Get Updates
Get notified of breaking news, exclusive insights, and must-see stories!

ಕಾಶ್ಮೀರ ನಮ್ಮ ಜೀವನದ ಅವಿಭಾಜ್ಯ ಅಂಗ- ಪ್ರಧಾನಿ ವಾಜಪೇಯಿ

ನವದೆಹಲಿ : ‘ಜೆಹಾದ್‌ ಎಂದರೆ ಭಯೋತ್ಪಾದಕತೆಯಲ್ಲ . ಭಾರತ ಮತ್ತು ಪಾಕ್‌ ನಡುವಣ ದ್ವಿಪಕ್ಷೀಯ ಮಾತುಕತೆಗಳು ಯಶಸ್ಸು ಕಾಣಬೇಕಾದರೆ ಗಡಿ ಭಾಗಗಳಲ್ಲಿನ ಭಯೋತ್ಪಾದಕ ಕೃತ್ಯಗಳನ್ನು ಇಸ್ಲಮಾಬಾದ್‌ ನಿಲ್ಲಿಸಬೇಕು’.

ಆಗ್ರಾ ಶೃಂಗಸಭೆಯ ಕುರಿತು ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿ ಪ್ರತಿಕ್ರಿಯಿಸುತ್ತಿದ್ದರು. ಕಾಶ್ಮೀರ ಶಾಂತಿಯ ಕೊಳ್ಳ. ಕಾಶ್ಮೀರವೆಂದರೆ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಆಗಷ್ಟೇ ಪಾಕ್‌ನೊಂದಿಗೆ ಮಾತುಕತೆ ಅರ್ಥಪೂರ್ಣವಾಗಲು ಸಾಧ್ಯ ಎಂದು ಹೇಳಿದ ಅವರ 45 ನಿಮಿಷಗಳ ಮಾತುಗಳಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗೆಗೆ ಭಾರತದ ಆತಂಕ ಹಾಗೂ ಶಾಂತಿಯ ಬಗೆಗಿನ ಕಾಳಜಿ ಎದ್ದು ಕಾಣುತ್ತಿತ್ತು .

ಮುಗ್ಧರ ಹತ್ಯೆಯನ್ನು ಸ್ವಾತಂತ್ರ್ಯಕ್ಕಾಗಿ ಹೋರಾಟ ಎನ್ನುವಂತಿಲ್ಲ . ಇದೇ ರೀತಿ ಭಯೋತ್ಪಾದಕ ಕೃತ್ಯಗಳು ಮುಂದುವರಿದಲ್ಲಿ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಯಾವುದೇ ಸುಧಾರಣೆ ಸಾಧ್ಯವಾಗುವುದಿಲ್ಲ ಎಂದು ವಾಜಪೇಯಿ ಸ್ಪಷ್ಟ ಶಬ್ದಗಳಲ್ಲಿ ಹೇಳಿದರು.

ಪಾಕಿಸ್ತಾನ ಅಧ್ಯಕ್ಷ ಮುಷರ್ರಫ್‌ ಅವರು ಕಾಶ್ಮೀರ ಹೊರತು ಇತರ ಯಾವ ವಿಷಯಗಳ ಕುರಿತು ಚರ್ಚಿಸಲೂ ಆಸಕ್ತಿ ತೋರಲಿಲ್ಲ . ಭಯೋತ್ಪಾದಕತೆ ಸಮಸ್ಯೆಯನ್ನು ಪರಿಹರಿಸಲು ಸಾಧನವಲ್ಲ ಎನ್ನುವುದನ್ನು ಮುಷರ್ರಫ್‌ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ ವಾಜಪೇಯಿ, ಭಾರತವನ್ನು ತುಂಡರಿಸುವ ಪಾಕ್‌ ಪ್ರಯತ್ನಗಳಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದರು.

ಕಾಶ್ಮೀರ ಪ್ರಕರಣ ಸಾಧಾರಣವಾದುದಲ್ಲ , ಅದು ನಮ್ಮ ಭಾವನೆಗಳಿಗೆ ಸಂಬಂಧಿಸಿದುದು. ಪಾಕಿಸ್ತಾನ ಸೃಷ್ಟಿಸುತ್ತಿರುವ ದ್ವಿ ರಾಷ್ಟ್ರ ಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ, ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಹೊಂದುವುದು ಭಾರತದ ನೀತಿಯಾಗಿದೆ ಎಂದರು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+