Get Updates
Get notified of breaking news, exclusive insights, and must-see stories!

ಧೂಮಪಾನ ನಿಷೇಧ ಮಸೂದೆಗೆ ಬೀಡಿ ಕಾರ್ಮಿಕರ ವಿರೋಧ

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ಧೂಮಪಾನ ನಿಷೇಧ ಮಸೂದೆಯನ್ನು ಕೂಡಲೆ ಕೈ ಬಿಡಬೇಕೆಂದು ಆಗ್ರಹಿಸಿ ಬೀಡಿ ಕಾರ್ಮಿಕರು ಗುರುವಾರ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು

ಜನರ ಒಳಿತನ್ನ ಅಪೇಕ್ಷಿಸುವ ಸರಕಾರ ಬೀಡಿಗಿಂತ ಹಾನಿಕರವಾದ ಪಾನ ನಿಷೇಧವನ್ನು ಮೊದಲು ಜಾರಿಗೆ ತರಲಿ ಎಂದು ಸವಾಲೆಸೆದರು. ಸಿಐಟಿಯು, ಎಐಟಿಯುಸಿ, ಬಿಎಂಎಸ್‌, ಎಚ್‌ಎಂಎಸ್‌ ಸಂಘಟನೆಗಳು ಹಾಗೂ ಜಿಲ್ಲಾ ಬೀಡಿ ಕಂಟ್ರಾಕ್ಟುದಾರರ ಸಂಘದ ಸದಸ್ಯರು ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ಬೀಡಿ ಕಾರ್ಮಿಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ರ್ಯಾಲಿಯ ನಂತರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸ ಲಾಯಿತು.

ಪ್ರತಿಯಾಬ್ಬ ಪ್ರಜೆಗೆ ಬದುಕುವ ಹಕ್ಕಿದೆ
ಕಾರ್ಮಿಕರ ಬಗ್ಗೆ ಹುಸಿ ಕಾಳಜಿ ವಹಿಸುವ ಕೇಂದ್ರ-ರಾಜ್ಯ ಸರಕಾರಗಳು ಧೂಮಪಾನ ನಿಷೇಧ ಮಸೂದೆ ಯನ್ನು ಜಾರಿಗೆ ತರಲು ಹೊರಟಿವೆ. ಆದರೆ, ಸಂವಿಧಾನದ 21 ನೇ ಪರಿಚ್ಛೇದ ಪ್ರಕಾರ ಪ್ರತಿಯಾಬ್ಬ ಪ್ರಜೆಗೆ ಬದುಕುವ ಹಕ್ಕಿದೆ. ಪ್ರಸ್ತುತ ಮಸೂದೆಯ ಮೂಲಕ ಸರಕಾರ ಈ ಹಕ್ಕನ್ನು ಕಸಿಯಲು ಹೊರಟಿದೆ ಎಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಐಟಿಯುಸಿ ಜಿಲ್ಲಾ ನಾಯಕ ಎಸ್‌. ಚಂದಪ್ಪ ಅಂಚನ್‌ ಅಭಿಪ್ರಾಯಪಟ್ಟರು. ಆರೋಗ್ಯ ರಕ್ಷಣೆಯ ಕಾರಣವನ್ನು ಮುಂದೊಡ್ಡುವ ಸರಕಾರ, ಆರೋಗ್ಯಕ್ಕೆ ಮಾರಕವಾದ ಅನೇಕ ಕೈಗಾರಿಕೆಗಳು ದೇಶದಲ್ಲಿದ್ದರೂ, ಅವುಗಳನ್ನು ಮುಚ್ಚದೆ ಮಸೂದೆ ಮೂಲಕ ಕೋಟ್ಯಂತರ ಮಂದಿಗೆ ಉದ್ಯೋಗ ನೀಡುವ ಬೀಡಿ ಉದ್ಯಮ ಮುಚ್ಚಲು ಹೊರಟಿದೆ ಎಂದು ಅವರು ಟೀಕಿಸಿದರು.
ಎಸ್‌.ಕೆ. ಬೀಡಿ ವರ್ಕರ್ಸ್‌ ಫೆಡರೇಶನ್‌ (ಸಿಐಟಿಯು) ನ ಅಧ್ಯಕ್ಷ ಕೆ. ಆರ್‌. ಶ್ರೀಯಾನ್‌, ಎಚ್‌ಎಂಎಸ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಬಿಎಂಎಸ್‌ ಮುಖಂಡ ಕೆ. ವಿಶ್ವನಾಥ ಶೆಟ್ಟಿ , ಜಿಲ್ಲಾ ಬೀಡಿ ಕಂಟ್ರಾಕ್ಟುದಾರರ ಸಂಘದ ಅಧ್ಯಕ್ಷ ಶಂಭು ನಾಯ್ಕ್‌, ಸಂಯುಕ್ತ ಜನತಾದಳದ ಮುಂದಾಳು ನಜೀರ್‌ ಉಳ್ಳಾಲ್‌ ರ್ಯಾಲಿಯ ನೇತೃತ್ವ ವಹಿಸಿದ್ದರು.

ಉಡುಪಿ ವರದಿ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹೊಗೆಸೊಪ್ಪಿನ ಉತ್ಪಾದನೆ ಮೇಲೆ ನಿರ್ಬಂಧ ಹೇರುವ ಸರಕಾರದ ಯತ್ನವನ್ನು ವಿರೋಧಿಸಿ ಉಡುಪಿಯಲ್ಲಿ ಗುರುವಾರ ಸಾವಿರಾರು ಬೀಡಿ ಕಾರ್ಮಿಕರು ಬೀಡಿ ಕೈಗಾರಿಕಾ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+