ನವವಿವಾಹಿತರು- ದೇವರನ್ನೂ ಬಿಡದ ಆಷಾಢKSRTC
ಹಾಸನ : ಆಷಾಢದಲ್ಲಿ ರೈತರು ಬಿತ್ತನೆಯ ಸಿದ್ಧತೆಗಳನ್ನು ನಡೆಸಿದರೆ, ವ್ಯಾಪಾರಿಗಳು ತಲೆಗೆ ಕೈ ಹೊತ್ತು ಗಲ್ಲಾ ಪೆಟ್ಟಿಗೆಯ ಮುಂದೆ ಮ್ಲಾನವದನರಾಗಿ ಕೂರುವುದು ಪ್ರತಿ ಆಷಾಡದಲ್ಲೂ ಮಾಮೂಲೆ. ಇಂಥ ‘ಆಷಾಢ’ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನೂ ಬಿಡದೆಂದರೆ-
ಹೇಗೆ ಬಿಟ್ಟೀತು? ನವವಿವಾಹಿತರು ಹಾಗೂ ದೇವರನ್ನೂ ಬಿಡದ ಆಷಾಢ ಮಾಸ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಿಟ್ಟೀತೆಂದು ಭಾವಿಸುವುದಾದರೂ ಹೇಗೆ ? ವಿಷಯವಿದು,- ಮೊನ್ನೆಯಷ್ಟೇ ಮುಗಿದ ಆಷಾಢದ ಪ್ರಭಾವದಿಂದಾಗಿ ಕೆಎಸ್‌ಆರ್‌ಟಿಸಿ ಎರಡು ಕೋಟಿ ರುಪಾಯಿಗಳ ನಷ್ಟವನ್ನು ಅನುಭವಿಸಿದೆ. ಈ ವಿಷಯವನ್ನು ಸಾರಿಗೆ ಸಚಿವ ಸಗೀರ್ ಅಹ್ಮದ್ ತಿಳಿಸಿದ್ದಾರೆ.
ಇತ್ತೀಚೆಗೆ ಹಾಸನದಲ್ಲಿ ಜರುಗಿದ ಉರ್ದು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಚಿವರು, ಕೆಎಸ್‌ಆರ್‌ಟಿಸಿ ಮೇಲೆ ಆಷಾಢದ ಪ್ರಭಾವವನ್ನು ಬಣ್ಣಿಸಿದರು. ಈ ಅವಧಿಯಲ್ಲಿ ಪ್ರಯಾಣಕ್ಕೆ ಶೇ.10 ರಿಯಾಯಿತಿ, ಮರು ಪ್ರಯಾಣಕ್ಕೆ ಶೇ.20 ರ ರಿಯಾಯಿತಿಯಂಥ ವಿಶೇಷ ಯೋಜನೆಗಳನ್ನು ಪ್ರಕಟಿಸಿದರೂ ಉಪಯೋಗವಾಗಿಲ್ಲ ಅನ್ನುವುದು ಸಚಿವರ ಅಳಲು. ಆದರೂ, ಸಾರಿಗೆ ನಿಗಮದ ಆರ್ಥಿಕ ಸ್ಥಿತಿ ಅಧ್ವಾನವೇನೂ ಆಗಿಲ್ಲ , ಉತ್ತಮವಾಗಿದೆ ಎಂದು ಅವರು ಸಮಾಧಾನ ಪಟ್ಟುಕೊಂಡರು.
ವಾಹನಗಳಿಗೆ ಎಲ್‌ಪಿಜಿ ಇಂಧನ ಅಳವಡಿಸುವ ಮಸೂದೆಯ ಕುರಿತು ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಪೆಟ್ರೋಲ್ ಬಳಕೆಯ ವಾಹನಗಳಲ್ಲಿ ಎಲ್‌ಪಿಜಿ ಬಳಕೆ ಸಾಮಾನ್ಯವಾಗಲಿದೆ ಎಂದರು. ಅಂದಹಾಗೆ, ಆಷಾಢದಲ್ಲಾದ ನಷ್ಟವನ್ನು ಶ್ರಾವಣ ತುಂಬಿತೇ ಅನ್ನುವುದರ ಬಗ್ಗೆ ಸಗೀರ್ ಅಹ್ಮದ್ ಏನನ್ನೂ ಹೇಳಲಿಲ್ಲ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications