ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಈಗ ಉದ್ಯಾನ ನಗರಿ ಅಲ್ಲ‘ಆತ್ಯಹತ್ಯೆಯ ನಗರಿ’

By Staff
|
Google Oneindia Kannada News

ಬೆಂಗಳೂರು : ಉದ್ಯಾನ ನಗರಿ, ಭಾರತದ ಸಿಲಿಕಾನ್‌ ಸಿಟಿ, ಸೈಬರ್‌ ನಗರಿ ಎಂದೆಲ್ಲಾ ಖ್ಯಾತವಾಗಿರುವ ಬೆಂಗಳೂರಿಗೆ ಈಗ ‘ಆತ್ಮಹತ್ಯೆ ನಗರಿ’ ಎಂಬ ಅಪಖ್ಯಾತಿಯೂ ಅಂಟಿಕೊಂಡಿದೆ. ಬೆಂಗಳೂರಿನ ನಿಮ್ಹಾನ್ಸ್‌ ವೈದ್ಯರ ತಂಡ ನಡೆಸಿರುವ ಅಧ್ಯಯನ ಈ ವಿಷಯ ತಿಳಿಸಿದೆ.

ನಿಮ್ಹಾನ್ಸ್‌ ವೈದ್ಯರಾದ ಡಾ. ಗುರುರಾಜ್‌ ಅವರ ಪ್ರಕಾರ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಸುಮಾರು ಶೇ. 250ರಷ್ಟು ಏರುತ್ತಿದೆ. ನಗರೀಕರಣ, ನಗರ ಪ್ರದೇಶದ ಒತ್ತಡ, ಆಧುನಿಕ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಸ್ಪರ್ಧೆಯನ್ನು ಎದುರಿಸಲಾರದ ದುರ್ಬಲ ಮನಸ್ಸಿನವರು ಆತ್ಮಹತ್ಯೆಯ ಶರಣು ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂಕಿ ಅಂಶ-ಗ-ಳ ಪ್ರಕಾ-ರ, 1998 ರಲ್ಲಿ ಪ್ರತಿ 1 ಲಕ್ಷ ಜನ-ಸಂ-ಖ್ಯೆಯಲ್ಲಿ ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ-ವ-ರ ಸಂಖ್ಯೆ ಬೆಂಗ-ಳೂ-ರಿ-ನ-ಲ್ಲಿ 32 ರಷ್ಟಿ-ತ್ತು . ಈ ಪ್ರಮಾ-ಣ, 1999 ರಲ್ಲಿ 35ಕ್ಕೇರಿತು. ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ ಪ್ರತಿ-ಶ-ತ 60 ಜನ-ರು 18 ರಿಂದ 40 ವರ್ಷ-ದೊ-ಳ-ಗಿ-ರುವರು ಎಂದೂ ಅವರು ಹೇಳಿದ್ದಾರೆ.

ಕಳೆದ ವರ್ಷ ಈ ಬಗ್ಗೆ ಅಧ್ಯಯನ ನಡೆಸಿದ್ದ ಸ್ನೇ-ಹಾ ಲೈಫ್‌-ಲೈ-ನ್‌ ಸರ್ಕಾ-ರೇ-ತ-ರ ಸಂಸ್ಥೆ ಕೂಡ ಇದೇ ಅಂಕಿ ಅಂಶಗಳನ್ನು ನೀಡಿತ್ತು. ಬೆಂಗಳೂರು ಅತ್ಯಹತ್ಯೆ ನಗರಿಯಾಗುತ್ತಿದೆ ಎಂದು ಘೋಷಿಸಿತ್ತು. ಈಗ ಪ್ರತಿಷ್ಠಿತ ನಿಮ್ಹಾನ್ಸ್‌ ಸಂಸ್ಥೆಯ ಅಧ್ಯಯನವೂ ಇದನ್ನೇ ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆತ್ಯಹತ್ಯೆ ನಗರಿ ಎಂಬ ಪಟ್ಟ ಕಾಯಂ ಆಗುವ ಸಾಧ್ಯತೆಯೇ ಹೆಚ್ಚು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X