ತಿರುಪತಿ ತಿಮ್ಮನ ಭಕ್ತರಿಗೆ ಇನ್ನುಮುಂದೆ ಬಯಸಿದಷ್ಟು ಲಾಡು
ತಿರುಪತಿ : ಸಪ್ತಗಿರಿವಾಸ ಶ್ರೀವೆಂಕಟೇಶನ ಕಾಣಲು ತಿರುಪತಿಗೆ ಹೋಗಿ ಬರುವ ಭಕ್ತರು ಇನ್ನು ಮುಂದೆ ತಾವು ಇಷ್ಟಪಟ್ಟಷ್ಟು ಲಾಡು ಪ್ರಸಾದ ತರಬಹುದಾಗಿದೆ. ಈ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಟಿಕೆಟ್ಗೆ ಒಂದರಂತೆ ಒಂದೇ ಒಂದು ಲಾಡು ಮಾತ್ರ ನೀಡಲಾಗುತ್ತಿತ್ತು.
ಈಗ ಈ ಪದ್ಧತಿ ಬದಲಾಯಿಸಲಾಗಿದೆ. ಭಕ್ತರು ತಾವು ಬಯಸಿದಷ್ಟು ಲಾಡು ಪ್ರಸಾದ ಕೊಂಡು ತಮ್ಮ ಆಪ್ತೇಷ್ಟರಿಗೆಲ್ಲಾ ನೀಡಬಹುದಾಗಿದೆ. ಇದಕ್ಕಾಗಿಯೇ ಹಗಲು -ರಾತ್ರಿ ಲಡ್ಡು ಕೌಂಟರ್ಗಳನ್ನು ತೆರೆಯಲಾಗಿದೆ. ಲೆಕ್ಕಾಚಾರಗಳ ರೀತ್ಯ ಪ್ರತಿದಿನ ತಿರುಪತಿಗೆ ಸರಾಸರಿ 63,706 ಭಕ್ತರು ಆಗಮಿಸುತ್ತಾರೆ. ದಿನವೂ 1.20 ಲಕ್ಷ ಲಾಡು ಪ್ರಸಾದ ಪಡೆಯುತ್ತಾರೆ.
ಈಗ ಉಗ್ರಾಣದಲ್ಲಿ ಬೇಕೆಂದಾಗ ಲಾಡು ದೊರೆಯುವ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದರ್ಶನ ಪಡೆಯುವ ಭಕ್ತರು ಪುಕ್ಕಟ್ಟೆಯಾಗಿ ಮೂರು ನಾಲ್ಕು ಲಾಡು ಹಾಗೂ ಸಾಮಾನ್ಯ ಕ್ಯೂನಲ್ಲಿ ದರ್ಶನ ಪಡೆವ ಭಕ್ತರು ಒಂದು ಲಾಡುವಿಗೆ 5 ರು ನೀಡಿ ಖರೀದಿಸಬಹುದಾಗಿದೆ. ಈ ನಿಯಮ ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬಂದಿದೆ ಎಂದು ಟಿ.ಟಿ.ಡಿ. ದೇವಸ್ಥಾನದ ಮೂಲಗಳು ತಿಳಿಸಿವೆ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications