ಅಪರೂಪದ ಶಸ್ತ್ರ ಚಿಕಿತ್ಸೆ : ಸಂಜಯಗಾಂಧೀ ಆಸ್ಪತ್ರೆ ವೈದ್ಯರ ಸಾಧನೆ
ಬೆಂಗಳೂರು : ಅಪಘಾತದಲ್ಲಿ ಮುರಿದಿದ್ದ ಬಲಗಾಲನ್ನು ಕತ್ತರಿಸದೇ ವಿಧಿ ಇರಲಿಲ್ಲ. ಉತ್ತರ ಹಳ್ಳಿ ನಿವಾಸಿ, 40ರ ಪ್ರಾಯದ ಸೋಮೇಶ್ ತಮ್ಮ ಬಲಗಾಲನ್ನು ಕಳೆದುಕೊಳ್ಳಬೇಕಲ್ಲ ಎಂದು ಮರುಗುತ್ತಿದ್ದರು. ಯಾತನೆ ಅನುಭವಿಸುತ್ತಿದ್ದರು.
ಇವರ ನೆರವಿಗೆ ಬಂದ ಬೆಂಗಳೂರಿನ ಸಂಜಯಗಾಂಧೀ ಅಪಘಾತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು, ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ, ಕಾಲಿಗೆ ವೃತ್ತಾಕಾರದ ಸರಳು ಜೋಡಿಸಿ, ಮೂಳೆ ಉದ್ದ ಮಾಡುವ ಮೂಲಕ, ಕತ್ತರಿಸಲೇ ಬೇಕಿದ್ದ ಕಾಲು ಉಳಿಸಿದ ಸಾಧನೆ ಮಾಡಿದ್ದಾರೆ.
ಜನವರಿ ತಿಂಗಳಿನಲ್ಲಿ ಸೋಮೇಶ್ ಟ್ರ್ಯಾಕ್ಟರ್‌ನಿಂದ ಬಿದ್ದಾಗ, ಅವರ ಬಲಗಾಲು ಮುರಿದಿತ್ತು. ಸ್ಥಳೀಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಗಾಯ ಮಾಯದೆ, ಕೀವು ತುಂಬಿಕೊಂಡಿತು. ಮೂಳೆ ಕರಗತೊಡಗಿತು. ಸೋಮೇಶ್ ಹಾಸಿಗೆ ಹಿಡಿದರು. ಪರೀಕ್ಷಿಸಿದ ವೈದ್ಯರು ಇವರ ಕಾಲು ತುಂಡರಿಸದೆ ವಿಧಿಯೇ ಇಲ್ಲ ಎಂದರು.
ಆದರೆ, ಸಂಜಯಗಾಂಧೀ ಆಸ್ಪತ್ರೆಯ ವೈದ್ಯರಾದ ಡಾ. ಎಚ್.ಎಸ್. ಚಂದ್ರಶೇಖರ್, ಕಾಲಿಗೆ ವೃತ್ತಾಕಾರದ ಸರಳು ಜೋಡಿಸಿ ಮೂಳೆ ಬೆಳೆಸುವ ನಿರ್ಧಾರ ತಳೆದರು, ಈಗ ದಿನಕ್ಕೊಂದು ಮಿಲಿ ಮೀಟರ್‌ನಂತೆ ಮೂಳೆ ಬೆಳೆದಿದೆ. ಸೋಮೇಶ್ ಕಾಲು ಉಳಿದಿದೆ.
ಈ ಹೊಸ ಮಾದರಿ ಚಿಕಿತ್ಸೆಯಿಂದ ಪೊಲೀಯೋ, ಹುಟ್ಟಿನಿಂದಲೇ ಕಾಣಿಸಿಕೊಳ್ಳುವ ಮೂಳೆ ನ್ಯೂನತೆಗಳಿಗೂ ಸೂಕ್ತ ಚಿಕಿತ್ಸೆ ಮಾಡಬಹುದಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080- 6564516 ಅಥವಾ 6562822 ಸಂಪರ್ಕಿಸಬಹುದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications