಷಣೆ ಸರಕಾರದ ಕರ್ತವ್ಯ ಎಂದ ಜಸ್ವಂತ್‌ಸಿಂಗ್‌, ಅನಿವಾಸಿ ಭಾರತೀಯರು ಮಾರ್ಗದರ್ಶನಕ್ಕಾಗಿ ಭಾರತದತ್ತ ನೋಡುತ್ತಿದ್ದಾರೆ ಎಂದರು.
ಯಾವುದೇ ದೇಶದ ವಿರುದ್ಧ ಭಾರತ ಆಕ್ರಮಣಕಾರಿ ಧೋರಣೆ ಹೊಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಅಭಿ ವೃದ್ಧಿ ಪಥದಲ್ಲಿರುವ ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಿಕ್ಷಾವರ್ಗದ ಕಾರ್ಯದರ್ಶಿ ರವಿ ಕುಮಾರ್‌, ಅನಿವಾಸಿ ಭಾರತೀಯರಿಗಾಗಿ ನಡೆಸುತ್ತಿ ರುವ ಮೂರನೇ ಶಿಬಿರ ಇದಾಗಿದ್ದು ವಿವಿಧ ರಾಷ್ಟ್ರಗಳಲ್ಲಿರುವ ಹಿಂದುಗಳನ್ನು ಸಂಘಟಿಸುವುದು ಕಾರ್ಯಕ್ರಮದ ಉದ್ದೇಶ ಎಂದರು. ವಿಶ್ವ ಸಂಘ ಶಿಕ್ಷಾ ವರ್ಗದಲ್ಲಿ 10 ರಾಷ್ಟ್ರಗಳ 100 ಮಂದಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+