Get Updates
Get notified of breaking news, exclusive insights, and must-see stories!

ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುವತ್ತ‘ಮೈಂಡ್‌ ಟ್ರೀ’ದಾಪುಗಾಲು

ಬೆಂಗಳೂರು : ಮೈಂಡ್‌ ಟ್ರೀ ಕನ್ಸಲ್ಟಿಂಗ್‌ ಪ್ರೆೃವೇಟ್‌ ಲಿಮಿಟೆಡ್‌ ಜಾಗತಿಕ ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ ವೇರ್‌ ಸರ್ವಿಸ್‌ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು , ಲಾಸ್‌ ಏಂಜಲೀಸ್‌ನ ಕ್ಯಾಪಿಟಲ್‌ ಗ್ರೂಪ್‌ನಿಂದ 14.4 ಮಿಲಿಯನ್‌ ಡಾಲರ್‌ ನೆರವು ನಿಧಿ ಪಡೆದಿದೆ.

ಅಮೆರಿಕಾ, ಯೂರೋಪ್‌ ಮತ್ತು ಏಷ್ಯಾದಲ್ಲಿ ಮಾರುಕಟ್ಟೆ ವಿಸ್ತರಣೆ, ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸುವ ಸಲುವಾಗಿ ಈ ನಿಧಿ ಸಹಕಾರಿಯಾಗಲಿದೆ ಎಂದು ಮೈಂಡ್‌ಟ್ರೀಯ ಮಾಧ್ಯಮ ಪ್ರಕಟಣೆ ತಿಳಿಸಿದೆ. ಮೈಂಡ್‌ ಟ್ರೀ ಕನ್ಸಲ್ಟಿಂಗ್‌ನ ಅಧ್ಯಕ್ಷ ಮತ್ತು ಸಿಇಓ ಅವರ ಪ್ರಕಾರ ಸಂಸ್ಥೆಯ ಜಾಗತಿಕ ನಿರ್ವಹಣಾ ತಂಡ, ಸಂಸ್ಥೆಯ ನೌಕರರು ಮತ್ತು ಬಳಕೆದಾರರ ನಡುವೆ ಇರುವ ಸೌಹಾರ್ದತೆಯೇ ಅದರ ಬೆಳವಣಿಗೆಯ ಮೂಲ ಸೂತ್ರ.

1999ರಲ್ಲಿ ಆರಂಭವಾದ ಮೈಂಡ್‌ ಟ್ರೀ ಪಡೆಯುತ್ತಿರುವ ಈ ಎರಡನೇ ಕಂತಿನ ಹಣದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಹೆಚ್ಚು ಕೇಂದ್ರೀಕರಿಸಲಿದೆ ಎಂದು ಮೈಂಡ್‌ಟ್ರೀಯ ಅಮೆರಿಕಾ ಶಾಖೆಯ ಅಧ್ಯಕ್ಷ ಬಾಗ್‌ಚಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಐಟಿ ಕನ್ಸಲ್ಟಿಂಗ್‌ ಕಂಪೆನಿಯಾಗಿರುವ ಮೈಂಡ್‌ಟ್ರೀ, ಜಾಗತಿಕ ಸಾಫ್ಟ್‌ವೇರ್‌ ಅಭಿವೃದ್ಧಿ ಕ್ಷೇತ್ರದಲ್ಲಿ ಬಿಸಿನೆಸ್‌ ಸೊಲ್ಯೂಷನ್ಸ್‌ ಗಳ ಕೆಲಸ ನಿರ್ವಹಿಸುತ್ತಿದೆ. ಸಾಫ್ಟ್‌ವೇರ್‌ ಅಭಿವೃದ್ಧಿ ಮತ್ತು ಆಧುನಿಕ ತಂತ್ರಜ್ಞಾನ ವ್ಯವಹಾರ ಕ್ಷೇತ್ರಕ್ಕೆ ಪೂರಕ ಸಾಫ್ಟ್‌ವೇರ್‌ ತಯಾರಿಕೆಯ ಹೊಣೆ ಹೊತ್ತಿದೆ.

ಮೈಂಡ್‌ ಟ್ರೀ ಸಂಪರ್ಕ - Harini Ashok, Grey Worldwide, 2258553/4/9, [email protected]

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+