ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮೈಕ್ರೊಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್‌ಗೆ ಆ.13ರಂದು ಚಾಲನೆ

By Staff
|
Google Oneindia Kannada News

ಬೆಂಗಳೂರು: ಮೈಕ್ರೋ ಸಾಫ್ಟ್‌ ಕಾರ್ಪೊರೇಷನ್‌ ಸಿದ್ಧಪಡಿಸಿದ, ಕನ್ನಡ ಸೇರಿದಂತೆ 9 ಇತರ ಭಾರತೀಯ ಭಾಷೆಗಳಲ್ಲಿ ನ ಅಪರೇಟಿಂಗ್‌ ಸಿಸ್ಟಮ್ಸ್‌ ಆಗಸ್ಟ್‌ 13ರಿಂದ ಲಭ್ಯವಾಗಲಿದೆ.

ಹಿಂದಿ, ಕೊಂಕಣಿ, ತಮಿಳು ಭಾಷೆಗಳಲ್ಲಿ ವಿಂಡೋಸ್‌ - 2000ನ್ನು ಕಳೆದ ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ ಬಿಡುಗಡೆ ಮಾಡಿತ್ತು. ಈಗ ಗುಜರಾತಿ, ಒರಿಯಾ, ತೆಲುಗು, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಮೈಕ್ರೋಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್ಸ್‌ ಗಳು ಲಭ್ಯವಾಗಲಿವೆ. ಈ ವಿಷಯವನ್ನು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಅವರ ಸಮ್ಮುಖದಲ್ಲಿ ಘೋಷಿಸಲಾಗುವುದು .

ಪ್ರಸ್ತುತ ಮೂರು ವಿಧದ ಮೈಕ್ರೋಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್‌ಗಳಿವೆ. ಬಿಸಿನೆಸ್‌ಗೆ ಸಂಬಂಧಿಸಿ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ ಟಾಪ್‌, ಫೈಲ್‌ ಮತ್ತು ಪ್ರಿಂಟ್‌ ಸರ್ವರ್‌ಗಳು ಹಾಗೂ ಇ- ಕಾಮರ್ಸ್‌ ವ್ಯವಹಾರಗಳಿಗಾಗಿ ಆಧುನಿಕ ಮೈಕ್ರೋಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್‌ಗಳು. ಪ್ರಸ್ತುತ ಒಂದು ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಧ್ಯಯನ ನಡೆಸಿ ರಚಿಸಿರುವ ಹೊಸ ಮಾದರಿಯ ಮೈಕ್ರೋ ಸಾಪ್ಟ್‌ ಸಿಸ್ಟಮ್‌ ಹೆಚ್ಚು ಸಾಮರ್ಥ್ಯ , ಬಾಳಿಕೆ ಹಾಗೂ ಸುರಕ್ಷೆಯನ್ನು ಹೊಂದಿದೆ.

ಸಾಮಾನ್ಯವಾಗಿ ವಿಂಡೋಸ್‌ ಸರ್ವರ್‌ ಗೆ 40 ಸಾವಿರರೂ ಹಾಗೂ ಅಪ್‌ಗ್ರೇಡೇಷನ್‌ಗೆ 20 ಸಾವಿರ ಖರ್ಚಾದರೆ, ವಿಂಡೋಸ್‌ ಪ್ರೊಫೆಶನಲ್‌ 10 ಸಾವಿರ ರೂ. ಬೆಲೆಯದ್ದಾಗಿದ್ದು, 5 ಸಾವಿರ ರೂಪಾಯಿಗಳಲ್ಲಿ ಅಪ್‌ಗ್ರೇಡೇಷನ್‌ ಮಾಡಬಹುದು ಎಂದು ಭಾರತದ ಮೈಕ್ರೋಸಾಫ್ಟ್‌ ನಿರ್ವಹಣಾ ನಿರ್ದೇಶಕ ಸಂಜಯ್‌ ಮಿರ್ಚಾಂದನಿ ಹೇಳಿದ್ದರು.

ಮೈಕ್ರೋಸಾಫ್ಟ್‌ ಬಹುಭಾಷಾ ಉಪಕರಣವು ಹಿಂದಿ ಸೇರಿದಂತೆ ಇತರ ಕೆಲವು ಭಾಷೆಗಳಲ್ಲಿ ಓದು, ಬರಹ ಮತ್ತು ಸಂಪಾದನೆಯ ಅವಕಾಶವನ್ನೂ ಕಲ್ಪಿಸುತ್ತದೆ. ಈಗಾಗಲೇ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌-2000 ಪ್ಯಾಕೇಜ್‌ನಡಿಯಲ್ಲಿ ಹಿಂದಿ ಭಾಷೆಯಲ್ಲಿ ಎಂಎಸ್‌ ವರ್ಡ್‌ ಪ್ರೊಸೆಸಿಂಗ್‌ ಅಪ್ಲಿಕೇಷನ್‌ನ್ನು ಸಿದ್ಧಪಡಿಸಿದ್ದು ಇಲ್ಲಿ ವ್ಯಾಕರಣ ಮತ್ತು ಅಕ್ಷರಗಳ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಲಭ್ಯವೂ ಇದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X